ಐಸಿಸಿ ಕ್ರಾಂತಿಕಾರಕ ನಿರ್ಧಾರ: ಏಕದಿನ ವಿಶ್ವಕಪ್‌ನಲ್ಲೂ 'ಸ್ಟಾಪ್ ಕ್ಲಾಕ್' ನಿಯಮ ಕಡ್ಡಾಯ, ಪಂದ್ಯ ವಿಳಂಬಕ್ಕೆ ಬೀಳಲಿದೆ ಬ್ರೇಕ್
ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳು ನಿಗದಿತ ಅವಧಿಗಿಂತಲೂ ಗಂಟೆಗಟ್ಟಲೆ ಹೆಚ್ಚು ಕಾಲ ಸುದೀರ್ಘವಾಗಿ ಎಳೆಯುವುದಕ್ಕೆ ಬ್ರೇಕ್ ಹಾಕಲು ಅಂತರರಾಷ್ಟ್ರೀಯ ಕ್ರಿಕೆಟ್ ಮುಂದಾಗಿದೆ.
ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳು ನಿಗದಿತ ಅವಧಿಗಿಂತಲೂ ಗಂಟೆಗಟ್ಟಲೆ ಹೆಚ್ಚು ಕಾಲ ಸುದೀರ್ಘವಾಗಿ ಎಳೆಯುವುದಕ್ಕೆ ಬ್ರೇಕ್ ಹಾಕಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಟಿ20 ಮಾದರಿಯಲ್ಲಿ ಯಶಸ್ವಿಯಾಗಿದ್ದ ಕ್ರಾಂತಿಕಾರಕ 'ಸ್ಟಾಪ್ ಕ್ಲಾಕ್' ಪದ್ಧತಿಯನ್ನು ಇದೀಗ ಮುಂಬರುವ 2027ರ ಏಕದಿನ ವಿಶ್ವಕಪ್ ಒಳಗೊಂಡಂತೆ ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಇದು ನಾಯಕರು ಮತ್ತು ಬೌಲರ್‌ಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಹೊಸ ಗಡಿಯಾರದ ನಿಯಮದ ಪ್ರಕಾರ, ಮೈದಾನದಲ್ಲಿನ ಡಿಜಿಟಲ್ ಪರದೆಯ ಮೇಲೆ 60 ಸೆಕೆಂಡುಗಳ ಕೌಂಟ್‌ಡೌನ್ ರನ್ ಆಗುವ ಮೂಲಕ ಪಂದ್ಯದ ವೇಗಕ್ಕೆ ಚುರುಕು ಮುಟ್ಟಿಸಲಾಗುತ್ತದೆ. ಒಂದು ಓವರ್ ಪೂರ್ಣಗೊಂಡ ತಕ್ಷಣ ಮೂರನೇ ಅಂಪೈರ್ ಈ ಗಡಿಯಾರವನ್ನು ಆನ್ ಮಾಡುತ್ತಾರೆ. ಫೀಲ್ಡಿಂಗ್ ಮಾಡುವ ತಂಡವು ಮುಂದಿನ ಒಂದು ನಿಮಿಷದ ಒಳಗಾಗಿ ಮುಂದಿನ ಓವರ್‌ನ ಮೊದಲ ಎಸೆತವನ್ನು ಎಸೆಯಲು ಸಜ್ಜಾಗಬೇಕಿರುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ.
ಸಮಯ ವ್ಯರ್ಥ ಮಾಡುವ ಫೀಲ್ಡಿಂಗ್ ತಂಡಗಳಿಗೆ ಐಸಿಸಿ ಕಠಿಣ ದಂಡದ ನಿಯಮ ರೂಪಿಸಿದೆ. ಬೌಲಿಂಗ್ ತಂಡವು ಒಂದು ಇನ್ನಿಂಗ್ಸ್‌ನಲ್ಲಿ ಮೊದಲ ಎರಡು ಬಾರಿ ನಿಗದಿತ ಸಮಯ ಮೀರಿದರೆ ಅಂಪೈರ್‌ಗಳು ಕೇವಲ ಎಚ್ಚರಿಕೆ ನೀಡುತ್ತಾರೆ. ಆದರೆ, ಮೂರನೇ ಬಾರಿಯೂ ಅದೇ ತಪ್ಪನ್ನು ಪುನರಾವರ್ತಿಸಿದರೆ ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ ಉಡುಗೊರೆಯಾಗಿ ನೇರವಾಗಿ 5 ಪೆನಾಲ್ಟಿ ರನ್‌ಗಳನ್ನು ನೀಡಲಾಗುತ್ತದೆ.
ಪಂದ್ಯದ ಸಂದರ್ಭದಲ್ಲಿ ವಿಕೆಟ್ ಬಿದ್ದು ಹೊಸ ಬ್ಯಾಟರ್ ಕ್ರೀಸ್ ತಲುಪಲು ತಡವಾದಾಗ, ಆಟಗಾರರು ಗಾಯಗೊಂಡು ಫಿಸಿಯೋ ಮೈದಾನಕ್ಕೆ ಬಂದಾಗ ಮತ್ತು ಬ್ಯಾಟಿಂಗ್ ತಂಡದ ಕಡೆಯಿಂದ ವಿಳಂಬವಾದಾಗ ಮಾತ್ರ ಈ ಗಡಿಯಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ. ಈ ಹೊಸ ನಿಯಮದಿಂದಾಗಿ ಪಂದ್ಯಗಳು ಸರಾಸರಿ 25 ನಿಮಿಷಗಳಷ್ಟು ಬೇಗ ಮುಕ್ತಾಯಗೊಳ್ಳುತ್ತಿದ್ದು, ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಇದು ಪಂದ್ಯದ ಜಯದ ಹಣೆಬರಹವನ್ನೇ ಬದಲಿಸುವ ಸಾಧ್ಯತೆಯಿದೆ.
Topics
ಸಂಬಂಧಿತ ಸುದ್ದಿಗಳು
cricket
ಏಕದಿನ ಕ್ರಿಕೆಟ್ನಲ್ಲಿ ಬ್ಯಾಟರ್ಗಳ ರನ್ ಸುನಾಮಿಗೆ ಬ್ರೇಕ್
cricket
ಅಜಿತ್ ಅಗರ್ಕರ್ ಔಟ್, ಪಾರ್ಥಿವ್ ಪಟೇಲ್ ಇನ್ : ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಗುಡ್ನ್ಯೂಸ್
cricket
ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20 ಪಂದ್ಯ: ಸಂಜು ಸ್ಯಾಮ್ಸನ್ ಔಟ್, ವೈಭವ್ ಸೂರ್ಯವಂಶಿಗೆ ಬಿಗ್ ಚಾನ್ಸ್
cricket

