ಸಂಪತ್ತು ವೃದ್ಧಿ ಮಾಡುವ ಸಸ್ಯಗಳು : ಮನೆಯ ಈ ದಿಕ್ಕಿನಲ್ಲಿ ಬೆಳೆಸುವುದನ್ನು ಮರೆಯಬೇಡಿ
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸಸ್ಯಗಳು ಧನಾತ್ಮಕ ಶಕ್ತಿ ಹೆಚ್ಚಿಸಿ, ಮನೆಯಲ್ಲಿ ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತವೆ.
By archana
1/6
Photo 1/6
ಸಂಪತ್ತು ವೃದ್ಧಿ ಮಾಡುವ ಸಸ್ಯಗಳು : ಮನೆಯ ಈ ದಿಕ್ಕಿನಲ್ಲಿ ಬೆಳೆಸುವುದನ್ನು ಮರೆಯಬೇಡಿ
ವಾಸ್ತು ಶಾಸ್ತ್ರವು ನಿಸರ್ಗದ ತತ್ವಗಳಿಗೆ ಬಹಳ ಮಹತ್ವ ನೀಡಿದೆ. ಅದರಲ್ಲೂ ವಿಶೇಷವಾಗಿ ದಿಕ್ಕುಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿವೆ. ಪ್ರತಿಯೊಂದು ದಿಕ್ಕಿಗೂ ಅದರದೇ ಆದ ನಿಯಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ, ಸಕಾರಾತ್ಮಕ ಶಕ್ತಿಯ ಹರಿವು ಎಲ್ಲಡೆ ಹರಿಯುತ್ತದೆ. ಆ ದಿಕ್ಕೇ ಆಗ್ನೇಯ ದಿಕ್ಕು. ಇದು ಹಣಕ್ಕೆ ಸಂಬಂಧಿಸಿದ ದಿಕ್ಕು ಎನ್ನಲಾಗಿದೆ. ವಾಸ್ತು ನಿಯಮಗಳ ಪ್ರಕಾರ ಈ ದಿಕ್ಕಿನಲ್ಲಿ ಯಾವ ಸಸ್ಯಗಳನ್ನು ನೆಡಬೇಕು ಎಂದು ನೋಡೋಣ.
2/6
Photo 2/6
ಮನಿ ಪ್ಲಾಂಟ್
ವಾಸ್ತು ಪ್ರಕಾರ ಮನಿ ಪ್ಲಾಂಟ್ ಅನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಇದರಿಂದ ಮನೆಗೆ ಶುಭವಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿ ಸುಖ, ಸಮೃದ್ಧಿ ನೆಲೆಸುತ್ತದೆ. ಯಾವುದೇ ರೀತಿಯ ಅನಾವಶ್ಯಕ ಆರ್ಥಿಕ ನಷ್ಟ ಸಂಭವಿಸುವುದಿಲ್ಲ. ಆದರೆ ಮನಿ ಪ್ಲಾಂಟ್ ಬಳ್ಳಿಗಳು ನೆಲಕ್ಕೆ ತಾಕದಂತೆ ನೋಡಿಕೊಳ್ಳಿ.
3/6
Photo 3/6
ಜೇಡ್ ಪ್ಲಾಂಟ್
ವಾಸ್ತು ಶಾಸ್ತ್ರದಲ್ಲಿ ಜೇಡ್ ಸಸ್ಯವನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿ ನೋಡಲಾಗುತ್ತದೆ. ವಾಸ್ತು ನಂಬಿಕೆಯ ಪ್ರಕಾರ ಈ ಸಸ್ಯವನ್ನು ಆಗ್ನೇಯ ದಿಕ್ಕಿನಲ್ಲಿ ಬೆಳೆಸುವುದರಿಂದ ವ್ಯಾಪಾರದಲ್ಲಿ ಬೆಳವಣಿಗೆ ಮತ್ತು ಆರ್ಥಿಕವಾಗಿ ಯಶಸ್ಸು ಬರುತ್ತದೆ.
4/6
Photo 4/6
ಲಕ್ಕೀ ಬ್ಯಾಂಬೋ
ಆಗ್ನೇಯ ದಿಕ್ಕಿಗೆ ಬೆಳೆಸಬಹುದಾದ ಸಸ್ಯಗಳ ಸಾಲಿಗೆ ಲಕ್ಕೀ ಬ್ಯಾಂಬೋ ಗಿಡವೂ ಸೇರಿದೆ. ಆಗ್ನೇಯ ದಿಕ್ಕಿನಲ್ಲಿ ಒಂದು ಗಾಜಿನ ಪ್ರಾತ್ರೆಯಲ್ಲಿ ಈ ಗಿಡವನ್ನು ಬೆಳೆಸುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ. ಇದು ಮನೆ ಮತ್ತು ವ್ಯಾಪಾರದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
5/6
Photo 5/6
ಅರೆಕಾ ಪಾಮ್
ಈ ಸಸ್ಯವನ್ನು ಆಗ್ನೇಯ ದಿಕ್ಕಿಗೆ ನೆಡುವುದು ಬಹಳ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಈ ಗಿಡವು ಮನೆಯಲ್ಲಿಯ ನಕಾರಾತ್ಮಕ ಶಕ್ತಿ ಹೋಗಲಾಡಿಸಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಇದು ಮನೆಯ ವಾತಾವರಣವನ್ನು ಶಾಂತವಾಗಿಡಿಸಲು ಮತ್ತು ಆರ್ಥಿಕ ಪ್ರಗತಿ ಕಾಣಲು ಸಹಾಯ ಮಾಡುತ್ತದೆ.
6/6
Photo 6/6
ದಾಳಿಂಬೆ ಗಿಡ
ನಿಮ್ಮ ಮನೆಯ ಬಾಲ್ಕನಿ ಅಥವಾ ತೋಟದಲ್ಲಿ ದಾಳಿಂಬೆ ಗಿಡವನ್ನು ಬೆಳೆಸುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಇದನ್ನು ಆಗ್ನೇಯ ದಿಕ್ಕಿಗೆ ನೆಡಬೇಕು. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ.