Kannada News Next

udupi

ಉಳ್ತೂರು ಎಫ್‌ಎಸ್‌ಟಿಪಿ ವಿರುದ್ದ ಬುಗಿಲೆದ್ದ ಆಕ್ರೋಶ : ರಸ್ತೆ ತಡೆದು ಪ್ರತಿಭಟನೆ

ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉಳ್ಥೂರು ಎಂಬಲ್ಲಿ ಡಂಪಿಂಗ್‌ ಯಾರ್ಡ್‌ ನಿರ್ಮಿಸಲು ಜಾಗವೊಂದನ್ನು ಖರೀದಿ ಮಾಡಿತ್ತು.

By Arun Gundmi | ಅರುಣ್‌ ಗುಂಡ್ಮಿ Editor-in-Chief
Kundapura Ulthoor fstp plant protest villagers 2

ಕುಂದಾಪುರು : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ನಡೆಸಲು ಉದ್ದೇಶಿಸಿರುವ ಮಲತ್ಯಾಜ್ಯ ಘಟಕ ನಿರ್ಮಾಣ ಮಾಡುವುದನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ತೂರಿನಲ್ಲಿ ನಡೆದಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉಳ್ಥೂರು ಎಂಬಲ್ಲಿ ಡಂಪಿಂಗ್‌ ಯಾರ್ಡ್‌ ನಿರ್ಮಿಸಲು ಜಾಗವೊಂದನ್ನು ಖರೀದಿ ಮಾಡಿತ್ತು. ಆದರೆ ಗ್ರಾಮಸ್ಥರ ವಿರೋಧದ ಕಾರಣದಿಂದಾಗಿ ಯೋಜನೆಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಕೈಬಿಟ್ಟಿತ್ತು.

Kundapura Ulthoor fstp plant protest villagers 1

ಆದರೆ ಡಂಪಿಂಗ್‌ ಯಾರ್ಡ್‌ ನಿರ್ಮಿಸೋದಕ್ಕೆ ಹೊರಡಿರುವ ಜಾಗದಲ್ಲಿಯೇ ಇದೀಗ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮುಂದಾಗಿತ್ತು. ಆದರೆ ಗ್ರಾಮಸ್ಥರು ಮಲತ್ಯಾಜ್ಯ ಘಟಕ ನಿರ್ಮಾಣವನ್ನೂ ವಿರೋಧಿಸಿದ್ದರು. ಹೀಗಾಗಿ ಪೊಲೀಸರ ಬಿಗಿ ಭದ್ರತೆಯಲ್ಲಿ ಮಲತ್ಯಾಜ್ಯ ಘಟಕದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರು.

Kundapura Ulthoor fstp plant protest villagers

ಉಳ್ತೂರು ಗ್ರಾಮಸ್ಥರು ಆರಂಭದಲ್ಲಿ ಮಲತ್ಯಾಜ್ಯ ಘಟಕ ನಿರ್ಮಿಸಲು ಉದ್ದೇಶಿಸಿರುವ ಜಾಗಕ್ಕೆ ತೆರಳುವ ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದ್ದರು. ನಂತರ ಪ್ರತಿಭಟನಾಕಾರರು ಘಟಕ ನಿರ್ಮಾಣದ ಸ್ಥಳಕ್ಕೆ ತೆರಳಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿತ್ತು.