ಮಹಿಳಾ ಏಷ್ಯಾಕಪ್ 2026 : ಥಾಯ್ಲೆಂಡ್‌ಗೆ 94 ರನ್‌ಗಳ ಭರ್ಜರಿ ಸೋಲುಣಿಸಿದ ಟೀಂ ಇಂಡಿಯಾ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು.
ಮಹಿಳಾ ಟಿ20 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವನಿತೆಯರ ತಂಡವು ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದೆ. ಆರಂಭಿಕ ಪಂದ್ಯದಲ್ಲೇ ಸಂಘಟಿತ ಪ್ರದರ್ಶನ ನೀಡಿದ ಭಾರತೀಯ ಪಡೆ, ಥಾಯ್ಲೆಂಡ್ ತಂಡದ ವಿರುದ್ಧ 94 ರನ್‌ಗಳ ಬೃಹತ್ ಜಯ ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಶಫಾಲಿ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿ ಈ ಗೆಲುವಿನ ಪ್ರಮುಖ ಹೈಲೈಟ್ಸ್ ಆಗಿದ್ದವು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಆರಂಭದಿಂದಲೇ ಥಾಯ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 36 ಎಸೆತಗಳನ್ನು ಎದುರಿಸಿದ ಶಫಾಲಿ 8 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 64 ರನ್ ಸಿಡಿಸಿ ತಂಡದ ಮೊತ್ತಕ್ಕೆ ಆಧಾರವಾದರು. ಉಳಿದಂತೆ ಪ್ರತಿಕಾ ರಾವಲ್ 22 ರನ್ ಹಾಗೂ ಸ್ಮೃತಿ ಮಂಧಾನ 19 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಸಣ್ಣ ಕುಸಿತ ಕಂಡರೂ, ಕೆಳ ಕ್ರಮಾಂಕದಲ್ಲಿ ಕ್ರಾಂತಿ ಗೌಡ್ ಅಜೇಯ 15 ರನ್ ಕಲೆಹಾಕುವ ಮೂಲಕ ತಂಡ ಗೌರವಾನ್ವಿತ ಮೊತ್ತ ತಲುಪಲು ನೆರವಾದರು.
ಬಳಿಕ 160 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಥಾಯ್ಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ರನ್ ಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಭಾರತದ ನಿಖರ ಬೌಲಿಂಗ್ ದಾಳಿಗೆ ತತ್ತರಿಸಿದ ಥಾಯ್ಲೆಂಡ್, 16 ಓವರ್‌ಗಳಲ್ಲೇ ಕೇವಲ 65 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಶರಣಾಯಿತು. ಎದುರಾಳಿ ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ನನ್ನಪತ್ ಕೊಂಚರೋಯೆಂಕೈ ಏಕಾಂಗಿ ಹೋರಾಟ ನಡೆಸಿದ್ದನ್ನು ಹೊರತುಪಡಿಸಿದರೆ, ಉಳಿದ ಯಾವುದೇ ಬ್ಯಾಟರ್‌ಗಳು ಒಂದಂಕಿ ದಾಟಲು ಸಾಧ್ಯವಾಗಲಿಲ್ಲ. ಭಾರತದ ಪರ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂದಿನಿ ಶರ್ಮಾ ಹಾಗೂ ದೀಪ್ತಿ ಶರ್ಮಾ ತಲಾ 3 ವಿಕೆಟ್ ಕಬಳಿಸಿ ಎದುರಾಳಿಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಶ್ರೀ ಚರಣಿ 2 ವಿಕೆಟ್ ಪಡೆದು ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು.
Topics
ಸಂಬಂಧಿತ ಸುದ್ದಿಗಳು
cricket
ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20 ಪಂದ್ಯ: ಸಂಜು ಸ್ಯಾಮ್ಸನ್ ಔಟ್, ವೈಭವ್ ಸೂರ್ಯವಂಶಿಗೆ ಬಿಗ್ ಚಾನ್ಸ್
cricket
ಮಂದಾನ, ಶಫಾಲಿ, ಶ್ರೀ ಚರಣಿ ಭರ್ಜರಿ ಆಟ : ಭಾರತದ ವಿರುದ್ದ ಶ್ರೀಲಂಕಾ ಪಡೆ ದೂಳೀಪಟ
cricket
ಬಿಸಿಸಿಐ ಹೊಸ ರೂಲ್ಸ್, ರೋಹಿತ್, ಕೊಹ್ಲಿಗೆ ಬಿಗ್ ಶಾಕ್ : ಕೊನೆಗೂ ಬಯಲಾಯ್ತು ಮಹಾ ಸಂಚಿನ ಕಂಪ್ಲೀಟ್ ರಿಪೋರ್ಟ್
cricket

