ಕಾರ್ಕಳ : ಕಾಂಗ್ರೆಸ್ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
ಒಂದೆಡೆ ವ್ಯಾಪಕವಾಗಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಮತ್ತೊಂದೆಡೆಯಲ್ಲಿ ನಾಲ್ಕು ವರ್ಷ ಕಳೆದರೂ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಿಲ್ಲ.
By ಅಶ್ವಥ್ ಆಚಾರ್ಯ | Ashwath Acharya
1 min read
ಕಾರ್ಕಳ : ಕರ್ನಾಟಕದ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯ ವಿರುದ್ದ ಶಾಸಕರಾಗಿರುವ ಕಾರ್ಕಳ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಕಳದ ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿ, ಆಡಳಿತ ವೈಫಲ್ಯವನ್ನು ಖಂಡಿಸಿತು. ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್ ಅವರು ಸರಕಾರ ದುರಾಡಳಿತವನ್ನು ಖಂಡಿಸಿದ್ದಾರೆ. ಕರ್ನಾಟಕಆರ್ಥಿಕವಾಗಿ ಕರ್ನಾಟಕ ಮೂರು ವರ್ಷ ಹಿಂದಕ್ಕೆ ಹೋಗಿದೆ. ಒಂದೆಡೆ ವ್ಯಾಪಕವಾಗಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಮತ್ತೊಂದೆಡೆಯಲ್ಲಿ ನಾಲ್ಕು ವರ್ಷ ಕಳೆದರೂ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಿಲ್ಲ. ಕಳೆದ ಏಳು ತಿಂಗಳಿನಿಂದ ವಯೋವೃದ್ದರಿಂದ ಮಾಶಾಸನ ಬಂದಿಲ್ಲ ಅಂತಾ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
6000 ರೇಷನ್ ಕಾರ್ಡ್ ರದ್ದು
ಕಳೆದ ನಾಲ್ಕು ವರ್ಷಗಳ ಕಾಲ ಬಜೆಟ್ ಮಂಡನೆ ಮಾಡಿದ್ದರು ಕೂಡ ಜನ ಸಾಮಾನ್ಯರ ಸಂಕಷ್ಟಕ್ಕೆ ಪರಿಹಾರವನ್ನೇ ನೀಡಿಲ್ಲ. ನಾಲ್ಕು ವರ್ಷ ಕಳೆಯುತ್ತಾ ಬಂದರೂ ಕೂಡ ಒಂದೇ ಒಂದು ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಿಲ್ಲ. ಆದರೆ ಸುಮಾರು 6000 ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದೆ. ಕಳೆದ ಏಳು ತಿಂಗಳಿನಿಂದ ವಯೋವೃದ್ದರಿಗೆ ಮಾಶಾಸನ ಲಭ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಉಡುಪಿಯೊಂದಲ್ಲೇ ಬರೋಬ್ಬರಿ 47477 ಜನರ ಪಿಂಚಣಿಯನ್ನು ಬಂದ್ ಮಾಡಿದೆ. ಇನ್ನು ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯ ಸರಕಾರ ಹಳ್ಳ ಹಿಡಿಸಿದ್ದು, ಪರಿಷ್ಕರಣೆಯ ಜನರನ್ನು ಗ್ರಹಲಕ್ಷ್ಮಿ ಯೋಜನೆಯಿಂದ ಕೈ ಬಿಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ವಸತಿ ಯೋಜನೆಗಳು ಬಂದಿದೆ ಎಂದು ಕಾಂಗ್ರೆಸ್ ನಾಯಕರು ಉತ್ತರ ನೀಡಬೇಕು ಎಂದು ಸವಾಲು ಹಾಕಿದ್ದಾರೆ.
ರಾಜ್ಯದ ಯೋಜನೆಗಳಿಗೆ ಸರ್ವರ್ ಸಮಸ್ಯೆ
ಬಿಜೆಪಿ ಸರಕಾರ ಅವಧಿಯಲ್ಲಿ ಕರ್ನಾಟಕದಲ್ಲಿ ಕಲ್ಲು ಮರಳಿಗೆ ಯಾವುದೇ ಅಭಾವ ಇರಲಿಲ್ಲ. ಆದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಟ್ಟಡ ಸಾಮಗ್ರಿಗಳ ಕೊರತೆಯಿಂದಾಗಿ, ಏಕಾಏಕಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ ದುಪ್ಪಟ್ಟಾಗಿದೆ. ಕೇಂದ್ರ ಯಾವುದೇ ಯೋಜನೆಯ ಅನುಷ್ಠಾನಕ್ಕೆ ಸರ್ವರ್ ಸಮಸ್ಯೆ ಆಗುತ್ತಿಲ್ಲ. ಆದರೆ ರಾಜ್ಯ ಯೋಜನೆಗಳಿಗೆ ಸರ್ವರ್ ಸಮಸ್ಯೆ ಆಗ್ತಾ ಇರೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟೆಲ್ಲಾ ವೈಫಲ್ಯವನ್ನ ಕಂಡಿರುವ ಸರಕಾರ ಜನ ವಿರೋಧಿಯಾಗಿ ಆರ್ಥಿಕವಾಗಿ ದಿವಾಳಿಯಾಗಿದೆ. ಜೀರೋ ಬ್ಯಾಲೆನ್ಸ್ ಸರಕಾರ ಆಶ್ವಾಸನೆಗಳ ಮೇಲೆ ಆಶ್ವಾಸನೆಗಳನ್ನು ನೀಡುತ್ತಾ ಬಂದಿದೆ, ಅನುಷ್ಠಾನ ಯಾವಾಗ ? ಜನರ ದಿಕ್ಕು ತಪ್ಪಿಸಲು ಎಸ್ಐಆರ್ ಮತ್ತು ವಂದೇ ಮಾತರಂ ಅನ್ನು ಕಾಂಗ್ರೆಸ್ ಬಳಸಿಕೊಳ್ಳುತಿದೆ. ಬಿಜೆಪಿ ಸರಕಾರದ ಆರೋಗ್ಯದಲ್ಲಿ ಪವರ್ ಕಟ್ ಇರಲಿಲ್ಲ, ಆದರೆ ಈಗ ಪವರ್ ಕಟ್ ನಿತ್ಯ ನೂತನವಾಗಿದೆ ಎಂದರು.
ಇನ್ನು ರಾಜ್ಯ ಸರಕಾರ 63000 ಜನರ ಬಗರ್ ಹುಕುಂ ಅರ್ಜಿಯನ್ನ ತಿರಸ್ಕಾರ ಮಾಡಿದೆ. ಅವರೆಲ್ಲಾ ಎಲ್ಲಿಗೆ ಹೋಗಬೇಕು. ಬಿಜೆಪಿ ಕಾರ್ಕಳ ಇಂದು ರಾಜ್ಯ ಸರಕಾರದ ವೈಫಲ್ಯದ ಕುರಿತಾಗಿ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದೆ, ಅಕ್ಟೋಬರ್ 26ರಂದು ರಾತ್ರಿ ಹಗಲು ಉಡುಪಿಯಲ್ಲಿ ಪ್ರತಿಭಟನೆಯನ್ನು ನಡೆಸಲಿದ್ದೇವೆ. ರಾಜ್ಯ ಸರಕಾರವನ್ನು ಬೀಳಿಸುವ ಆಲೋಚನೆ ನಮಗೆ ಇಲ್ಲ. ನಿಮಗೆ ಸರಕಾರ ನಡೆಸಲು ಆಗದೇ ಇದ್ರೆ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ ಸೇರಿದಂತೆ ಜಿಲ್ಲಾ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Topics

