ರಾಮ ತುಳಸಿ Vs ಶ್ಯಾಮ ತುಳಸಿ: ವಾಸ್ತು ಪ್ರಕಾರ ಮನೆಯಲ್ಲಿ ಯಾವ ತುಳಸಿ ಇದ್ದರೆ ಲಾಭ?

ರಾಮ ತುಳಸಿ ಮತ್ತು ಶ್ಯಾಮ ತುಳಸಿ ಇವೆರಡರ ನಡುವಿನ ವ್ಯತ್ಯಾಸವೇನು? ವಾಸ್ತು ಪ್ರಕಾರ ಯಾವ ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಬೇಕು? ಇಲ್ಲಿದೆ ಓದಿ.

Ram Tulsi Vs Shyama Tulsi: ಮನೆಯ ಮುಂದೆ ತುಳಸಿಗಿಡ ಬೆಳೆಸುವುದು ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಸಂಪ್ರದಾಯ. ಹಿಂದೂಗಳಿಗೆ ತುಳಸಿ ಗಿಡ ಬಹಳ ಪವಿತ್ರವಾಗಿದೆ. ಇದರಲ್ಲಿ ಸಾಕ್ಷಾತ್‌ ಮಹಾವಿಷ್ಣು ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ. ಇದು ಅತ್ಯಂತ ಮಂಗಳಕರ ಸಸ್ಯವೆಂದು ಪರಿಗಣಿಸಲಾಗಿದೆ. ಮುಖ್ಯವಾಗಿ ತುಳಸಿಯಲ್ಲಿ ಎರಡು ರೀತಿಯ ತುಳಸಿಯನ್ನು ಪೂಜಿಸಲಾಗುತ್ತದೆ. ರಾಮ ತುಳಸಿ ಮತ್ತು ಶ್ಯಾಮ ತುಳಸಿ ಎಂದು. ನಮ್ಮಲ್ಲಿ ಬಹಳಷ್ಟು ಜನರಿಗೆ ಯಾವ ತುಳಸಿ ಹೆಚ್ಚು ಶ್ರೇಷ್ಠ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಅಷ್ಟೇ ಅಲ್ಲದೇ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎರಡೂ ತುಳಸಿಯನ್ನು ಇಟ್ಟುಕೊಳ್ಳುವುದು ಸರಿಯಾ ಎಂಬ ಪ್ರಶ್ನೆಯೂ ಇರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಇದಕ್ಕೆ ಉತ್ತರವೇನು ಎಂದ ತಿಳಿಯೋಣ.

ರಾಮ ತುಳಸಿ ಮತ್ತು ಶ್ಯಾಮ ತುಳಸಿ ಇವೆರಡರ ನಡುವಿನ ವ್ಯತ್ಯಾಸವೇನು?

ರಾಮ ತುಳಸಿ: ಇದರ ಎಲೆಗಳು ತಿಳಿ ಹಸಿರು ಬಣ್ಣದ್ದಾಗಿದ್ದು ಸ್ವಲ್ಪ ಸಿಹಿ ರುಚಿಯನ್ನು ಹೊಂದಿರುತ್ತವೆ. ಪುರಾಣಗಳ ಕಥೆಯ ಪ್ರಕಾರ, ಇದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ನೆಲೆಸುವಂತೆ ಮಾಡುತ್ತದೆ.

ಶ್ಯಾಮ ತುಳಸಿ: ಇದರ ಎಲೆಗಳು ಗಾಢ ನೇರಳೆ ಬಣ್ಣದಲ್ಲಿರುತ್ತವೆ. ಇದರ ಬಣ್ಣವು ಶ್ರೀಕೃಷ್ಣನ (ಶ್ಯಾಮ) ಬಣ್ಣವನ್ನು ಹೋಲುವುದರಿಂದ, ಇದನ್ನು ಶ್ಯಾಮ ಅಥವಾ ಕೃಷ್ಣ ತುಳಸಿ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಇದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ.

ವಾಸ್ತು ಶಾಸ್ತ್ರದಲ್ಲಿ ಇದಕ್ಕಿರುವ ಮಹತ್ವ

ಇದನ್ನೂ ಓದಿ: ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟ ಬದಲಿಸಲಿವೆ 4 ಸಸ್ಯಗಳು: ಈ ದಿಕ್ಕಿನಲ್ಲಿ ನೆಡುವುದನ್ನು ಮಾತ್ರ ಮರೆಯಬೇಡಿ

ಯಾವ ತುಳಸಿಯನ್ನು ಮನೆಯಲ್ಲಿ ಬೆಳೆಸಬೇಕು?

ವಾಸ್ತು ಶಾಸ್ತ್ರದ ಪ್ರಕಾರ ನೀವು ರಾಮ ತುಳಸಿ ಮತ್ತು ಶ್ಯಾಮ ತುಳಸಿ ಎರಡನ್ನೂ ಮನೆಯಲ್ಲಿ ಬೆಳೆಸಬಹುದು. ರಾಮ ತುಳಸಿ ಪರಸ್ಪರ ಪ್ರೀತಿ ಮತ್ತು ಮನಸ್ಸಿನ ಶಾಂತಿಯನ್ನು ತಂದರೆ ಶ್ಯಾಮ ತುಳಸಿಯು ಆರೋಗ್ಯ ಮತ್ತು ಸಂಪತ್ತಿನ ಬಾಗಿಲು ತೆರೆಯುವಂತೆ ಮಾಡುತ್ತದೆ.

Exit mobile version