ತಮಿಳುನಾಡಲ್ಲಿ ಅಣ್ಣಾಮಲೈ ಚರಿತ್ರೆ : ಒಂದೇ ದಿನ 14 ಲಕ್ಷ ಜನ ಪಕ್ಷ ಸೇರ್ಪಡೆ
ತಮಿಳುನಾಡು : ದಕ್ಷಿಣ ಭಾರತದ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಅವರು ಇತಿಹಾಸ ಬರೆದಿದ್ದಾರೆ.
ತಮಿಳುನಾಡು : ದಕ್ಷಿಣ ಭಾರತದ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಅವರು ಇತಿಹಾಸ ಬರೆದಿದ್ದಾರೆ. ಜೂನ್ 5 ರಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೇವಲ 24 ಗಂಟೆಗಳ ಒಳಗೆ ಅಣ್ಣಾಮಲೈ ಆರಂಭಿಸಿರುವ ಹೊಸ ರಾಜಕೀಯ ಆಂದೋಲನಕ್ಕೆ ಬರೋಬ್ಬರಿ 14 ಲಕ್ಷಕ್ಕೂ ಹೆಚ್ಚು ಅಧಿಕ ಜನರು ಸ್ವಯಂಪ್ರೇರಿತರಾಗಿ ಸೇರ್ಪಡೆಗೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ಅದರಲ್ಲೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಸಾಮಾನ್ಯ ನಾಗರಿಕರು ಈ ಮಟ್ಟಿಗೆ ಸ್ವಯಂಪ್ರೇರಿತರಾಗಿ ಅಣ್ಣಾಮಲೈ ಅವರ ಜೊತೆ ಕೈಜೋಡಿಸುತ್ತಿರುವುದು ತಮಿಳುನಾಡು ರಾಜಕಾರಣದಲ್ಲಿ ಹೊಸ ಪ್ರಜಾಪ್ರಭುತ್ವದ ಅಲೆಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ 18 ತಿಂಗಳುಗಳಿಂದ ತಮಿಳುನಾಡಿನ ಸಾಂಸ್ಕೃತಿಕ ಹಾಗೂ ಪ್ರಗತಿಪರ ರಾಜಕೀಯದ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಿದ್ದ ಅಣ್ಣಾಮಲೈ, ರಾಷ್ಟ್ರೀಯ ನಾಯಕತ್ವಕ್ಕೆ ಯಾವುದೇ ರೀತಿಯ ಮುಜುಗರ ತರಬಾರದು ಅನ್ನೋ ಕಾರಣದಿಂದಲೇ ಅವರು ಬಿಜೆಪಿಯಿಂದ ಹೊರ ನಡೆದಿದ್ದಾರೆ.
ಅಣ್ಣಾಮಲೈ ಅವರಿಗೆ ಬಾರೀ ಜನ ಬೆಂಬಲ ವ್ಯಕ್ತವಾಗಿದೆ. ಅದ್ರಲ್ಲೂ ಅವರ ಹೊಸ ಪಕ್ಷದ ವೆಬ್‌ಸೈಟ್‌ಗೆ ಒಂದೇ ದಿನ 14 ಲಕ್ಷಕ್ಕೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ವೆಬ್‌ಸೈಟ್ ಕ್ರಾಶ್ ಆಗುವ ಹಂತಕ್ಕೆ ತಲುಪಿದೆ. ಸ್ವಯಂಸೇವಕರೇ ನಮ್ಮ ಜೀವಾಳ. ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಯುವ ನಾಯಕತ್ವದ ಮೂಲಕ ತಳಮಟ್ಟದಲ್ಲಿ ನಿಜವಾದ ಬದಲಾವಣೆ ತರುವುದು ನಮ್ಮ ಮುಖ್ಯ ಗುರಿ ಎಂದು ಸಂದೇಶ ಸಾರಲಾಗಿದೆ. ಕೊಯಮತ್ತೂರಿನಲ್ಲಿರುವ ‘ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಎಥಿಕ್ಸ್ ಅಂಡ್ ಪಾಲಿಟಿಕ್ಸ್’ ಮೂಲಕ ಹೊಸ ಪೀಳಿಗೆಯ ನಾಯಕರನ್ನು ಸಜ್ಜುಗೊಳಿಸಲು ಅಣ್ಣಾಮಲೈ ಪ್ಲಾನ್ ಮಾಡಿದ್ದಾರೆ.
Also Read: ರಾಮಲಿಂಗಾರೆಡ್ಡಿ ಖಾತೆ ಬದಲಾವಣೆಗೆ ಹೈಕಮಾಂಡ್ ರೆಡ್ ಸಿಗ್ನಲ್ : ಮಾತುಕತೆ ಮೂಲಕ ಮನವೊಲಿಸಲು ಸಿಎಂಗೆ ಸೂಚನೆ
ತಮಿಳುನಾಡಿನಲ್ಲಿ ದಶಕಗಳಿಂದ ಬೇರೂರಿರುವ ವಂಶಪಾರಂಪರ್ಯ ಮತ್ತು ಗಣ್ಯರ ರಾಜಕಾರಣಕ್ಕೆ ಮುಕ್ತಿ ಹಾಡಿ, ಶಾಶ್ವತ ಶಾಸಕರು ಹಾಗೂ ಸಂಸದರ ಸಂಸ್ಕೃತಿಯನ್ನು ಕೊನೆಗೊಳಿಸುವುದಾಗಿ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಜನಸಾಮಾನ್ಯರ ಮನೆಯ ಮಕ್ಕಳಿಗೆ ನಾಯಕತ್ವ ಸಿಗುವ ಭರವಸೆಯನ್ನು ನೀಡಿದ್ದಾರೆ. ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದ ಬೆನ್ನಲ್ಲೇ ಅಣ್ಣಾಮಲೈ ಹೊಸ ಪಕ್ಷ ತಮಿಳುನಾಡಿನ ರಾಜಕೀಯದ ಧಿಕ್ಕನ್ನೇ ಬದಲಾಯಿಸಿದೆ.
History of Annamalai in Tamil Nadu 14 lakh people joined the party in a single day



