ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಅತ್ಯಂತ ವಿಶೇಷವಾದ ಮಹತ್ವವಿದೆ. ಕೇವಲ ಉಪವಾಸ ಮತ್ತು ಪೂಜೆ ಮಾಡುವುದಷ್ಟೇ ಅಲ್ಲದೆ, ಈ ಪವಿತ್ರ ದಿನದಂದು ಕೆಲವು ಧಾರ್ಮಿಕ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿದ್ದ ದರಿದ್ರತೆ, ನಕಾರಾತ್ಮಕ ಶಕ್ತಿ ದೂರವಾಗಿ ಅಷ್ಟೈಶ್ವರ್ಯ ಮತ್ತು ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಈ ಬಾರಿಯ ಜನ್ಮಾಷ್ಟಮಿಯಂದು ನಿಮ್ಮ ಮನೆಯಲ್ಲಿ ಸಕಲ ಸಮೃದ್ಧಿ ಹೆಚ್ಚಾಗಲು ಮಾಡಬೇಕಾದ ಪ್ರಮುಖ ಕೆಲಸಗಳು ಇಲ್ಲಿವೆ.
ಜನ್ಮಾಷ್ಟಮಿಯಂದು ಮನೆಯಲ್ಲಿ ಮಾಡಬೇಕಾದ ಕೆಲಸಗಳು:
ಬಾಲ ಕೃಷ್ಣನ ಪಾದದ ಗುರುತು:
ಮನೆಯ ಮುಖ್ಯ ದ್ವಾರದಿಂದ (ಬಾಗಿಲು) ಪೂಜಾ ಕೊಠಡಿಯವರೆಗೆ ಅಕ್ಕಿ ಹಿಟ್ಟಿನಿಂದ ಬಾಲ ಕೃಷ್ಣನ ಸಣ್ಣ ಸಣ್ಣ ಪಾದಗಳನ್ನು ಬಿಡಿಸಿ. ಇದು ಶ್ರೀಕೃಷ್ಣನನ್ನು ಪ್ರೀತಿಯಿಂದ ಮನೆಗೆ ಆಹ್ವಾನಿಸುವ ಸಂಕೇತವಾಗಿದೆ.
ತುಳಸಿ ದಳದ ನೈವೇದ್ಯ:
ಶ್ರೀಕೃಷ್ಣನಿಗೆ ತುಳಸಿ ಎಂದರೆ ಅತ್ಯಂತ ಪ್ರಿಯ. ಈ ದಿನ ಕೃಷ್ಣನಿಗೆ ಅರ್ಪಿಸುವ ಪ್ರತಿಯೊಂದು ನೈವೇದ್ಯ ಹಾಗೂ ಪ್ರಸಾದದಲ್ಲೂ ತಪ್ಪದೇ 1-2 ತುಳಸಿ ದಳಗಳನ್ನು ಇಡಬೇಕು. ತುಳಸಿ ಇಲ್ಲದ ಪೂಜೆಯನ್ನು ಕೃಷ್ಣ ಸ್ವೀಕರಿಸುವುದಿಲ್ಲ ಎಂಬ ನಂಬಿಕೆ ಇದೆ.
ಬೆಣ್ಣೆ ಮತ್ತು ಮಖಾನಾ ಅರ್ಪಣೆ:
ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಕಲ್ಲು ಸಕ್ಕರೆ (ಮಿಶ್ರಿ), ಗೋಪಾಲಕಾಲ ಮತ್ತು ಮಖಾನಾ ಖೀರ್ ಅನ್ನು ನೈವೇದ್ಯವಾಗಿ ಇಡಿ. ಇದು ಮನೆಯಲ್ಲಿ ಧನ-ಧಾನ್ಯದ ಕೊರತೆ ಬಾರದಂತೆ ಕಾಯುತ್ತದೆ.
ಬಂಸಿ ( ಕೊಳಲು ) ಸ್ಥಾಪನೆ:
ಪೂಜೆಯ ಸಮಯದಲ್ಲಿ ಕೃಷ್ಣನ ವಿಗ್ರಹ ಅಥವಾ ಮುಖಪುಟದ ಬಳಿ ಒಂದು ಸಣ್ಣ ಮರದ ಅಥವಾ ಬೆಳ್ಳಿಯ ಕೊಳಲನ್ನು ಇಟ್ಟು ಪೂಜಿಸಿ. ಪೂಜೆಯ ನಂತರ ಅದನ್ನು ಮನೆಯ ವಾಸ್ತು ಪ್ರಕಾರ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿನ ವಾಸ್ತುದೋಷ ನಿವಾರಣೆಯಾಗುತ್ತದೆ.
ಶಂಖದಿಂದ ಹಾಲಿನ ಅಭಿಷೇಕ:
ರಾತ್ರಿ ಕೃಷ್ಣ ಜನಿಸಿದ ಸಮಯದಲ್ಲಿ (ನಿಶಿತಾ ಕಾಲ ಪೂಜೆ) ಕೃಷ್ಣನ ವಿಗ್ರಹಕ್ಕೆ ಶಂಖದ ಮೂಲಕ ಹಾಲಿನಿಂದ ಅಭಿಷೇಕ ಮಾಡಿ. ಶಂಖವು ಲಕ್ಷ್ಮೀ ದೇವಿಯ ಸಂಕೇತವಾಗಿದ್ದು, ಈ ಕಾರ್ಯದಿಂದ ಲಕ್ಷ್ಮೀ-ನಾರಾಯಣರಿಬ್ಬರ ಅನುಗ್ರಹ ದೊರೆಯುತ್ತದೆ.
ದಾನ ಧರ್ಮ:
ಈ ಶುಭ ದಿನದಂದು ಸಣ್ಣ ಮಕ್ಕಳಿಗೆ ಅಥವಾ ನಿರ್ಗತಿಕರಿಗೆ ಸಿಹಿತಿಂಡಿ, ಹಾಲು, ಹಣ್ಣುಗಳು ಅಥವಾ ಧಾನ್ಯಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ-ಸಂತೋಷ ವೃದ್ಧಿಯಾಗುತ್ತದೆ.
ಜನ್ಮಾಷ್ಟಮಿಯಂದು ವಹಿಸಬೇಕಾದ ಮುನ್ನೆಚ್ಚರಿಕೆಗಳು
ಈ ದಿನ ಮನೆಯಲ್ಲಿ ಯಾರಿಗೂ ಮನಸ್ಸಿಗೆ ಬೇಸರವಾಗುವಂತೆ ಮಾತನಾಡಬಾರದು ಮತ್ತು ಜಗಳ ಆಡಬಾರದು.
ಪೂಜಾ ಸ್ಥಳವನ್ನು ಅತ್ಯಂತ ಸ್ವಚ್ಛವಾಗಿ ಮತ್ತು ಸುಗಂಧಿತವಾಗಿ (ಧೂಪ/ದೀಪಗಳಿಂದ) ಇಟ್ಟುಕೊಳ್ಳಿ.
ತುಳಸಿ ಗಿಡದ ಎಲೆಗಳನ್ನು ಜನ್ಮಾಷ್ಟಮಿಯ ದಿನ ಕೀಳಬಾರದು, ಪೂಜೆಗೆ ಬೇಕಾದ ತುಳಸಿಯನ್ನು ಒಂದು ದಿನ ಮುಂಚಿತವಾಗಿಯೇ ಕಿತ್ತು ಇಟ್ಟುಕೊಳ್ಳಿ.