News Next Kannada

religion

40 ವರ್ಷಗಳಿಗೊಮ್ಮೆ ನೀರಿನಿಂದ ಹೊರ ಬರುತ್ತಾನೆ ದೇವರು : ಇಲ್ಲಿ ಹಲ್ಲಿಗಳನ್ನು ಮುಟ್ಟಿದ್ರೆ ಪಾಪ ಪರಿಹಾರ

ಗರ್ಭಗುಡಿಯಲ್ಲಿ ದೇವರ ವಿಗ್ರಹವಿದ್ರೂ, ಅದು ಮೂಲ ವಿಗ್ರಹವಲ್ಲ . ಇಲ್ಲಿನ ಮೂಲ ವಿಗ್ರಹ ವಿರೋದು ನೀರಿನ ತಳ ಭಾಗದಲ್ಲಿ. ಅದನ್ನು ತೆಗೆಯೋಕೆ ಆದ್ರು ಕೂಡಾ ತೆಗೆಯೋದು ಮಾತ್ರ ೪೦ ವರ್ಷಗಳಿಗೊಮ್ಮೆ .

By ವಂದನಾ ಕೊಮ್ಮುಂಜೆ | Vandana kommunje
kanchipuramvaradar016

ಕಂಚಿ .. ಈ ಹೆಸರನ್ನು ಕೇಳದವರೇ ಇರಕ್ಕಿಲ್ಲ. ಮದುವೆಗೆ, ಮುಂಜಿಗೆ ಕಂಚಿ ಸಿಗೋ ಕಂಚಿ ರೇಷ್ಮೇ ಸೀರೆಯಿಂದ ಹಿಡಿದು, ದೇವಾಲಯ, ಗುರುಕುಲ ಎಲ್ಲದಕ್ಕೂ ಇದು ನೆಲೆಬೀಡು. ವೇಧಾದ್ಯಯನಕ್ಕಾಗಿಯೇ ಮೀಸಲಾದ ಹಲವು ವಿದ್ಯಾ ಕೇಂದ್ರಗಳು ನಮ್ಮನ್ನು ಪ್ರಾಚೀನ ಪರಂಪರೆಗೆ ಕೊಂಡೊಯ್ಯುದರಲ್ಲಿ ಎರಡು ಮಾತಿಲ್ಲ. ಇನ್ನು ದೇವಾಲಯಗಳ ಬಗ್ಗೆ ಹೇಳೋದಾದ್ರೆ ಒಂದಕ್ಕಿಂತ ಒಂದು ಸುಂದರ, ಕಂಚಿ ಕಾಮಾಕ್ಷಿ, ಕಂಚಿಯ ಕೈಲಾಸನಾಥೇಶ್ವರ ದೇವಾಲಯ ಹೀಗೆ ಹೇಳುತ್ತಾ ಹೋದ್ರೆ ಪಟ್ಟಿ ,ಮುಗಿಯೋದೇ ಇಲ್ಲ . ಇನ್ನು ಈ ಕಾಂಚಿಯನ್ನು ವಿಷ್ಣು ಕಂಚಿ ಅಂತನೂ ಕರೆಯುತ್ತಾರೆ. ಅದಕ್ಕೆ ಕಾರಣ ಈ ಅದ್ಬುತ ದೇವಾಲಯ

ಕಂಚಿಯ ಈ ವಿಷ್ಣು ದೇವಾಲಯ ಎಲ್ಲಾ ದೇವಾಲಯಗಳಂತೆ ಅಲ್ಲ . ಇಲ್ಲಿ ದೇವಾಲಯದ ಮೂಲ ವಿಗ್ರಹಕ್ಕೆ 40 ವರ್ಷಗಳಲ್ಲಿ ಒಂದು ಬಾರಿ ಮಾತ್ರ ಪೂಜೆ ಮಾಡಲಾಗುತ್ತೆ. ಹೌದು ನಿಮಗೆ ಇದು ಅಚ್ಚರಿ ಅನ್ನಿಸಬಹುದು. ಇಲ್ಲಿ ಗರ್ಭಗುಡಿಯಲ್ಲಿ ದೇವರ ವಿಗ್ರಹವಿದ್ರೂ, ಅದು ಮೂಲ ವಿಗ್ರಹವಲ್ಲ . ಇಲ್ಲಿನ ಮೂಲ ವಿಗ್ರಹ ವಿರೋದು ನೀರಿನ ತಳ ಭಾಗದಲ್ಲಿ. ಅದನ್ನು ತೆಗೆಯೋಕೆ ಆದ್ರು ಕೂಡಾ ತೆಗೆಯೋದು ಮಾತ್ರ 40 ವರ್ಷಗಳಿಗೊಮ್ಮೆ .

ಇಲ್ಲಿ ತಿರುಪತಿಯ ಬಾಲಾಜಿಯನ್ನು ಹೋಲುವ ವಿಷ್ಣು ರೂಪವನ್ನು ಆರಾಧಿಸಲಾಗುತ್ತೆ. ವರದರಾಜ ಪೆರುಮಾಳ್ ಎನ್ನುವ ಹೆಸರಿನಿಂದ ಕರೆಸಿಕೊಳ್ಳೋ ಬಾಲಾಜಿ ವೈಷ್ಣವರ ಪಾಲಿನ ಆರಾಧ್ಯ ದೈವ. ಇಲ್ಲಿನ ಮೂಲ ವಿಗ್ರಹವನ್ನು ೪೦ ವರ್ಷಗಳಿಗೊಮ್ಮೆ ನೀರಿನಿಂದ ತೆಗೆದು 28 ದಿನಗಳ ಕಾಲ ಆರಾಧಿಸಿ ಮತ್ತೆ ನೀರಿನೊಳಕ್ಕೆ ಸೇರಿಸಲಾಗುತ್ತೆ

ಬ್ರಹ್ಮನಿಂದ ಸ್ಥಾಪಿಸಲ್ಪಟ್ಟ ದೇವಾಲಯ :

ಸ್ಥಳ ಪುರಾಣದ ಪ್ರಕಾರ ಇದು ಬ್ರಹ್ಮನಿಂದ ಸ್ಥಾಪಿಸಲ್ಪಟ್ಟ ದೇವಾಲಯ ಅಂತ ಹೇಳಲಾಗುತ್ತೆ. ಒಂದು ಬಾರಿ ಬ್ರಹ್ಮ- ಸರಸ್ವತಿ ಜಗಳವಾಡಿ ಸರಸ್ವತಿ ಭೂಮಿಗೆ ಇಳಿದು ಬಂದಳಂತೆ . ಇದಕ್ಕೆ ಪರಿಹಾರ ವೇನು ಅಂತ ಬ್ರಹ್ಮ ವಿಷ್ಣುವಿನ ಬಳಿ ಕೇಳಿದರಂತೆ .ಆಗ ವಿಷ್ಣು 1000 ಅಶ್ವ ಮೇಧ ಮಾಡಲು ಸಲಹೆ ಇತ್ತರಂತೆ. ಆಗ ಗಾಬರಿಗೊಂಡ ಬ್ರಹ್ಮ ದೇವರು ೧1 ಅಶ್ವ ಮೇಧ ಮಾಡುವುದೇ ಕಷ್ಟ ಇನ್ನು 1000 ಮಾಡಲು ಹೇಗೆ ಸಾಧ್ಯ ಎಂದು ಕೇಳಿದರಂತೆ. ಆಗ ಶ್ರೀ ಹರಿಯು ಒಂದು ಕಂಚಿಯಲ್ಲಿ ಅಶ್ವಮೇಧ ಮಾಡುವಂತೆ ಸಲಹೆ ಇತ್ತರಂತೆ . ಹೀಗೆ ಅಶ್ವಮೇಧ ಯಾಗ ಕೈಗೊಳ್ಳುವಾಗ ವೇಗವತಿ ನದಿ ( ಸರಸ್ವತಿಯು ನದಿಯ ರೂಪದಲ್ಲಿ ) ಯಜ್ಞ ಶಾಲೆಗೆ ನುಗ್ಗಿ ಬಂದಾಗ ಶ್ರೀಹರಿಯು ಅಲ್ಲಿ ಅಡ್ಡವಾಗಿ ನಿಂತು ಯಜ್ಞವಾಗುವಂತೆ ನೋಡಿಕೊಂಡರಂತೆ . ಇದರಿಂದ ಪ್ರಸನ್ನರಾದ ಬ್ರಹ್ಮದೇವರು ಅತ್ತಿ ಮರದಿಂದ ವಿಷ್ಣುವಿನ ವಿಗ್ರಹ ಸ್ಥಾಪಿಸಿ ಪೂಜಿಸಿದ್ರು ಎನ್ನುವ ನಂಬಿಕೆ ಇದೆ. ಇದೇ ವಿಗ್ರಹ ಮುಂದೆ ದೇವರಾಗಿ ನಾಲ್ಕು ಯುಗದಲ್ಲಿ ಪೂಜಿಸಲ್ಪಟ್ಟಿತು.

ಕಲ್ಯಾಣಿ ಸೇರಿದ ಮೂಲ ವಿಗ್ರಹ : ೪೦ ವರ್ಷಗಳಿಗೊಮ್ಮೆ ಮಾತ್ರ ದೇವರಿಗೆ ಪೂಜೆ

ಹೌದು ಈ ಬ್ರಹ್ಮ ಸ್ಥಾಪಿಸಿದ ವಿಗ್ರಹ ಈಗ ಗರ್ಭಗುಡಿಯಲ್ಲಿಲ್ಲ, ಬದಲಾಗಿ ಕಲ್ಯಾಣಿಯಲ್ಲಿ ಮುಳುಗಿಸಿಡಲಾಗಿದೆ. ಇದಕ್ಕೆ ಕಾರಣ ಮೊಘಲರ ದಾಳಿ . ಹೌದು ಮೊಘಲ್ ವಂಶ ಯಾವತ್ತು ಆಡಳಿಕ್ಕೆ ಬಂತೋ ಹಲವು ಹಿಂದು ದೇವಾಲಯಗಳು ನಾಶವಾದವು. ಈ ಧಾಳಿಯಿಂದ ರಕ್ಷಿಸೋಕೆ ಇಲ್ಲಿನ ಮುಖ್ಯ ಅರ್ಚಕರು ಮೂರ್ತಿಯನ್ನು ಬೆಳ್ಳಿಯ ಪೆಟ್ಟಿಗೆಯಲ್ಲಿ ಇಟ್ಟು ಕಲ್ಯಾಣಿಯಲ್ಲಿ ಮುಳುಗಿಸಿ ಇಟ್ಟರಂತೆ. ಯಾವಾಗ ಪೂಜೆ ಪುನಸ್ಕಾರ ಆರಂಭ ಮಾಡಲು ನಿರ್ಧರಿಸಲಾಯಿತೋ ಆಗ ಮುಖ್ಯ ಅರ್ಚಕರು ಸಾವನ್ನಪ್ಪಿದ್ರು . ಹೀಗಾಗಿ ವಿಗ್ರಹ ಎಲ್ಲಿ ಇಟ್ಟಿದೆ ಎನ್ನುವ ಮಾಹಿತಿ ಯಾರಿಗು ಗೊತ್ತಿರಲಿಲ್ಲ. ಕೊನೆಗೆ ಕಲ್ಲಿನ ಮೂರ್ತಿಯೊಂದನ್ನು ತಂದು ಪ್ರತಿಷ್ಟಾಪನೆ ಮಾಡಲಾಯಿತು. ಮುಂದೆ ಕಲ್ಯಾಣಿಯನ್ನು ಸ್ವಚ್ಚಗೊಳಿಸುವಾಗ ಈ ಮೂಲ ವಿಗ್ರಹ ಪತ್ತೆಯಾಗಿಯಾಯಿತು. ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆ ಯಾದ ವಿಗ್ರಹ ವಿರೋದ್ರಿಂದ ಏನು ಮಾಡುವುದು ಎಂದು ಭಕ್ತರು ಚಿಂತೆಗೊಳಗಾದ್ರು. ಆಗ ಅರ್ಚಕರ ಕನಸಿನಲ್ಲಿ ಬಂದ ವರರಾಜ ಪೆರಮಾಳ್ ದೇವರು ತನ್ನನ್ನು ೪೦ ವರ್ಷಗಳಿಗೆ ಒಂದು ಬಾರಿ ನೀರಿನಿಂದ ತೆಗೆದು 28 ದಿವಸಗಳ ಕಾಲ ಪೂಜಿಸಿ ಎಂದು ಹೇಳಿದರಂತೆ . ಅಂದಿನಿಂದ ಇಂದಿನ ವರೆಗೆ ಇದೇ ನಡೆದುಕೊಂಡು ಬರುತ್ತಿದೆ.

ಈ ಹಿಂದೆ 1979 ರಲ್ಲಿ ಹಾಗೂ 2009ರಲ್ಲಿ ಈ ವಿಗ್ರಹವನ್ನು ನೋಡುವ ಅವಕಾಶ ಲಭಿಸಿತ್ತು. ಈ ವಿಗ್ರಹವನ್ನು ತಮ್ಮ ಜೀವಮಾನದಲ್ಲಿ ಮೂರು ಬಾರಿ ನೋಡಿದ್ರೆ ಮೋಕ್ಷ ಲಭಿಸುತ್ತೆ ಅನ್ನೋ ನಂಬಿಕೆ ಇದೆ.

ಐತಿಹಾಸಿಕ ಹಿನ್ನಲೆ

ಈ ದೇವಾಲಯ ಚೋಳರ ಕಾಲದ ವಾಸ್ತು ಶಿಲ್ಪಕ್ಕೆ ಹಿಡಿದ ಕೈ ಗನ್ನಡಿಯಾಗಿದೆ . ಇಲ್ಲಿನ ಕಲ್ಯಾಣ ಮಂಟದ ವಾಸ್ತು ಶಿಲ್ಪ ನಮ್ಮನ್ನು ಮತ್ತೊಂದೆ ಲೋಕಕ್ಕೆ ಕರೆದೊಯ್ಯುತ್ತೆ. ಈ ದೇವಾಲಯ ಚೋಳರ ರಾಜ ರಾಜ ಚೋಳ ಕಟ್ಟಿಸಿದ. ಮುಂದೆ ವಿಜಯನಗರ ಅರಸ ಕೃಷ್ಣದೇವರಾಯ ಕೂಡಾ ದೇವಾಲಯದ ಜೀರ್ಣೋದ್ಧಾರ ಮಾಡಿಸಿದ್ದ ಅನ್ನೋ ಮಾಹಿತಿ ಸಿಗುತ್ತೆ .

ಚಿನ್ನದ, ಬೆಳ್ಳಿ ಹಲ್ಲಿ ನೋಡಿದ್ರೆ ಸರ್ವ ದೋಷ ಪರಿಹಾರ :

ನಿಮ್ಮಲ್ಲಿ ಕೆಲವರಿಗಾದ್ರು ಹಲ್ಲಿ ಶಾಸ್ತ್ರದ ಬಗ್ಗೆ ಗೊತ್ತಿರಬಹುದು. ಹಲ್ಲಿ ನಮ್ಮ ದೇಹಕ್ಕೆ ಏನಾದ್ರು ಬಿದ್ರೆ ಅನಾಹುತ ಸಂಭವಿಸುತ್ತೆ ಅನ್ನೋದನ್ನು ಕೇಳಿರಬಹುದು.ಅಂತಹ ದೋಷಗಳ ಪರಿಹಾರ ಈ ದೇವಾಲಯದಲ್ಲಿ ಸಿಗುತ್ತೆ. ಇಲ್ಲಿನ ಬೆಳ್ಳಿ ಹಾಗೂ ಚಿನ್ನದ ಹಲ್ಲಿಯನ್ನು ಸ್ಪರ್ಷಿಸಿದ್ರೆ ಎಲ್ಲಾ ದೋಷ ಪರಿಹಾರ ವಾಗುತ್ತೆ ಅನ್ನೋ ನಂಬಿಕೆ ಇದೆ . ದೇವಾಲಯ ಛಾವಣಿಯಲ್ಲಿ ಚಿನ್ನ ಬೆಳ್ಳಿಯ ಹಲ್ಲಿ ಹಾಗೂ ಸೂರ್ಯ ಚಂದ್ರರ ಪ್ರತಿಕೃತಿಗಳಿವೆ. ಇದನ್ನು ಸ್ಪರ್ಷಿಸೋಕೆ ಅಂತಾನೆ ಭಕ್ತರ ಸಾಲು ನಿಂತಿರುತ್ತೆ.

ಈ ಹಲ್ಲಿಗಳೂ ಇಲ್ಲಿ ಇರೋಕೆ ಕಾರಣ ಇದೆ . ಹಿಂದೆ ಅಗಸ್ತ್ಯ ಮುನಿಗಳ ಶಿಷ್ಯರು ಒಂದು ಬಾರಿ ಹೋಮಕ್ಕಾಗಿ ನೀರು ತರುತ್ತಿದ್ದರಂತೆ. ಆಗ ಅದರಲ್ಲಿ ಹಲ್ಲಿ ಬಿದ್ದಿದ್ದನ್ನು ನೋಡಿದ ಅಗಸ್ಯರು ಶಿಷ್ಯರಿಗೆ ಹಲ್ಲಿ ಆಗುವಂತೆ ಶಪಿಸಿದರಂತೆ. ಮುಂದೆ ಸೂರ್ಯ ಚಂದ್ರರು ದೇವರ ಪೂಜೆಗೆ ಇಲ್ಲಿಗೆ ಬಂದಾಗ ಶಾಪ ವಿಮೋಚನೆ ಆಯಿತು ಎಂಬ ಮಾತಿದೆ.

ಇನ್ನು ಈ ದೇವಾಲಯ ಚೆನೈನಿಂದ 90 ಕಿಮೀ ದೂರದಲ್ಲಿದೆ . ಕಂಚಿಗೆ ಹೋಗೋರು ಈ ದೇವಾಲಯಕ್ಕೆ ಹೋಗೋದನ್ನು ಮಿಸ್ ಮಾಡಿಕೋ ಬೇಡಿ .