ಇಲ್ಯಾಕೆ ಬೊಗಳುತ್ತೀರಿ ? ದಿಲ್ಲಿಗೆ ಹೋಗಿ ಬೊಗಳಿ : ಬಿಜೆಪಿ ನಾಯಕರ ವಿರುದ್ಧ ಬೋಸರಾಜ್ ಆಕ್ರೋಶ


ಬೆಂಗಳೂರು: Boseraj: ಬಿಜೆಪಿ ನಾಯಕರು‌ ಇಲ್ಲಿ ಬೊಗಳುವುದಲ್ಲ, ದಿಲ್ಲಿಗೆ ಹೋಗಿ ಬೊಗಳಲಿ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್ ಬೋಸರಾಜ್ (N. S. Boseraju) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಜಾತಿ ಸಮೀಕ್ಷೆ ವಿರುದ್ದ ಬಿಜೆಪಿ ನಾಯಕರು ನೀಡಿದ ಹೇಳಿಕೆ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಅವರು‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಿನ ಬೆಳಗಾದರೆ ಜೋಷಿ, ವಿಜಯೇಂದ್ರ, ಅಶೋಕ, ಛಲವಾದಿ ನಾರಾಯಣ ಸ್ವಾಮಿಗೆ ಇದೇ ಕೆಲಸ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಇವರಿಗೆ ಯಾವುದೇ ಬದ್ಧತೆ ಇಲ್ಲ. ಬಿಜೆಪಿಯವರಿಗೆ ಕೆಲಸ ಇಲ್ಲದೇ ಬೊಗಳುತ್ತಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಕೇಂದ್ರದಲ್ಲಿ‌ ನಿಮ್ಮದೇ ಸರ್ಕಾರ‌ ಇಲ್ಲವಾ ಅಲ್ಲಿ ಹೋಗಿ‌ ಬೊಗಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Also Read: ಜಾತಿ ಸಮೀಕ್ಷೆ – ಕೈಬಿಟ್ಟ ಜಾತಿ ಸೇರ್ಪಡೆಗೆ ಸೆ.1ರ ವರೆಗೆ ಅವಧಿ ವಿಸ್ತರಣೆಗೆ : ಸುನಿಲ್‌ ಕುಮಾರ್‌ ಮನವಿಗೆ ಸ್ಪಂದಿಸಿದ ಆಯೋಗ

ಒಬ್ಬ ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಷಿಯವರು ಹೇಗೆ ಜಾತಿ ಸಮೀಕ್ಷೆಗೆ ಸಹಕರಿಸಬೇಡಿ ಎಂದು ಹೇಳುತ್ತಾರೆ ? ಅವರಿಗೆ ಜವಾಬ್ದಾರಿ ಬೇಡವೇ ? ನಾಳೆ ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ನಾವು ವಿರೋಧ ಮಾಡಿದರೆ ಹೇಗಿರುತ್ತದೆ ? ಹೇಗೆ ಸಮೀಕ್ಷೆ ಮಾಡುತ್ತೀರಿ ಆಗ ? ಎಂದು ಪ್ರಶ್ನಿಸಿದರು.

ದಿನ ಬೆಳಗಾದರೆ ಸರ್ಕಾರ‌ ಬಿದ್ದು ಹೋಗುತ್ತದೆ ಎಂದು ಬಿಜೆಪಿಯವರು ಬೊಗಳಿದರು. ಜೋಷಿ , ಅಶೋಕ, ವಿಜಯೇಂದ್ರ , ಛಲವಾದಿಗೆ ಬೇರೆ ಕೆಲಸವೇ ಇಲ್ಲ ? ಎಷ್ಟೆಂದು ಬೊಗಳುತ್ತೀರಿ ? ಮೊದಲು ನಿಮ್ಮ ಪಕ್ಷದ ಪರಿಸ್ಥಿತಿ ಸರಿ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Also Read: ಬಿಜೆಪಿಯಿಂದ ಧರ್ಮಸ್ಥಳ ಚಲೋ : ಸೆ. 1 ರಂದು ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ

Exit mobile version