ಮಳೆಗಾಲದಲ್ಲಿ ಬಟ್ಟೆಗಳ ನಿರ್ವಹಣೆ : ವಾರ್ಡ್ರೋಬ್‌ನಲ್ಲಿ ಇಡುವ ಮೊದಲು ಈ ಟ್ರಿಕ್ಸ್‌ ಬಳಸಿ

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಅವುಗಳನ್ನು ನಿರ್ವಹಣೆ ಮಾಡುವುದು. ಸ್ವಚ್ಛವಾಗಿ ತೊಳೆದು ಮಡಿಚಿಟ್ಟ ಬಟ್ಟೆಗಳಿಂದಲೂ ಕೆಟ್ಟ ವಾಸನೆ ಬರುತ್ತಿದ್ದರೆ ಇಲ್ಲಿದೆ ಸರಳ ಟಿಪ್ಸ್‌. ಅವುಗಳನ್ನು ಪಾಲಿಸಿ ಬಟ್ಟೆಗಳನ್ನು ತಾಜಾವಾಗಿರಿಸಿ.

ಭಾರತದಲ್ಲಿ ಮಾನ್ಸೂನ್‌ ಪ್ರಾರಂಭವಾಗಿದೆ. ಕೆಲವು ಕಡೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮಳೆಗಾಲವೆಂದರೆ ರೈತಾಪಿ ವರ್ಗದಿಂದ ಹಿಡಿದು ಎಲ್ಲರ ಮೊಗದಲ್ಲಿ ಸಂತಸ ತರುವುದಂತು ಹೌದು. ಆದರೆ ಎಡಬಿಡದೇ ಸುರಿಯುವ ಮಳೆಯಿಂದ ಬಟ್ಟೆಗಳು ಮಾತ್ರ ಒಣಗುವುದೇ ಇಲ್ಲ. ಒದ್ದೆ ಬಟ್ಟೆಗಳಿಂದ ಅಸಹ್ಯ ವಾಸನೆ ಬರಲು ಶುರುವಾಗುತ್ತದೆ. ಬಟ್ಟೆ ಒಣಗದೇ ಶಿಲೀಂದ್ರಗಳು ಬೆಳವಣಿಗೆಯಾಗಿ ಬಟ್ಟೆ ಹಳತರಂತಾಗುತ್ತದೆ. ಅದಷ್ಟೇ ಅಲ್ಲದೇ ತೇವಾಂಶದಿಂದ ಕಪಾಟಿನಲ್ಲಿಟ್ಟ ಬಟ್ಟೆಗಳಿಂದ ಕೂಡಾ ವಾಸನೆ ಬರುತ್ತದೆ. ಕ್ರಮೇಣ ಬಟ್ಟೆಗಳ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ. ಹಾಗಾದ್ರೆ ಮಳೆಗಾಲದ ಈ ಒಂದು ಸಮಸ್ಯೆಗೆ ಪರಿಹಾರವೇನು? ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿ ತೇವಾಂಶ, ವಾಸನೆಯನ್ನು ನಿಯಂತ್ರಿಸಬಹುದಾ? ದುಬಾರಿ ಬಟ್ಟೆಗಳು ಹಾಳಾಗಿ ನಿಮಗೆ ಬೇಜಾರಾಗುವ ಮೊದಲು ಈ ಟಿಪ್ಸ್‌ ಫಾಲೊ ಮಾಡಿ.

ಅಡುಗೆ ಸೋಡಾ

ಅಡುಗೆ ಸೋಡಾ ಕೇವಲ ಅಡುಗೆಮನೆಗೆ ಮಾತ್ರ ಸೀಮಿತ ಎಂದುಕೊಂಡರೆ ಅದು ತಪ್ಪು. ಕಪಾಟುಗಳಲ್ಲಿನ ತೇವಾಂಶ ಮತ್ತು ವಾಸನೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಒಂದು ಸಣ್ಣ ಬಟ್ಟಲಿನಲ್ಲಿ ಅಡಿಗೆ ಸೋಡಾವನ್ನು ತುಂಬಿಸಿ ಕಪಾಟಿನ ಒಂದು ಮೂಲೆಯಲ್ಲಿ ಇರಿಸಿ. ಇದು ಹೆಚ್ಚುವರಿ ತೇವಾಂಶ ಮತ್ತು ವಾಸನೆಯನ್ನು ಹೀರಿಕೊಳ್ಳುತ್ತದೆ. ಉತ್ತಮ ಫಲಿತಾಂಶಗಳಿಗಾಗಿ, ಪ್ರತಿ ಎರಡರಿಂದ ಮೂರು ವಾರಗಳಿಗೊಮ್ಮೆ ಅದನ್ನು ಬದಲಾಯಿಸಿ.

ಕರ್ಪೂರ

ನಿಮ್ಮ ವಾರ್ಡ್ರೋಬ್ ಅನ್ನು ತಾಜಾಗೊಳಿಸಲು ಕರ್ಪೂರ ಅತ್ಯಂತ ಸುಲಭದ ಮಾರ್ಗ ಎನ್ನಬಹುದು. ಕರ್ಪೂರವನ್ನು ತೆಗದುಕೊಂಡು ಸಣ್ಣ ಬಟ್ಟೆಯಲ್ಲಿ ಸುತ್ತಿ. ಅದನ್ನು ನಿಮ್ಮ ವಾರ್ಡ್ರೋಬ್‌ನಲ್ಲಿ ಇರಿಸಿ. ಇದರ ಪರಿಮಳವು ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕಪಾಟಿನ ಮೂಲೆಯಲ್ಲಿ ಜಮಾಗೊಳ್ಳುವ ಚಿಕ್ಕ ಕೀಟಗಳನ್ನು ಓಡಿಸಲು ಇದು ಉಪಯುಕ್ತವಾಗಿದೆ.

ಸಿಲಿಕಾ ಜೆಲ್ ಪ್ಯಾಕೆಟ್‌

ಹೊಸ ಶೂಗಳು, ಬ್ಯಾಗ್‌ಗಳು ಅಥವಾ ಎಲೆಕ್ಟ್ರಾನಿಕ್ಸ್‌ಗಳೊಂದಿಗೆ ಬರುವ ಸಣ್ಣ ಸಿಲಿಕಾ ಜೆಲ್ ಪ್ಯಾಕೆಟ್‌ಗಳಿಂದ ಏನೂ ಯೂಸ್ ಇಲ್ಲ ಎಂದು ಎಸೆಯಬೇಡಿ. ಅದು ತೇವಾಂಶವನ್ನು ಬಹಳ ಬೇಗನೆ ಹೀರಿಕೊಳ್ಳುತ್ತದೆ. ನಿಮ್ಮ ವಾರ್ಡ್ರೋಬ್‌ನಲ್ಲಿ ಸಿಲಿಕಾ ಜೆಲ್‌ ಪ್ಯಾಕೆಟ್‌ಗಳನ್ನು ಇಡಿ. ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಬಟ್ಟೆಗಳಲ್ಲಿ ತೇವಾಂಶ ಸೇರುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಸಣ್ಣ ವಿಷಯಗಳಿಗೆ ವಿಶೇಷ ಗಮನ ಕೊಡಿ

Exit mobile version