Photo Storiesphoto stories2h ago6 photos

ನಾಳೆಯೇ ಶ್ರೀಕೃಷ್ಣ ಜನ್ಮಾಷ್ಟಮಿ : ಬಾಲ ಗೋಪಾಲನ ಸ್ವಾಗತಕ್ಕೆ ಇಲ್ಲಿದೆ ರಂಗು ರಂಗಿನ ರಂಗೋಲಿ

ಜನ್ಮಾಷ್ಟಮಿ ಆಚರಿಸಲು ಯಾವ ರಂಗೋಲಿ ಹಾಕಬೇಕು ಎಂಬ ಯೋಚನೆಯಲ್ಲಿದ್ದರೆ ಇಲ್ಲಿದೆ ನೋಡಿ ಶ್ರೀಕೃಷ್ಣನ ಜನ್ಮದಿನಕ್ಕೆ ಸರಿಹೊಂದುವ ಸುಂದರ ರಂಗೋಲಿಗಳು...

By archana

  1. janmashtami rangoli 11/6

    Photo 1/6

    ಶ್ರೀಕೃಷ್ಣ ಜನ್ಮಾಷ್ಟಮಿ 2026

    ನಾಳೆಯೇ ಶ್ರೀಕೃಷ್ಣ ಜನ್ಮಾಷ್ಟಮಿ. ಬಾಲ ಕೃಷ್ಣನ ಸ್ವಾಗತಕ್ಕೆ ಬಹುತೇಕ ಎಲ್ಲರ ಮನೆ ಸಜ್ಜಾಗಿದೆ. ಸಿಹಿ ತಿಂಡಿ, ಪೂಜಾ ಸಾಮಗ್ರಿಗಳನ್ನು ಜೋಡಿಸಿಕೊಳ್ಳಲಾಗಿದೆ. ಮನೆಯ ಮುಂದಿನ ಹಾಗೂ ದೇವರ ಮನೆಯ ಸುಂದರ ರಂಗೋಲಿ ಹಬ್ಬದ ಸೊಬಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾಳೆ ಜನ್ಮಾಷ್ಟಮಿಗೆ ಚಿತ್ರಿಸಬಹುದಾದ ಸರಳ ಆಕರ್ಷಕ ರಂಗೋಲಿಗಳು ಇಲ್ಲಿವೆ. (PC : Google)

  2. janmashtami rangoli 22/6

    Photo 2/6

    ಜನ್ಮಾಷ್ಟಮಿಗೆ ಸಿಂಪಲ್‌ ರಂಗೋಲಿ

    ಈ ವರ್ಷ ಸೆಪ್ಟೆಂಬರ್‌ 4 ರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಬಾಲಗೋಪಾಲನನ್ನು ಸ್ವಾಗತಿಸುವ ರಂಗೋಲಿಯನ್ನು ಮನೆಯ ಮುಂದೆ ಹಾಗೂ ದೇವರಮನೆಯಲ್ಲಿ ಹಾಕಬಹುದು. (PC: Google)

  3. janmashtami rangoli 33/6

    Photo 3/6

    ಸುಂದರ ದಹಿ ಹಂಡಿಯ ರಂಗೋಲಿ

    ಜನ್ಮಾಷ್ಟಮಿ ಆಚರಣೆಯಲ್ಲಿ ದಹಿ ಹಂಡಿಗೆ ಪ್ರಮುಖ ಸ್ಥಾನ. ಹಾಗಾಗಿ ಸುಂದರ ದಹಿ ಹಂಡಿಯ ರಂಗೋಲಿಯನ್ನು ಹಾಕಬಹುದು. (PC: Google)

  4. janmashtami rangoli 44/6

    Photo 4/6

    ಕೊಳಲನೂದುತ ಬಂದನೆ

    ಶ್ರೀಕೃಷ್ಣನಿಗೆ ಕೊಳಲೆಂದರೆ ಬಹಳ ಪ್ರಿಯ. ಹಾಗಾಗಿ ಬಣ್ಣ ಬಣ್ಣದ ರಂಗೋಲಿ ಪುಡಿಯಿಂದ ಕೊಳಲನ್ನು ಚಿತ್ರಿಸಬಹುದು. ಅದು ಆಕರ್ಷಕವಾಗಿ ಕಾಣಿಸುವುದರ ಜೊತೆಗೆ ಎಲ್ಲರ ಕಣ್ಮನ ಸೆಳೆಯುತ್ತದೆ. (PC: Google)

  5. janmashtami rangoli 55/6

    Photo 5/6

    ನವಿಲು ಗರಿ ರಂಗೋಲಿ

    ಬಾಲಗೋಪಾಲನಿಗೆ ಪ್ರಿಯವಾದ ಇನ್ನೊಂದು ವಸ್ತು ನವಿಲು ಗರಿ. ನವಿಲು ಗರಿ ಇರುವ ಸುಂದರ ರಂಗೋಲಿ ಚಿತ್ರಿಸಬಹುದು. ಜನ್ಮಾಷ್ಟಮಿಯ ಆಚರಣಗೆ ಇದು ಸುಂದರ ಅರ್ಥ ನೀಡಬಲ್ಲದು. (PC: Google)

  6. janmashtami rangoli 66/6

    Photo 6/6

    ಸಿಂಪಲ್‌ ಆಗಿ ಈ ರಂಗೋಲಿ

    ನೀವು ಅತ್ಯಂತ ಸರಳವಾಗಿ ಹಾಗೂ ಅಷ್ಟೇ ಆಕರ್ಷಕವಾಗಿ ರಂಗೋಲಿ ಚಿತ್ರಿಸಬೇಕೆಂದಿದ್ದರೆ ವೃತ್ತಾಕಾರದ ಸರಳ ರಂಗೋಲಿ ಆಯ್ದುಕೊಳ್ಳಬಹುದು. ವೃತ್ತದೊಳಗೆ ಗಾಢ ಬಣ್ಣ ತುಂಬಿ ಅದರೊಳಗೆ ಕೊಳಲು, ನವಿಲು ಗರಿ ಚಿತ್ರಿಸಬಹುದು. (PC: Google)

ಮುಖಪುಟ