Pakistan vs India : ಹೈ-ವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧ: ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಭಾರತ-ಪಾಕ್ ಮಹಾಹೋರಾಟ
2027ರ ಏಕದಿನ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ವಿಶ್ವಕಪ್‌ಗೆ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಇದೀಗ ಏಷ್ಯನ್ ಗೇಮ್ಸ್ (Asian Games 2026)ನಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ವೈರಿಗಳಾಗಿದ್ದ ಭಾರತ ಮತ್ತು ಪಾಕಿಸ್ತಾನ (India vs Pakistan Match) ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡೋದಕ್ಕೆ ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿದೆ.
2027ರ ಏಕದಿನ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ನಾಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕಕ್ಕಾಗಿ ಕಾದಾಟ ನಡೆಸಲಿವೆ. ಬಲಿಷ್ಠ ಭಾರತ ತಂಡವನ್ನು ಎದುರಿಸೋದಕ್ಕೆ ಪಾಕಿಸ್ತಾನ ಕೂಡ ತುದಿಗಾಲಲ್ಲಿ ನಿಂತಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಹಾಗೂ ಸಾಹಿಬ್ಜಾದಾ ಫರ್ಹಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಕಣಕ್ಕೆ ಇಳಿಯುತ್ತಿವೆ. ಎರಡೂ ತಂಡಗಳು ಪರಸ್ಪರ ಏಷ್ಯನ್ ಗೇಮ್ಸ್‌ನಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿವೆ.
ಭಾರತಕ್ಕೆ ಬ್ಯಾಟಿಂಗ್, ಬೌಲಿಂಗ್ ಬಲ
ಯುವ ಸ್ಪೋಟಕ ಆಟಗಾರ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶಾನ್ ಜೊತೆಗೆ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ. ಎಲ್ಲಾ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಕೇವಲ ಇಬ್ಬರು ಆಟಗಾರ ಸಿಡಿದೆದ್ದರೂ ಕೂಡ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸುವುದಕ್ಕೆ ಸಾಧ್ಯ.
ಬ್ಯಾಟಿಂಗ್ ಮಾತ್ರವಲ್ಲ ಜಸ್ಪ್ರಿತ್ ಬೂಮ್ರಾ ಬೌಲಿಂಗ್ ಬಲದ ಮೊದಲ ಅಸ್ತ್ರ. ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಅಕ್ಷರ್ ಪಟೇಲ್ ಯಾವುದೇ ಕ್ಷಣದಲ್ಲಿಯೂ ಎದುರಾಳಿಗಳನ್ನು ಕಟ್ಟಿ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಭಾರತಕ್ಕೆ ಸವಾಲೊಡ್ಡುತ್ತಾ ಪಾಕಿಸ್ತಾನ ತಂಡ
ಸದ್ಯ ಪಾಕಿಸ್ತಾನ ತಂಡ ಕೂಡ ಬಲಿಷ್ಠವಾಗಿದೆ. ನಾಯಕ ಸಾಹಿಬ್ಜಾದಾ ಫರ್ಹಾನ್, ಉಸ್ಮಾನ್ ಖಾನ್, ಸೈಮ್ ಅಯೂಬ್ ಹಾಗೂ ಮೊಹಮ್ಮದ್ ವಾಸಿಮ್ ಜೂನಿಯರ್ ಸೇರಿದಂತೆ ಹಲವು ಪ್ರತಿಭಾವಂತ ಆಟಗಾರರಿದ್ದು, ಭಾರತ ತಂಡಕ್ಕೆ ಸವಾಲು ಒಡ್ಡಲಿದ್ದಾರೆ.
ಭಾರತ - ಪಾಕ್ ಬಲಾಢ್ಯರು ಯಾರು ?
ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೆ ಟಿ20, ಏಕದಿನ ಹಾಗೂ ಟೆಸ್ಟ್ ಸೇರಿದಂತೆ ಒಟ್ಟು 212 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.
ಭಾರತದ ಗೆಲುವು : ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ದ ಇದುವರೆಗೆ ಒಟ್ಟು 80 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಪಾಕಿಸ್ತಾನದ ಗೆಲುವು: ಪಾಕಿಸ್ತಾನ ತಂಡವು ಭಾರತದ ವಿರುದ್ದ ಒಟ್ಟು 88 ಪಂದ್ಯಗಳಲ್ಲಿ ಜಯಿಸಿದೆ.
ಡ್ರಾ/ರದ್ದಾದವು: 44 ಪಂದಗಳು ಯಾವುದೇ ಫಲಿತಾಂಶವನ್ನು ಕಾಣದ ಅಂತ್ಯಗೊಂಡಿವೆ.
ಟಿ20 ಕ್ರಿಕೆಟ್‌ನಲ್ಲಿ ಎರಡೂ ತಂಡಗಳು ಒಟ್ಟು 17 ಬಾರಿ ಮುಖಾಮುಖಿಯಾಗಿದ್ದು, ಭಾರತವು 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದೆ. ಅಲ್ಲದೆ, ಐಸಿಸಿ ಟೂರ್ನಿ ಮತ್ತು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ವಿರುದ್ದ ಭಾರತವೇ ಮೇಲುಗೈ ಸಾಧಿಸಿದೆ.
ಭಾರತ ತಂಡ : ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (WK), ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಕ್ಷರ್ ಪಟೇಲ್, ತಿಲಕ್ ವರ್ಮಾ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ಯಶ್ ಠಾಕೂರ್, ವಿಪ್ರಜ್ ನಿಗಮ್
ಪಾಕಿಸ್ತಾನ ತಂಡ : ಸಾಹಿಬ್ಜಾದಾ ಫರ್ಹಾನ್ (ನಾಯಕ), ಮಾಜ್ ಸದಾಕತ್, ಉಸ್ಮಾನ್ ಖಾನ್ (WK), ಸೈಮ್ ಅಯೂಬ್, ಹಸನ್ ನವಾಜ್, ಅಬ್ದುಲ್ ಸಮದ್, ಅರಾಫತ್ ಮಿನ್ಹಾಸ್, ಅಹ್ಮದ್ ದನಿಯಾಲ್, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮೊಕಿಮ್, ಸಾದ್ ಮಸೂದ್, ಜಾಲಿ ರಜಾ, ಅಲಿ ರಜಾ,
Topics
ಸಂಬಂಧಿತ ಸುದ್ದಿಗಳು
cricket
ICC Cricket World Cup 2027 : ಐಸಿಸಿ ಏಕದಿನ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ : ಆಸ್ಟ್ರೇಲಿಯಾ - ಭಾರತ ಮುಖಾಮುಖಿ, ಪಾಕ್ ಪಂದ್ಯ ಯಾವಾಗ
cricket
ಶುಭಮನ್ ಗಿಲ್ ವಿಶ್ವದಲ್ಲೇ ಅತಿ ವೇಗದ ದ್ವಿಶತಕ: ಗುವಾಹಟಿಯಲ್ಲಿ ದಾಖಲೆಗಳ ಸುರಿಮಳೆ
cricket
Cricket Live IND vs WI : ಭಾರತಕ್ಕೆ 406 ಟಾರ್ಗೇಟ್ : ಕ್ಯಾಂಬೆಲ್, ಹೋಪ್, ಜಾನ್ಗೋ ಆರ್ಭಟ
cricket

