Photo Storiesphoto stories3h ago7 photos

Toxic : ಬಿರುಗಾಳಿ ಎಬ್ಬಿಸಿದ ಯಶ್‌ ನಟನೆಯ ಟಾಕ್ಸಿಕ್‌

ಬಾಲಿವುಡ್ ನಟಿ ಕಿಯಾರ ಅಡ್ವಾಣಿ, ನಯನತಾರಾ, ಹಾಲಿವುಡ್‌ ನಟಿ ಹುಮಾ ಖುರೇಷಿ, ರುಕ್ಮಿಣಿ ವಸಂತ್‌, ಹಾಲಿವುಡ್‌ ಖ್ಯಾತ ನಟಿ ತಾರಾ ಸುತಾರಿಯಾ ಕೂಡ ಯಶ್‌ಗೆ ಸಾಥ್‌ ಕೊಟ್ಟಿದ್ದಾರೆ.

By arun

  1. rocking star yash toxic movie photo story 31/7

    Photo 1/7

    ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಟೀಸರ್‌ ಸದ್ಯ ಬಿಡುಗಡೆಯಾಗಿದ್ದು, ಸಿನಿಮಾ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಕೆವಿಎನ್‌ ಪ್ರೊಡಕ್ಷನ್ಸ್‌ ಮತ್ತು ಮಾಸ್ಟರ್‌ಮೈಂಡ್‌ ಕ್ರಿಯೇಷನ್ಸ್‌ ಅಡಿಯಲ್ಲಿ ಮೂಡಿ ಬರ್ತಾ ಇರುವ ಸಿನಿಮಾ ಇದಾಗಿದೆ.

    ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌

  2. rocking star yash toxic movie photo story 22/7

    Photo 2/7

    ಕೆಜಿಎಫ್‌ ಸಿನಿಮಾದ ಬಳಿಕ ನಟ ಯಶ್‌ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್‌ನಲ್ಲಿ ಅಬ್ಬರಿಸಿದ್ದ ಯಶ್‌ ಟಾಕ್ಸಿಕ್ ಸಿನಿಮಾದ ಖಡಕ್‌ ಲುಕ್‌ ಎಲ್ಲರನ್ನೂ ರೊಚ್ಚಿಗೆಬ್ಬಿಸಿದೆ.

    ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌

  3. rocking star yash toxic movie photo story 63/7

    Photo 3/7

    ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಜೊತೆಗೆ ನಯನತಾರಾ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಹಾಲಿವುಡ್‌ ನಟಿ ಹುಮಾ ಖುರೇಷಿ, ಸಪ್ತ ಸಾಗರದಾಚೆ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್‌, ಹಾಲಿವುಡ್‌ ಖ್ಯಾತ ನಟಿ ತಾರಾ ಸುತಾರಿಯಾ ಕೂಡ ಯಶ್‌ಗೆ ಸಾಥ್‌ ಕೊಟ್ಟಿದ್ದಾರೆ.

    rocking star yash toxic movie photo story 6

  4. rocking star yash toxic movie photo story 44/7

    Photo 4/7

    A Fairy Tale for Grown-ups ಅನ್ನೋ ಟ್ಯಾಗ್‌ಲೈನ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಹಳೆಯ ಮಾದರಿಯ ಆಕ್ಷನ್ ಸಿನಿಮಾಗಳಿಗಿಂತ ಭಿನ್ನವಾದ ಡಾರ್ಕ್ ಗ್ಯಾಂಗ್‌ಸ್ಟರ್ ಅಥವಾ ಆಕ್ಷನ್ ಕಥಾಹಂದರ ಹೊಂದಿರಲಿದೆ.

    rocking star yash toxic movie photo story 4

  5. rocking star yash toxic movie photo story 55/7

    Photo 5/7

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ ದಾಸ್‌ ನಿರ್ದೇಶನದ ಸಿನಿಮಾಕ್ಕೆ ಯಶ್‌ ಹಾಗೂ ಮೋಹನ್‌ ದಾಸ್‌ ಜೊತೆಯಾಗಿ ಚಿತ್ರಕಥೆ ಬರೆದಿದ್ದಾರೆ.

    rocking star yash toxic movie photo story 5

  6. rocking star yash toxic movie photo story 16/7

    Photo 6/7

    ರವಿ ಬಸ್ರೂರು ಅವರ ಸಂಗೀತ ನಿರ್ದೇಶನಕ್ಕೆ ವಿಶಾಲ್‌ ಮಿಶ್ರಾ, ತನಿಷ್ಕ ಬಾಗ್ವಿ ಬ್ಯಾಕ್ ಗ್ರೌಂಡ್‌ ಸ್ಕೋರ್ ಆಗಿ ಕೆಲಸ ಮಾಡಿದ್ದಾರೆ. ಹಾಲಿವುಡ್‌ನ ಖ್ಯಾತ ಜೆಜೆ ಪೆರ್ರಿ ಮತ್ತು ಅನ್ಬರಿವ್‌ ಸಾಹಸ ನಿರ್ದೇಶನ ಮಾಡಿದ್ದಾರೆ.

  7. Toxic Kannada movie in Raveena Tendon7/7

    Photo 7/7

    ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಟಾಕ್ಸಿಕ್‌ ಸಿನಿಮಾ ಇದೇ ಅಗಸ್ಟ್‌ 26ರಂದು ವಿಶ್ವದಾದ್ಯಂತ ರಿಲೀಸ್‌ ಆಗ್ತಿದೆ. ಭಾರತೀಯ ಚಿತ್ರರಂಗದಲ್ಲಿಯೇ ಇದು ಬಿಗ್‌ ಬಜೆಟ್‌ ಹೊಂದಿರುವ ಸಿನಿಮಾ ಎನಿಸಿಕೊಂಡಿದೆ.

    Toxic Kannada movie in Raveena Tendon

ಮುಖಪುಟ