ಬಿಸಿಸಿಐ ತನ್ನ ವಾರ್ಷಿಕ ಸೆಂಟ್ರಲ್ ಕಾಂಟ್ರಾಕ್ಟ್ ರೂಲ್ಸ್‌ನಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ. ಇದು ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಕ್ರಿಕೆಟ್ ಬದುಕಿನ ಮೇಳೆ ಗಂಭೀರ ಪರಿಣಾಮ ಬೀರಲಿದೆ. ಮುಂಬರುವ ಅಪ್ಘಾನಿಸ್ತಾನ ಮತ್ತು ಭಾರತ ನಡುವಿನ ಸರಣಿಯ ಮೂರು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಪಂದ್ಯಾವಳಿಗೂ ಮೊದಲ ಭಾರತದ ಕ್ರಿಕೆಟ್ ಅಂಗಳದಲ್ಲಿ ಮತಹ್ವ ಸಂಚೊಂದು ಬಯಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಾರ್ಷಿಕ ಸೆಂಟ್ರಲ್ ಕಾಂಟ್ರಾಕ್ಟ್ ನಿಯಮಾವಳಿಗಳಲ್ಲಿ ಬಾರೀ ಬದಲಾವಣೆಗೆ ಮುಂದಾಗಿದೆ. ಇದುವರೆಗೆ ಕ್ರಿಕೆಟ್ ಆಟಗಾರರ ಹಿರಿತರ, ಅನುಭವ ಮತ್ತು ಅವರ ಬ್ರ್ಯಾಂಡ್ ಮೌಲ್ಯಗಳ ಆಧಾರದ ಮೇಲೆ ಅವರಿಗೆ ಗುತ್ತಿಗೆಯನ್ನು ನೀಡಲಾಗುತ್ತಿದ್ದು, ಎ+, ಎ, ಬಿ ಮತ್ತು ಸಿ ಗ್ರೇಡ್ ನೀಡಲಾಗುತ್ತಿತ್ತು. ಆದರೆ ಇದೀಗ ಬಿಸಿಸಿಐ ಪಂದ್ಯಗಳ ಲಭ್ಯತೆ, ಫಿಟ್ನೆಸ್ ಆಧಾರದ ಮೇಲೆ ಆಟಗಾರರ ಗ್ರೇಡ್ ಪರಿಗಣನೆಗೆ ಮುಂದಾಗಿದೆ. ಒಬ್ಬ ಆಟಗಾರ ಒಂದು ಋತುವಿನಲ್ಲಿ ಒಟ್ಟು ಎಷ್ಟು ಪಂದ್ಯಗಳಲ್ಲಿ ಲಭ್ಯವಿದ್ದಾರೆ ಅನ್ನೋ ಆಧಾರದ ಮೇಲೆ ವಾರ್ಷಿಕ ಒಪ್ಪಂದ ನೀಡಲಾಗುತ್ತದೆ.
ಕಳೆದ ಕೆಲವು ತಿಂಗಳಿನಿಂದ ಟೀಮ್ ಇಂಡಿಯಾದ ಆಟಗಾರರು ಸತತವಾಗಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಲೇ ಪ್ರಮುಖ ಅಂತರಾಷ್ಟ್ರೀಯ ಸರಣಿಯಿಂದಲೂ ಹೊರಗುಳಿಯುತ್ತಿದ್ದರೆ, ಇದೇ ಕಾರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ, ಆಟಗಾರರು ಹೆಚ್ಚು ಪಂದ್ಯಗಳನ್ನು ಆಡುವುದನ್ನು ಕಡ್ಡಾಯ ಮಾಡಲಿದೆ. ಅದ್ರಲ್ಲೂ ಕನಿಷ್ಠ ಪಂದ್ಯಗಳ ಮಾನದಂಡ ಜಾರಿಗೆ ಬಂದ್ರೆ ಕೆಲವು ದಿಗ್ಗಜ ಆಟಗಾರರು ಸಮಸ್ಯೆಯ ಸುಳಿಗೆ ಸುಲುಕುವುದು ಬಹುತೇಕ ಖಚಿತ.
ಬಿಸಿಸಿಐ ಈ ಹೊಸ ರೂಲ್ಸ್ ಜಾರಿಗೆ ತರಂದರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇಬ್ಬರು ಆಟಗಾರರು ಕೆಲವೇ ಕೆಲವೇ ಸರಣಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇಡೀ ಋತುವಿನಲ್ಲಿ ಆಡುವ ಪಂದ್ಯಗಳ ಸಂಖ್ಯೆಗಿಂತ ಕಡಿಮೆ ಇರುವುದುರಿಂದ ಬಿಸಿಸಿಐ ನಿಗದಿ ಪಡಿಸಿರುವ ಕನಿಷ್ಠ ಪಂದ್ಯಗಳ ಆಟದ ಸಂಖ್ಯೆಯನ್ನು ಇಬ್ಬರಿಗೂ ತಲುಪುವಕ್ಕೆ ಸಾಧ್ಯವಾಗದೇ ಇರುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಶ್ರೇಣಿಯಲ್ಲಿ ಬಾರೀ ಬದಲಾವಣೆ ಆಗಲಿದೆ. ಅಷ್ಟೇ ಅಲ್ಲದೇ ಸೆಂಟ್ರಲ್ ಕಾಂಟ್ರಾಕ್ಟ್‌ನಿಂದಲೇ ಹೊರಗುಳಿಯುವ ಸಾಧ್ಯತೆಯಿದೆ.