Kannada News Next

cricket

Cricket Live IND vs WI : ಭಾರತಕ್ಕೆ 406 ಟಾರ್ಗೇಟ್‌ : ಕ್ಯಾಂಬೆಲ್‌, ಹೋಪ್‌, ಜಾನ್ಗೋ ಆರ್ಭಟ

ಜಾನ್‌ ಕ್ಯಾಂಬೆಲ್‌ 68 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 9 ಬೌಂಡರಿ ನೆರವಿನಿಂದ ಸ್ಪೋಟ 101ರನ್‌ ಬಾರಿಸಿ ಔಟಾದ್ರೆ, ಶಾಯ್‌ ಹೋಪ್‌ 94 ಎಸೆತಗಳಲ್ಲಿ 104 ರನ್‌ ಸಿಡಿಸಿದ್ರು. ನಂ

By Arun Gundmi | ಅರುಣ್‌ ಗುಂಡ್ಮಿ Editor-in-Chief
Photo: BCCI

ಗುಹಾಹಟಿ : ಭಾರತ - ವೆಸ್ಟ್‌ ಇಂಡಿಸ್‌ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್‌ಇಂಡಿಸ್‌ ಆಟಗಾರರು ಆರ್ಭಟಿಸಿದ್ದಾರೆ. ಜಾನ್‌ ಕ್ಯಾಂಬೆಲ್‌, ಶೈಹೋಪ್‌, ಅಮಿರ್‌ ಜಾನ್ಗೋ ಅವರ ಸ್ಪೋಟಕ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಬರೋಬ್ಬರಿ ರನ್‌ ಪೇರಿಸಿದೆ.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್‌ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಕನ್ನಡಿಗ ಪ್ರಸಿದ್ದ ಕೃಷ್ಣ ವೆಸ್ಟ್‌ ಇಂಡಿಸ್‌ ತಂಡಕ್ಕೆ ಆರಂಭಿಕ ಆಘಾತವನ್ನು ನೀಡಿದ್ದರು. ನಂತರ ಜಾನ್‌ ಕ್ಯಾಂಬೆಲ್‌ ಜೊತೆಯಾದ ನಾಯಕ ಶಾಯ್‌ ಹೋಪ್‌ ಭರ್ಜರಿ ಶತಕದ ಜೊತೆಯಾಟ ಆಡಿದ್ರು.

ಆರಂಭಿಕನಾಗಿ ಕಣಕ್ಕೆ ಇಳಿದ ಜಾನ್‌ ಕ್ಯಾಂಬೆಲ್‌ 68 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 9 ಬೌಂಡರಿ ನೆರವಿನಿಂದ ಸ್ಪೋಟ 101ರನ್‌ ಬಾರಿಸಿ ಔಟಾದ್ರೆ, ಶಾಯ್‌ ಹೋಪ್‌ 94 ಎಸೆತಗಳಲ್ಲಿ 104 ರನ್‌ ಸಿಡಿಸಿದ್ರು. ನಂತರ ಶಾಯ್‌ ಹೋಪ್‌ಗೆ ಜೊತೆಯಾದ ಅಮೀರ್ ಜಂಗೂ ಸ್ಪೋಟಕ ಆಟಕ್ಕೆ ಮನ ಮಾಡಿದ್ರು.

ಅಮಿರ್‌ ಜಂಗೂ 77 ಎಸೆತಗಳಲಿ 3 ಸಿಕ್ಸರ್‌, 13 ಬೌಂಡರಿ ನೆರವಿನಿಂದ 114 ರನ್‌ ಬಾರಿಸುವ ಮೂಲಕ ವೆಸ್ಟ್‌ ಇಂಡಿಸ್‌ ತಂಡವನ್ನು ಮುನ್ನೂರರ ಗಡಿ ದಾಟಿಸಿದ್ರು. ಅಂತಿಮವಾಗಿ ವೆಸ್ಟ್‌ ಇಂಡಿಸ್‌ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 405ರನ್‌ ಬಾರಿಸಿದೆ.

ವೆಸ್ಟ್‌ ಇಂಡಿಸ್‌ ತಂಡದ ಆಟಗಾರರು ಆರಂಭದಿಂದಲೇ ಭಾರತೀಯ ಬೌಲರ್‌ಗಳನ್ನು ದಂಡಿಸಿದ್ರು. ಗುರ್ನೂರ್ ಬ್ರಾರ್ 2, ರವೀಂದ್ರ ಜಡೇಜಾ 2, ಕುಲದೀಪ್‌ ಯಾದವ್‌ 2 ಹಾಗೂ ಪ್ರಸಿದ್ದ ಕೃಷ್ಣ 1 ವಿಕೆಟ್‌ ಪಡೆದಿದ್ದಾರೆ. ಅದ್ರಲ್ಲೂ ಔಕಿಬ್ ನಬಿ ಬಲು ದುಬಾರಿಯಾಗಿ ಪರಿಣಮಿಸಿದ್ರು.

ಭಾರತದ ಬ್ಯಾಟಿಂಗ್‌ ಪಡೆ ಹೆಚ್ಚು ಬಲಿಷ್ಠವಾಗಿದೆ. ಬ್ಯಾಟಿಂಗ್‌ ಸ್ನೇಹಿಯಾಗಿರುವ ಪಿಚ್‌ ನಲ್ಲಿ ಭಾರತೀಯ ಆಟಗಾರರು ಪಂದ್ಯದ ಗತಿಯನ್ನೇ ಬದಲಿಸುವ ನಿರೀಕ್ಷೆಯಿದೆ. ಅದ್ರಲ್ಲೂ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌, ರುತುರಾಜ್‌ ಗಾಯಕ್ವಾಡ್‌ಭರ್ಜರಿ ಫಾರ್ಮ್‌ನಲ್ಲಿ ಇರುವುದು ಭಾರತ ತಂಡಕ್ಕೆ ಪ್ಲಸ್‌ ಪಾಯಿಂಟ್.‌

ಭಾರತ ತಂಡ : ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ರುತುರಾಜ್ ಗಾಯಕವಾಡ್‌, ಕೆಎಲ್ ರಾಹುಲ್ (ವಿಕೆಟ್‌ ಕೀಪರ್)‌, ನಮನ್ ಧೀರ್, ರವೀಂದ್ರ ಜಡೇಜಾ, ಔಕಿಬ್ ನಬಿ, ಗುರ್ನೂರ್ ಬ್ರಾರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ

ವೆಸ್ಟ್‌ಇಂಡಿಸ್‌ ತಂಡ : ಜಾನ್ ಕ್ಯಾಂಪ್‌ಬೆಲ್, ಕೀಸಿ ಕಾರ್ಟಿ, ಶಾಯ್ ಹೋಪ್ (ನಾಯಕ, ವಿಕೆಟ್ ಕೀಪರ್), ಅಮೀರ್ ಜಂಗೂ, ಶರ್ಫೇನ್ ರುದರ್‌ಫೋರ್ಡ್, ರೋಸ್ಟನ್ ಚೇಸ್, ಕೀಮೋ ಪಾಲ್, ಅಲ್ಜಾರಿ ಜೋಸೆಫ್, ಶಮಾರ್ ಜೋಸೆಫ್, ಜೇಡನ್ ಸೀಲ್ಸ್, ವಿಟೆಲ್ ಲಾಸ್