ಬಿಜೆಪಿ ರಾಜ್ಯಸಭೆ, ವಿಧಾನಪರಿಷತ್ ಟಿಕೆಟ್ ಘೋಷಣೆ: ಸುಮಲತಾ, ದೇವೇಗೌಡರಿಗೆ ನಿರಾಸೆ; ಅಚ್ಚರಿಯ ಅಭ್ಯರ್ಥಿಗಳಿಗೆ ಮಣೆ!

ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ತಡರಾತ್ರಿ ರಾಜ್ಯಸಭೆ ಹಾಗೂ ರಾಜ್ಯ ವಿಧಾನಪರಿಷತ್​ ಚುನಾವಣೆಗೆ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ

ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ತಡರಾತ್ರಿ ರಾಜ್ಯಸಭೆ ಹಾಗೂ ರಾಜ್ಯ ವಿಧಾನಪರಿಷತ್​ ಚುನಾವಣೆಗೆ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ರಾಜ್ಯಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರಿಗೆ ಟಿಕೆಟ್​ ಕೈತಪ್ಪಿದೆ. ಹಾಗೂ ಸುಮಲತಾ ಅಂಬರೀಶ್​ ಅವರಿಗೂ ರಾಜ್ಯಸಭಾ ಟಿಕೆಟ್​ ಮಿಸ್​ ಆಗಿದೆ.

ಬಿಜೆಪಿ – ಜೆಡಿಎಸ್​ ಮೈತ್ರಿ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರನ್ನು ಪರಿಗಣಿಸುವಂತೆ ಜೆಡಿಎಸ್​ ಮನವಿ ಮಾಡಿತ್ತು. ಇತ್ತ ಬಿಜೆಪಿ ರಾಜ್ಯ ಘಟಕದಿಂದ ರಾಜ್ಯಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಉಪಾಧ್ಯಕ್ಷ ನಿರ್ಮಲ್​ ಕುಮಾರ್ ಸುರಾನ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್​ರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಹಾಗೂ ಪರಿಷತ್​ ಚುನಾವಣೆಗೆ ರಘು ಕೌಟಿಲ್ಯ, ಪ್ರಮೋದ್​ ಮದ್ವರಾಜ್, ನಳೀನ್​ ಕುಮಾರ್​ ಕಟೀಲ್​, ಲಿಂಗರಾಜ ಪಾಟೀಲ, ಮಂಜುಳಾ ಹಾಗೂ ಶರಣು ತಳ್ಳಿಕೇರಿ ಎಂಬವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿತ್ತು.

ಇದನ್ನೂ ಓದಿ : ತಮಿಳುನಾಡಲ್ಲಿ ಅಣ್ಣಾಮಲೈ ಚರಿತ್ರೆ : ಒಂದೇ ದಿನ 14 ಲಕ್ಷ ಜನ ಪಕ್ಷ ಸೇರ್ಪಡೆ

ಆದರೆ ತಡರಾತ್ರಿ ಬಿಜೆಪಿ ಪ್ರಕಟಿಸಿರುವ ಪಟ್ಟಿಯಲ್ಲಿ ರಾಜ್ಯಸಭೆಗೆ ಡಾ.ಎಂ. ನಾಗರಾಜ್​, ವಿಧಾನಪರಿಷತ್​ಗೆ ಲಿಂಗರಾಜ ಪಾಟೀಲ್​ ಹಾಗೂ ರಘು ಕೌಟಿಲ್ಯ ಅವರನ್ನು ಕಣಕ್ಕಿಳಿಸಲಾಗಿದೆ. ಇನ್ನು ವಿಧಾನಪರಿಷತ್​ ಚುನಾವಣೆಗೆ ಬಿಜೆಪಿ – ಜೆಡಿಎಸ್​ ಮೈತ್ರಿಯಿಂದ 3ನೇ ಅಭ್ಯರ್ಥಿಯಾಗಿ ಗೋವಿಂದ ರಾಜು ಹೆಸರನ್ನು ಘೋಷಣೆ ಮಾಡಿದೆ .

Exit mobile version