Photo Storiesphoto stories3h ago6 photos

ಬೆಡ್‌ ಕೆಳಗೆ ಈ 5 ವಸ್ತುಗಳನ್ನು ಇಡುವ ಅಭ್ಯಾಸ ನಿಮಗಿದ್ಯಾ? ನಿಮ್ಮೆಲ್ಲಾ ಪ್ರಾಬ್ಲಮ್‌ಗೆ ಇದೇ ಕಾರಣ ಎನ್ನುತ್ತದೆ ವಾಸ್ತು!

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆ ಬಹಳ ಮಹತ್ವದ್ದಾಗಿದೆ. ಅಲ್ಲಿ ಮಾಡುವ ಚಿಕ್ಕ ತಪ್ಪುಗಳೂ ಸಂತೋಷದ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

By archana

  1. mattress vastu tips 11/6

    Photo 1/6

    ಬೆಡ್‌ ಕೆಳಗೆ ಈ 5 ವಸ್ತುಗಳನ್ನು ಇಡುವ ಅಭ್ಯಾಸ ನಿಮಗಿದ್ಯಾ? ನಿಮ್ಮೆಲ್ಲಾ ಪ್ರಾಬ್ಲಮ್‌ಗೆ ಇದೇ ಕಾರಣ ಎನ್ನುತ್ತದೆ ವಾಸ್ತು!

    ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ವಸ್ತುಗಳನ್ನು ಅದರದೇ ಆದ ಜಾಗದಲ್ಲಿ ಇಡಬೇಕು. ಮರೆತೂ ಕೂಡಾ ತಪ್ಪು ಜಾಗದಲ್ಲಿ ಇಡಬಾರದು. ಇದರಿಂದ ಮನೆಯಲ್ಲಿನ ಸಕಾರಾತ್ಮಕ ಶಕ್ತಿ ದೂರವಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ನೀವು ಮಾಡುವ ಅನೇಕ ಸಣ್ಣಪುಟ್ಟ ತಪ್ಪುಗಳು ನಿಮ್ಮ ಸಂತೋಷದ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆ ಬಹಳ ಮಹತ್ವದ್ದಾಗಿದೆ. ಇದು ನಮ್ಮ ಮನಸ್ಸು ಮತ್ತು ನಿದ್ದೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಕೆಲಸ ಸುಲಭವಾಗಲೆಂದು ಕೆಲವು ವಸ್ತುಗಳನ್ನು ತಮ್ಮ ಬೆಡ್‌ ಕೆಳಗೆ ಇಟ್ಟುಕೊಳ್ಳುತ್ತಾರೆ. ಹಾಗೆ ಇಟ್ಟುಕೊಳ್ಳುವ ಕೆಲವು ವಸ್ತುಗಳು, ಸಂಪೂರ್ಣವಾಗಿ ಜೀವನವನ್ನೇ ಬದಲಿಸುತ್ತವೆ. ನಕಾರಾತ್ಮಕ ಶಕ್ತಿ ಹೆಚ್ಚಾಗಿ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತವೆ. ಹಾಗಾದರೆ ಬೆಡ್‌ ಕಳಗೆ ಯಾವ ವಸ್ತುಗಳನ್ನು ಇಡಬಾರದು? ಇಲ್ಲಿದೆ ನೋಡಿ.

  2. vastu tips mattress 32/6

    Photo 2/6

    ವೈರ್‌ ಮತ್ತು ಚಾರ್ಜರ್‌ಗಳು

    ವಾಸ್ತು ನಿಯಮದಂತೆ ಎಂದಿಗೂ ವೈರ್‌ ಮತ್ತು ಚಾರ್ಜರ್‌ಗಳನ್ನು ನಿಮ್ಮ ಬೆಡ್‌ ಕೆಳಗೆ ಇಡಬೇಡಿ. ಇದು ಅಶುಭವನ್ನು ತರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ನಿದ್ದೆಯ ಮೇಲೆ ಗಾಢ ಪರಿಣಾಮ ಬೀರುವುದಲ್ಲದೇ ನಿಮ್ಮ ಮನಸ್ಸಿನ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

  3. vastu tips mattress 23/6

    Photo 3/6

    ಹಳೆಯ ಅಥವಾ ಹರಿದ ಬಟ್ಟೆ

    ಹಳೆಯ ಬಟ್ಟೆ ಅಥವಾ ಸ್ವಲ್ಪ ಹರಿದ ಬಟ್ಟೆಗಳು ಯಾವುದೋ ಕೆಲಸಕ್ಕೆ ಬೇಕು ಎಂದು ಬೆಡ್‌ ಕೆಳಗೆ ಇಡುವುದನ್ನು ತಪ್ಪಿಸಿ. ಇದರಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ.

  4. vastu tips mattress 44/6

    Photo 4/6

    ಹಳೆಯ ರಶೀದಿ ಮತ್ತು ಕಾಗದಗಳು

    ನಿಮ್ಮ ಬೆಡ್‌ ಕೆಳಗೆ ಹಳೆಯ ಪೇಪರ್‌ ಅಥವಾ ರಶೀದಿಗಳನ್ನು ಇಟ್ಟಿದ್ದರೆ ಅವುಗಳನ್ನು ಇಂದೇ ತೆಗೆದುಹಾಕಿ. ಅವಶ್ಯಕ ರಶೀದಿ ಮತ್ತು ಕಾಗದಗಳನ್ನು ಬೇರೆಡೆಗೆ ಅಚ್ಚುಕಟ್ಟಾಗಿ ಇಟ್ಟಿಕೊಳ್ಳಿ. ಅನಗತ್ಯವಾದವುಗಳನ್ನು ಎಸೆಯಿರಿ.

  5. mattress vastu tips 65/6

    Photo 5/6

    ಔಷಧಿಗಳು

    ಸಾಮಾನ್ಯವಾಗಿ ಜನರು ಮಾತ್ರೆಗಳನ್ನು ಬೆಡ್‌ ಕೆಳಗೆ ಇಡುತ್ತಾರೆ. ಸಮಯಕ್ಕೆ ಸರಿಯಾಗಿ ಸಿಗುತ್ತದೆ ಎಂದು ಹಾಗೆ ಮಾಡುವುದು ತಪ್ಪು ಎಂದು ಶಾಸ್ತ್ರ ಹೇಳುತ್ತದೆ. ಬೆಡ್ ಕೆಳಗೆ ಔಷಧಿಗಳನ್ನು ಇಡುವುದು ನಕಾರಾತ್ಮಕತೆಗೆ ಕಾರಣವಾಗಿದೆ ಎಂದು ವಾಸ್ತು ನಿಯಮ ನಂಬಿದೆ.

  6. vastu tips mattress 56/6

    Photo 6/6

    ಚೂಪಾದ ವಸ್ತುಗಳು

    ಕೆಲವರಿಗೆ ಹಾಸಿಗೆಯ ಕೆಳಗೆ ಚಾಕು, ಕತ್ತರಿಯಂತಹ ಚೂಪಾದ ವಸ್ತುಗಳನ್ನು ಇಡುವ ಅಭ್ಯಾಸವಿರುತ್ತದೆ. ಅವುಗಳು ಮನೆಯಲ್ಲಿ ಅನಗತ್ಯ ಜಗಳ, ಉದ್ವಿಗ್ನತೆಗೆ ಕಾರಣವಾಗುತ್ತವೆ. ಕ್ಷುಲ್ಲಕ ವಿಷಯಗಳಿಗೆ ವಾದ, ಅಶಾಂತಿಗೂ ಕಾರಣವಾಗುತ್ತದೆ. ಹಾಗಾಗಿ ಚೂಪಾದ ವಸ್ತುಗಳನ್ನು ಇಡಬಾರದು ಎಂದು ಶಾಸ್ತ್ರ ಹೇಳುತ್ತದೆ.

ಮುಖಪುಟ