Kannada News Next

udupi

ಉಡುಪಿ : ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದ ನೆನಪಿರಲಿ ನಟ ಪ್ರೇಮ್‌ ದಂಪತಿ

ಉಡುಪಿಯ ಶ್ರೀಕೃಷ್ಣ ಮಠದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವದ ಹಿನ್ನೆಲೆಯಲ್ಲಿ ನಟ ಪ್ರೇಮ್ ಅವರ ಭೇಟಿ ಕೂಡ ಗಮನ ಸೆಳೆಯಿತು.

By Arun Gundmi | ಅರುಣ್‌ ಗುಂಡ್ಮಿ Editor-in-Chief
Kannada Actor Pream Visit Udupi Krishna Mutt

ಉಡುಪಿ: ಕನ್ನಡ ಚಿತ್ರರಂಗದ ಜನಪ್ರಿಯ ನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು ದಂಪತಿ ಸಮೇತ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದರು.

Kannada Actor Pream Visit Udupi Krishna Mutt 2

ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಪ್ರೇಮ್ ದಂಪತಿಯನ್ನು ಮಠದ ಸಿಬ್ಬಂದಿ ಹಾಗೂ ಭಕ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪವಿತ್ರ ಕ್ಷೇತ್ರದ ಸನ್ನಿಧಿಯಲ್ಲಿ ಕೆಲಕಾಲ ಭಕ್ತಿಭಾವದಿಂದ ಕಳೆದ ದಂಪತಿ, ಶ್ರೀಕೃಷ್ಣನ ದರ್ಶನ ಪಡೆದ ಸಂತಸ ವ್ಯಕ್ತಪಡಿಸಿದರು.

ದರ್ಶನದ ಬಳಿಕ ಪ್ರೇಮ್ ದಂಪತಿ ಪರ್ಯಾಯ ಶ್ರೀ ಶೀರೂರು ಮಠದ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಪಾದರು ಪ್ರೇಮ್ ದಂಪತಿಗೆ ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Kannada Actor Pream Visit Udupi Krishna Mutt 1

ಉಡುಪಿಯ ಶ್ರೀಕೃಷ್ಣ ಮಠದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವದ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಭಕ್ತರು ಹಾಗೂ ಗಣ್ಯರು ನಿರಂತರವಾಗಿ ಆಗಮಿಸುತ್ತಿದ್ದು, ಇದೇ ಸಂದರ್ಭದಲ್ಲಿ ನಟ ಪ್ರೇಮ್ ಅವರ ಭೇಟಿ ಕೂಡ ಗಮನ ಸೆಳೆಯಿತು.

ಶ್ರೀಕೃಷ್ಣ ದೇವರ ದರ್ಶನದ ಬಳಿಕ ಮಠದ ಪವಿತ್ರ ವಾತಾವರಣ ಮತ್ತು ಧಾರ್ಮಿಕ ಪರಂಪರೆಯ ಕುರಿತು ಪ್ರೇಮ್ ದಂಪತಿ ಆಸಕ್ತಿಯಿಂದ ಮಾಹಿತಿ ಪಡೆದರು. ಸರಳವಾಗಿ ಮಠಕ್ಕೆ ಆಗಮಿಸಿದ ಪ್ರೇಮ್ ದಂಪತಿ, ಭಕ್ತಿಭಾವದಿಂದ ದೇವರ ದರ್ಶನ ಪಡೆದು ಶ್ರೀಪಾದರ ಆಶೀರ್ವಾದ ಸ್ವೀಕರಿಸಿ ಬಳಿಕ ಅಲ್ಲಿಂದ ತೆರಳಿದರು.