Krishna Janmashtami: ಮನೆಯಲ್ಲಿ ಸದಾ ಐಶ್ವರ್ಯ-ನೆಮ್ಮದಿ ನೆಲೆಸಲು ಜನ್ಮಾಷ್ಟಮಿಯಂದು ಈ ಕೆಲಸ ತಪ್ಪದೇ ಮಾಡಿ!

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೇವಲ ಪೂಜೆ ಮಾಡುವುದಷ್ಟೇ ಅಲ್ಲ, ವಿಶೇಷ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿದ್ದ ದರಿದ್ರತೆ ದೂರವಾಗಿ, ಅಷ್ಟೈಶ್ವರ್ಯ, ನೆಮ್ಮದಿ ಸದಾ ನೆಲೆಸುತ್ತದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Krishna Janmashtami
Krishna Janmashtami

ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಅತ್ಯಂತ ವಿಶೇಷವಾದ ಮಹತ್ವವಿದೆ. ಕೇವಲ ಉಪವಾಸ ಮತ್ತು ಪೂಜೆ ಮಾಡುವುದಷ್ಟೇ ಅಲ್ಲದೆ, ಪವಿತ್ರ ದಿನದಂದು ಕೆಲವು ಧಾರ್ಮಿಕ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿದ್ದ ದರಿದ್ರತೆ, ನಕಾರಾತ್ಮಕ ಶಕ್ತಿ ದೂರವಾಗಿ ಅಷ್ಟೈಶ್ವರ್ಯ ಮತ್ತು ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಬಾರಿಯ ಜನ್ಮಾಷ್ಟಮಿಯಂದು ನಿಮ್ಮ ಮನೆಯಲ್ಲಿ ಸಕಲ ಸಮೃದ್ಧಿ ಹೆಚ್ಚಾಗಲು ಮಾಡಬೇಕಾದ ಪ್ರಮುಖ ಕೆಲಸಗಳು ಇಲ್ಲಿವೆ.

 ಜನ್ಮಾಷ್ಟಮಿಯಂದು ಮನೆಯಲ್ಲಿ ಮಾಡಬೇಕಾದ ಕೆಲಸಗಳು:

ಬಾಲ ಕೃಷ್ಣನ ಪಾದದ ಗುರುತು:

ಮನೆಯ ಮುಖ್ಯ ದ್ವಾರದಿಂದ (ಬಾಗಿಲು) ಪೂಜಾ ಕೊಠಡಿಯವರೆಗೆ ಅಕ್ಕಿ ಹಿಟ್ಟಿನಿಂದ ಬಾಲ ಕೃಷ್ಣನ ಸಣ್ಣ ಸಣ್ಣ ಪಾದಗಳನ್ನು ಬಿಡಿಸಿ. ಇದು ಶ್ರೀಕೃಷ್ಣನನ್ನು ಪ್ರೀತಿಯಿಂದ ಮನೆಗೆ ಆಹ್ವಾನಿಸುವ ಸಂಕೇತವಾಗಿದೆ.

 ತುಳಸಿ ದಳದ ನೈವೇದ್ಯ:

ಶ್ರೀಕೃಷ್ಣನಿಗೆ ತುಳಸಿ ಎಂದರೆ ಅತ್ಯಂತ ಪ್ರಿಯ. ದಿನ ಕೃಷ್ಣನಿಗೆ ಅರ್ಪಿಸುವ ಪ್ರತಿಯೊಂದು ನೈವೇದ್ಯ ಹಾಗೂ ಪ್ರಸಾದದಲ್ಲೂ ತಪ್ಪದೇ 1-2 ತುಳಸಿ ದಳಗಳನ್ನು ಇಡಬೇಕು. ತುಳಸಿ ಇಲ್ಲದ ಪೂಜೆಯನ್ನು ಕೃಷ್ಣ ಸ್ವೀಕರಿಸುವುದಿಲ್ಲ ಎಂಬ ನಂಬಿಕೆ ಇದೆ.

 ಬೆಣ್ಣೆ ಮತ್ತು ಮಖಾನಾ ಅರ್ಪಣೆ:

ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಕಲ್ಲು ಸಕ್ಕರೆ (ಮಿಶ್ರಿ), ಗೋಪಾಲಕಾಲ ಮತ್ತು ಮಖಾನಾ ಖೀರ್ಅನ್ನು ನೈವೇದ್ಯವಾಗಿ ಇಡಿ. ಇದು ಮನೆಯಲ್ಲಿ ಧನ-ಧಾನ್ಯದ ಕೊರತೆ ಬಾರದಂತೆ ಕಾಯುತ್ತದೆ.

 ಬಂಸಿ ( ಕೊಳಲು ) ಸ್ಥಾಪನೆ:

ಪೂಜೆಯ ಸಮಯದಲ್ಲಿ ಕೃಷ್ಣನ ವಿಗ್ರಹ ಅಥವಾ ಮುಖಪುಟದ ಬಳಿ ಒಂದು ಸಣ್ಣ ಮರದ ಅಥವಾ ಬೆಳ್ಳಿಯ ಕೊಳಲನ್ನು ಇಟ್ಟು ಪೂಜಿಸಿ. ಪೂಜೆಯ ನಂತರ ಅದನ್ನು ಮನೆಯ ವಾಸ್ತು ಪ್ರಕಾರ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿನ ವಾಸ್ತುದೋಷ ನಿವಾರಣೆಯಾಗುತ್ತದೆ.

 ಶಂಖದಿಂದ ಹಾಲಿನ ಅಭಿಷೇಕ:

ರಾತ್ರಿ ಕೃಷ್ಣ ಜನಿಸಿದ ಸಮಯದಲ್ಲಿ (ನಿಶಿತಾ ಕಾಲ ಪೂಜೆ) ಕೃಷ್ಣನ ವಿಗ್ರಹಕ್ಕೆ ಶಂಖದ ಮೂಲಕ ಹಾಲಿನಿಂದ ಅಭಿಷೇಕ ಮಾಡಿ. ಶಂಖವು ಲಕ್ಷ್ಮೀ ದೇವಿಯ ಸಂಕೇತವಾಗಿದ್ದು, ಕಾರ್ಯದಿಂದ ಲಕ್ಷ್ಮೀ-ನಾರಾಯಣರಿಬ್ಬರ ಅನುಗ್ರಹ ದೊರೆಯುತ್ತದೆ.

 ದಾನ ಧರ್ಮ:

ಶುಭ ದಿನದಂದು ಸಣ್ಣ ಮಕ್ಕಳಿಗೆ ಅಥವಾ ನಿರ್ಗತಿಕರಿಗೆ ಸಿಹಿತಿಂಡಿ, ಹಾಲು, ಹಣ್ಣುಗಳು ಅಥವಾ ಧಾನ್ಯಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ-ಸಂತೋಷ ವೃದ್ಧಿಯಾಗುತ್ತದೆ.

  ಜನ್ಮಾಷ್ಟಮಿಯಂದು ವಹಿಸಬೇಕಾದ ಮುನ್ನೆಚ್ಚರಿಕೆಗಳು

ದಿನ ಮನೆಯಲ್ಲಿ ಯಾರಿಗೂ ಮನಸ್ಸಿಗೆ ಬೇಸರವಾಗುವಂತೆ ಮಾತನಾಡಬಾರದು ಮತ್ತು ಜಗಳ ಆಡಬಾರದು.

ಪೂಜಾ ಸ್ಥಳವನ್ನು ಅತ್ಯಂತ ಸ್ವಚ್ಛವಾಗಿ ಮತ್ತು ಸುಗಂಧಿತವಾಗಿ (ಧೂಪ/ದೀಪಗಳಿಂದ) ಇಟ್ಟುಕೊಳ್ಳಿ.

ತುಳಸಿ ಗಿಡದ ಎಲೆಗಳನ್ನು ಜನ್ಮಾಷ್ಟಮಿಯ ದಿನ ಕೀಳಬಾರದು, ಪೂಜೆಗೆ ಬೇಕಾದ ತುಳಸಿಯನ್ನು ಒಂದು ದಿನ ಮುಂಚಿತವಾಗಿಯೇ ಕಿತ್ತು ಇಟ್ಟುಕೊಳ್ಳಿ.

 

Topics

ಸಂಬಂಧಿತ ಸುದ್ದಿಗಳು