Surya Grahan 2026 : ಖಗೋಳ ಇಂದು ವಿಶೇಷ ವಿದ್ಯಾಮಾನವೊಂದಕ್ಕೆ ಕಾರಣವಾಗಲಿದೆ. ಆಕಾಶ ವೀಕ್ಷಕರ ಕುತೂಹಲವನ್ನು ಹುಟ್ಟಿಸಿರುವ ಸಂಪೂರ್ಣ ಸೂರ್ಯಗ್ರಹಂ ಇಂದು ( ಅಗಸ್ಟ್ 12ರಂದು) ಗೋಚರಿಸಲಿದೆ. ಈ ವರ್ಷದ ಕೊನೆಯ ಸೂರ್ಯಗ್ರಹಣ ಇದಾಗಿದ್ದು, ಭೂಮಿಯ ಕೆಲವು ಭಾಗಗಳಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವ ಅಪರೂಪದ ದೃಶ್ಯ ಕಾಣಿಸಲಿದೆ.
ಭಾರತದಲ್ಲಿ ಈ ಬಾರಿಯ ಸೂರ್ಯಗ್ರಹಣವನ್ನ ನೇರವಾಗಿ ಕಾಣುವುದಕ್ಕೆ ಅವಕಾಶ ಇರೋದಿಲ್ಲ. ಭಾರತ ಹವಾಮಾನ ಇಲಾಖೆ ಮತ್ತು ಖಗೋಳ ಕೇಂದ್ರದ ಮಾಹಿತಿಯ ಪ್ರಕಾರ, ಈ ಗ್ರಹಣ ಗೋಚರಿಸುದಿಲ್ಲವಂತೆ.
ಇಂದು ಯಾವ ಸಮಯಕ್ಕೆ ಸೂರ್ಯಗ್ರಹಣ ?
ಭಾರತೀಯ ಕಾಲಮಾನದ ಪ್ರಕಾರ, ಸೂರ್ಯಗ್ರಹಣ ರಾತ್ರಿಯ ಸಂದರ್ಭದಲ್ಲಿ ಗೋಚರಿಸಲಿದೆ. ರಾತ್ರಿ 9.04ಕ್ಕೆ ಗ್ರಹಣ ಆರಂಭವಾಗಿ, ರಾತ್ರಿ 11.17ಕ್ಕೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಅಗಸ್ಟ್ 13ರ ಮುಂಜಾನೆ ಸುಮಾರು 1.29ಕ್ಕೆ ಗ್ರಹಣ ಸಂಪೂರ್ಣವಾಗಿ ಮುಕ್ತಾಯವಾಗಲಿದೆ.
ಪ್ರಮುಖವಾಗಿ ಗ್ರೀನ್‌ಲ್ಯಾಂಡ್, ಉತ್ತರ ರಷ್ಯಾ, ಐಸ್‌ಲ್ಯಾಂಡ್, ಸ್ಪೇನ್ ಮತ್ತು ಪೋರ್ಚುಗಲ್‌ನ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಯುರೋಪ್, ಅಮೇರಿಕಾ, ಕೆನಡಾದ, ವಾಯುವ್ಯ ಆಫ್ರಿಕಾದಲ್ಲಿಯೂ ಭಾಗಶಃ ಗ್ರಹಣ ಗೋಚರಿಸಲಿದೆ. ಆದರೆ ಭಾರತದಲ್ಲಿ ಇಂದು ನಡೆಯುವ ಗ್ರಹಣ ಗೋಚರಿಸುವುದಿಲ್ಲ.
ಭಾರತದಲ್ಲಿ ಸೂರ್ಯಗ್ರಹಣ ಕಾಣಿಸುವುದಿಲ್ಲ
2026ರ ಆಗಸ್ಟ್ 12ರ ಸಂಪೂರ್ಣ ಸೂರ್ಯಗ್ರಹಣದ ಮಾರ್ಗ ಭಾರತವನ್ನು ಒಳಗೊಂಡಿಲ್ಲ. ಹೀಗಾಗಿ ಕರ್ನಾಟಕ ಸೇರಿದಂತೆ ಭಾರತದ ಯಾವುದೇ ರಾಜ್ಯದಲ್ಲಿಯೂ ಗ್ರಹಣವನ್ನು ನೇರವಾಗಿ ವೀಕ್ಷಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣದಿಂದಲೇ “Not Visible in India” ಎಂದು ಉಲ್ಲೇಖಿಸಲಾಗಿದೆ.
ನಾಸಾ (NASA) ಪ್ರಕಾರ ಈ ಸಂಪೂರ್ಣ ಸೂರ್ಯಗ್ರಹಣ ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ರಷ್ಯಾ, ಅಟ್ಲಾಂಟಿಕ್ ಪ್ರದೇಶ ಮತ್ತು ಸ್ಪೇನ್‌ನಲ್ಲಿನ ಕೆಲವು ಪ್ರದೇಶಗಳಲ್ಲಿ ಸಾಗಲಿದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ.
ವರ್ಷದ ಕೊನೆಯ ಸೂರ್ಯಗ್ರಹಣ ಏಕೆ ವಿಶೇಷ ?
ಸಂಪೂರ್ಣ ಸೂರ್ಯಗ್ರಹಣ ಸಂಭವಿಸುವುದು ತೀರಾ ವಿರಳ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಒಂದು ಸೂರ್ಯನ ಡಿಸ್ಕ್ ಅನ್ನು ಸಂಪೂರ್ಣವಾಗಿ ಮುಚ್ಚುತ್ತಾನೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಹಗಲಿನಲ್ಲಿಯೇ ಸುತ್ತಮುತ್ತಲಿನ ಬೆಳಕು ಕಡಿಮೆಯಾಗುವ ವಿಶೇಷ ಖಗೋಳ ದೃಶ್ಯ ಸೃಷ್ಟಿಯಾಗುತ್ತದೆ.
ಆದರೆ ಈ ಭಾರಿಯ ಸೂರ್ಯಗ್ರಹಣದ ಪಥವು ಉತ್ತರ ಗೋಳಾರ್ಧದ ಹಲವು ಪ್ರದೇಶಗಳನ್ನು ದಾಟುತ್ತಿರುವುದು ಖಗೋಳಾಸಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಐಸ್‌ಲ್ಯಾಂಡ್, ಸ್ಪೇನ್‌ನ ಕೆಲವು ಪ್ರದೇಶಗಳಲ್ಲಿ ಗ್ರಹಣ ವೀಕ್ಷಣೆ ಮಾಡುವುದಕ್ಕೆ ಉತ್ತಮ ಅವಕಾಶವೂ ಸಿಗಲಿದೆಯಂತೆ.
ಭಾರತಕ್ಕೂ ಇದೆಯಾ ಸೂತಕ ಕಾಲ ?
ಸೂರ್ಯಗ್ರಹಣ ಗೋಚರಿಸುತ್ತಾ ಅಥವಾ ಇಲ್ಲವೇ ಅನ್ನೋದ್ರ ಆಧಾರದ ಮೇಲೆಯೇ ಧಾರ್ಮಿಕ ಆಚರಣೆಗಳಲ್ಲಿ ಸೂತಕ ಕಾಲದ ಕುರಿತು ಚರ್ಚೆ ನಡೆಯುತ್ತಿದೆ. ವೈಜ್ಞಾನಿಕವಾಗಿ ನೋಡಿದ್ರೆ ಸೂತಕ ಅನ್ನೋದು ಖಗೋಳಿಯ ಘಟನೆಯ ಭಾಗವಲ್ಲ, ಇದು ಭಾರತೀಯ ಧಾರ್ಮಿಕ ಪರಂಪರೆಗೆ ಸಂಬಂಧಿಸಿದ ನಂಬಿಕೆಯಾಗಿದೆ.
ಅಗಸ್ಟ್ 12, 2026 ರಂದು ಗ್ರಹಣ ಭಾರತದಲ್ಲಿ ಗೋಚರಿಸದ ಕಾರಣಕ್ಕೆ ಈ ಗ್ರಹಣವನ್ನು ಆಧರಿಸಿ ಸ್ಥಳೀಯವಾಗಿ ಕೈಗೊಳ್ಳುವ ಧಾರ್ಮಿಕ ಆಚರಣೆಗಳ ಬಗ್ಗೆ ಧಾರ್ಮಿಕ ಕೇಂದ್ರ ಅಥವಾ ಕುಟುಂಬಗಳ ಸಂಪ್ರದಾಯದ ಪ್ರಕಾರ ನಿರ್ಧಾರಗಳನ್ನು ಕೈಗೊಳ್ಳಬಹುದು.