Photo Storiesphoto stories2h ago5 photos

ಹೊಳೆಯುವ ತ್ವಚೆಗೆ ಸೌತೆಕಾಯಿ ಫೇಸ್‌ ಪ್ಯಾಕ್‌ ! ಟ್ಯಾನಿಂಗ್‌, ಕಲೆಗಳಿಂದ ಮುಕ್ತಿ

ಮುಖದ ಅಂದ ಹೆಚ್ಚಿಸಲು ಸೌತೆಕಾಯಿ ಬಹಳ ಪ್ರಯೋಜನಕಾರಿ. ಚರ್ಮವನ್ನು ಸದಾ ಹೈಡ್ರೇಟ್‌ ಮಾಡಿ, ಟ್ಯಾನಿಂಗ್‌ ಮತ್ತು ಕಲೆಗಳು ದೂರಮಾಡಲು ಸೌತೆಕಾಯಿಯ ಈ ಫೇಸ್‌ ಪ್ಯಾಕ್‌ ಬಳಸಿ.

By archana

  1. cucumber face pack1/5

    Photo 1/5

    ಸೌತೆಕಾಯಿ ಅಲೋವೆರಾ ಫೇಸ್‌ಪ್ಯಾಕ್‌

    ನಿಮ್ಮ ಚರ್ಮ ಒಣಗಿ ನಿರ್ಜೀವವಾಗಿದ್ದರೆ ಅದನ್ನು ಹೈಡ್ರೇಟ್‌ ಮಾಡಲು ಈ ಫೇಸ್‌ಪ್ಯಾಕ್‌ ಸೂಕ್ತವಾಗಿದೆ. 2 ಚಮಚ ಸೌತೆಕಾಯಿ ರಸಕ್ಕೆ 1 ಚಮಚ ತಾಜಾ ಅಲೋವೆರಾ ಜೆಲ್‌ ಬೆರೆಸಿ ಪೇಸ್ಟ್‌ ತಯಾರಿಸಿ. ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ. ಸುಮಾರು 15–20 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಚರ್ಮವನ್ನು ಆಳವಾಗಿ ಹೈಡ್ರೇಟ್‌ ಮಾಡಿ, ಹೊಸ ಕಾಂತಿ ನೀಡುತ್ತದೆ.

  2. cucumber curd face pack2/5

    Photo 2/5

    ಸೌತೆಕಾಯಿ – ಮೊಸರು ಫೇಸ್‌ ಪ್ಯಾಕ್‌

    ಮೊಸರಿನಲ್ಲಿರುವ ಲ್ಯಾಕ್ಟಿಕ್‌ ಆಮ್ಲ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. 2 ಚಮಚ ಸೌತೆಕಾಯಿ ರಸಕ್ಕೆ 1 ಚಮಚ ತಾಜಾ ಮೊಸರು ಸೇರಿಸಿ ಪೇಸ್ಟ್‌ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದು ತೆರೆದ ರಂಧ್ರಗಳನ್ನು ಬಿಗಿಗೊಳಿಸುತ್ತದೆ. ಮೊಡವೆಗಳಿಂದ ಪರಿಹಾರ ನೀಡುತ್ತದೆ.

  3. cucumber besan face pack3/5

    Photo 3/5

    ಸೌತೆಕಾಯಿ, ಕಡಲೆಹಿಟ್ಟು ಮತ್ತು ಅರಿಶಿನ ಫೇಸ್‌ ಪ್ಯಾಕ್‌

    ಕಡಲೆಹಿಟ್ಟು ಚರ್ಮವನ್ನು ಶುದ್ದ ಮಾಡಿದರೆ, ಅರಿಶಿಣ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. 2 ಚಮಚ ಸೌತೆಕಾಯಿ ರಸಕ್ಕೆ 1 ಚಮಚ ಕಡಲೆ ಹಿಟ್ಟು ಮತ್ತು ಚಿಟಿಕೆ ಅರಿಶಿಣ ಸೇರಿಸಿ ಪೇಸ್ಟ್‌ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ನಿಧಾನವಾಗಿ ಸ್ಕ್ರಬ್‌ ಮಾಡಿ. ನಂತರ ನೀರಿನಿಂದ ತೊಳೆಯಿರಿ. ಚರ್ಮಕ್ಕೆ ಹೊಳಪು ನೀಡುವುದರ ಜೊತೆಗೆ ಕಲೆಗಳನ್ನು ನಿವಾರಿಸುತ್ತದೆ.

  4. cucumber honey face pack4/5

    Photo 4/5

    ಸೌತೆಕಾಯಿ – ಜೇನುತುಪ್ಪ ಫೇಸ್‌ ಪ್ಯಾಕ್‌

    ಜೇನುತುಪ್ಪ ನೈಸರ್ಗಿಕ ಮಾಯಿಶ್ಚರೈಸರ್‌ ಮತ್ತು ಆಂಟಿಒಕ್ಸಿಡೆಂಟ್‌ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಬಿಗಿಗೊಳಿಸಿ ಹೊಳಪು ನೀಡಲು ಸಹಾಯ ಮಾಡುತ್ತದೆ. 2 ಚಮಚ ಸೌತೆಕಾಯಿ ರಸಕ್ಕೆ 1 ಚಮಚ ಶುದ್ಧ ಜೇನುತುಪ್ಪ ಬೆರೆಸಿ ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15–20 ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

  5. cucumber lemon face pack5/5

    Photo 5/5

    ಸೌತೆಕಾಯಿ – ನಿಂಬೆ ರಸ ಫೇಸ್‌ ಪ್ಯಾಕ್‌

    ನಿಂಬೆ ಹಣ್ಣಿನಲ್ಲಿ ವಿಟಮಿನ್‌ ಸಿ ಅಧಿಕವಾಗಿದ್ದು, ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. 2 ಚಮಚ ಸೌತೆಕಾಯಿ ರಸಕ್ಕೆ ಅರ್ಧ ಚಮಚ ನಿಂಬೆ ರಸ ಸೇರಿಸಿ. ಅದನ್ನು ಹತ್ತಿಯ ಉಂಡೆಯಿಂದ ನಿಮ್ಮ ಮುಖಕ್ಕೆ ಹಚ್ಚಿ. ಸುಮಾರು 15–20 ನಿಮಿಷ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಕಪ್ಪು ಕಲೆಗಳು ದೂರವಾಗಿ, ಚರ್ಮದ ಹೊಳಪು ಹೆಚ್ಚುತ್ತದೆ.

ಮುಖಪುಟ