ಸಿಎಂ ಸಿದ್ದರಾಮಯ್ಯ ಔತಣ ಕೂಟ : ಯಾರಿಗೆ ಬೀಳ್ಕೊಡುಗೆ ?

ಬೆಂಗಳೂರು: CM Siddaramaiah: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಗದ್ದುಗೆ ಗುದ್ದಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಆಟಕ್ಕೆ ಚೆಕ್ ಮೇಟ್ ನೀಡುವುದಕ್ಕೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಈಗ ಸಂಪುಟ ಪುನಾರ್ರಚನೆ ದಾಳ ಉರುಳಿಸಿದ್ದಾರೆ.

ಹತ್ತಕ್ಕೂ ಹೆಚ್ಚು ಜನರನ್ನು ಸಂಪುಟದಿಂದ ಕೈ ಬಿಡುವ ಸಂದೇಶ ಉರುಳಿಸಿ ಸಚಿವಾಕಾಂಕ್ಷಿಗಳನ್ನು ತಮ್ಮ ಮುಷ್ಠಿಯಲ್ಲಿ ಹಿಡಿದಿಡುವ ಕೆಲಸಕ್ಕೆ ಸಿದ್ದರಾಮಯ್ಯ ಮುಂದಾಗಿದ್ದು, ಸಂಪುಟ ವಿಸ್ತರಣೆ ವಿಚಾರ ಈಗ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಮಧ್ಯೆ ಕುದಿಯುವ ಜ್ವಾಲಾಮುಖಿಯಾಗಿ ಪರಿಣಮಿಸಿದೆ.

Also Read: ಇಲ್ಯಾಕೆ ಬೊಗಳುತ್ತೀರಿ ? ದಿಲ್ಲಿಗೆ ಹೋಗಿ ಬೊಗಳಿ : ಬಿಜೆಪಿ ನಾಯಕರ ವಿರುದ್ಧ ಬೋಸರಾಜ್ ಆಕ್ರೋಶ

ಹೈಕಮಾಂಡ್ ಬೇಟಿಗೆ ಸತತ ಪ್ರಯತ್ನ ನಡೆಸಿಯೂ ವಿಫಲರಾಗಿದ್ದ ಸಿದ್ದರಾಮಯ್ಯ ಈಗ ಮತ್ತೆ ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ್ದಾರೆ. ಆದರೆ ಬಿಹಾರ ಚುನಾವಣೆಯಲ್ಲಿ ಮುಳುಗಿರುವ ಹೈಕಮಾಂಡ್ ನವೆಂಬರ್ ೨೩ ರ ಬಳಿಕ ದಿಲ್ಲಿಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಬಣ ಸಚಿವರಿಗೆ ಔತಣ ಕೂಟ ಆಯೋಜಿಸಿದೆ. ಅ. ೧೩ ರಂದು ರಾತ್ರಿ ಈ ಔತಣ ಕೂಟ ಕರೆಯಲಾಗಿದ್ದು, ಇದು ಯಾರಿಗೆ ಬೀಳ್ಕೊಡುಗೆ ಸಂದೇಶ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಪ್ರಾರಂಭವಾಗಿದೆ.

ಒಂದೊಮ್ಮೆ ಹೈಕಮಾಂಡ್ ಸಂಪುಟ ಪುನಾರ್ರಚನೆಗೆ ಯೆಸ್ ಎಂದರೂ ಸಿದ್ದರಾಮಯ್ಯ ಆಪ್ತಬಳಗಕ್ಕೂ‌ ಕೊಕ್ ನೀಡುವ ಸಾಧ್ಯತೆ ಇದೆ.

Also Read: ಜಾತಿ ಸಮೀಕ್ಷೆ – ಕೈಬಿಟ್ಟ ಜಾತಿ ಸೇರ್ಪಡೆಗೆ ಸೆ.1ರ ವರೆಗೆ ಅವಧಿ ವಿಸ್ತರಣೆಗೆ : ಸುನಿಲ್‌ ಕುಮಾರ್‌ ಮನವಿಗೆ ಸ್ಪಂದಿಸಿದ ಆಯೋಗ

Exit mobile version