News Next Kannada

cricket

ಐಪಿಎಲ್ 2027 : ಕೆಕೆಆರ್‌ ಅಥವಾ ಡೆಲ್ಲಿ ಕ್ಯಾಪಿಟಲ್ಸ್‌ ಸೇರ್ತಾರಾ ಹಾರ್ದಿಕ್ ಪಾಂಡ್ಯ

2027ರ ಐಪಿಎಲ್‌ ಮೆಗಾ ಹರಾಜಿಗೂ ಮೊದಲೇ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಟಗಾರ ಹಾರ್ದಿಕ್‌ ಪಾಂಡ್ಯ ಅವರ ಕ್ರಿಕೆಟ್‌ ಭವಿಷ್ಯದ ಕುರಿತು ಚರ್ಚೆಗಳು ಜೋರಾಗಿವೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
IPL 2027 Hardik Pandya May Join KKR or Delhi Capitals

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2027ರ ಋತುವಿಗೆ ಈಗಾಗಲೇ ಸಿದ್ದತೆಗಳು ಶುರುವಾಗಿದೆ. ಅದ್ರಲ್ಲೂ ಮುಂಬೈ ಇಂಡಿಯನ್ಸ್‌ ತಂಡ ಹಾಗೂ ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಲ್‌ ರೌಂಡರ್‌ ಆಟಗಾರ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತೊರೆಯುವುದು ಬಹುತೇಕ ಫಿಕ್ಸ್‌ ಆಗಿದೆ. ಈ ನಡುವಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡಗಳು ಈ ಆಟಗಾರನ ಸೇರ್ಪಡೆಗೆ ಕಾತರವಾಗಿವೆ,

2027ರ ಐಪಿಎಲ್‌ ಮೆಗಾ ಹರಾಜಿಗೂ ಮೊದಲೇ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಟಗಾರ ಹಾರ್ದಿಕ್‌ ಪಾಂಡ್ಯ ಅವರ ಕ್ರಿಕೆಟ್‌ ಭವಿಷ್ಯದ ಕುರಿತು ಚರ್ಚೆಗಳು ಜೋರಾಗಿವೆ. ಕ್ರಿಕ್‌ಬುಜ್‌ ವರದಿಯ ಪ್ರಕಾರ ಮುಂದಿನ ಐಪಿಎಲ್‌ ಋತುವಿಗೂ ಮೊದಲೇ ಸ್ಟಾರ್‌ ಆಲ್‌ರೌಂಡರ್‌ ಆಟಗಾರ ಮುಂಬೈ ತೊರೆದು ಬೇರೆ ತಂಡ ಸೇರ್ಪಡೆ ಆಗುವ ಸಾಧ್ಯತೆಯಿದೆ.

ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ನಲ್ಲಿ ಸದ್ಯ ಕೊನೆಯ ಸ್ಥಾನದಲ್ಲಿದೆ. ಹಾರ್ದಿಕ್‌ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಲಲು ಹಲವು ತಂಡಗಳು ಯೋಚಿಸುತ್ತಿವೆ. ಹಾಗಾದ್ರೆ ಈ ಬಾರಿ ಹಾರ್ದಿಕ್‌ ಪಾಂಡ್ಯ ಯಾವ ತಂಡಕ್ಕೆ ಸೇರ್ಪಡೆ ಆಗ್ತಾರೆ. ಆ ತಂಡಗಳು ಯಾವ ಆಟಗಾರರನ್ನು ರಿಲೀಸ್‌ ಮಾಡೋದಕ್ಕೆ ರೆಡಿ ಆಗಿವೆ ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC) ಸೇರ್ತಾರಾ ಹಾರ್ದಿಕ್‌ ಪಾಂಡ್ಯ

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕಳೆದ ಸಾಲಿನ ಐಪಿಎಲ್‌ ಋತುವಿನಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಇದೇ ಕಾರಣದಿಂದಲೇ ಸ್ಟಾರ್‌ ಆಲ್‌ರೌಂಡರ್‌ ಆಟಗಾರ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಉತ್ಸುಕವಾಗಿದೆ, ಒಂದೊಮ್ಮೆ ಹಾರ್ದಿಕ್‌ ಪಾಂಡ್ಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೇರ್ಪಡೆ ಆದ್ರೆ ಬದಲಿಗೆ ಮತ್ತೋರ್ವ ಸ್ಟಾರ್‌ ಆಟಗಾರ ಅಕ್ಷರ್‌ ಪಟೇಲ್‌ ಅವರನ್ನು ವಿನಿಮಯ ಒಪ್ಪಂದದ ಪ್ರಕಾರ ನೀಡಬಹುದು ಎನ್ನಲಾಗುತ್ತಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪಾಲಾಗ್ತಾರಾ ಪಾಂಡ್ಯ

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಕೂಡ ಮುಂದಿನ ಐಪಿಎಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಸಜ್ಜಾಗಿದೆ. ಆದರೆ ಯಾವುದೇ ಭಾರತೀಯ ಆಟಗಾರನನ್ನು ತಂಡದಿಂದ ಬಿಟ್ಟು ಕೊಡುವುದಕ್ಕೆ ಕೆಕೆಆರ್‌ ತಂಡ ಸಿದ್ದವಿಲ್ಲ, ಇದೇ ಕಾರಣದಿಂದಲೇ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಅವರನ್ನು ವಿನಿಮಯ ಒಪ್ಪಂದದ ಮೂಲಕ ನೀಡುವ ಸಾಧ್ಯತೆಯಿದೆ.

ಹಾರ್ದಿಕ್‌ ಪಾಂಡ್ಯ ಮೇಲೆ ಕಣ್ಣಿಟ್ಟ 3 ಪ್ರಾಂಚೈಸಿಗಳು

ಹಾರ್ದಿಕ್‌ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಕೇವಲ ಕೋಲ್ಕತ್ತಾ ನೈಟ್‌ರೈಡರ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮಾತ್ರವಲ್ಲ, ಉಳಿದ ಮೂರು ತಂಡಗಳು ಕೂಡ ಕಸರತ್ತು ನಡೆಸುತ್ತಿವೆ. ಹಾಗಾದ್ರೆ ಆ ತಂಡಗಳು ಯಾವುವು ಅನ್ನೋ ಡೀಟೇಲ್ಸ್‌ ಇಲ್ಲಿದೆ.

ರಾಜಸ್ಥಾನ್ ರಾಯಲ್ಸ್ (RR):

ರಾಜಸ್ಥಾನ್ ರಾಯಲ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ರೆ, ಅವರ ಬದಲಿಗೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ವಿನಿಮಯ ಮಾಡಿಕೊಳ್ಳಲು ಆಸಕ್ತಿ ಹೊಂದಿದೆ. ಇದು ಕೂಡ ವಿನಿಮಯ ಒಪ್ಪಂದದಂತೆಯೇ ನಡೆಯುವ ಸಾಧ್ಯತೆಯಿದೆ.

ಲಖನೌ ಸೂಪರ್ ಜೈಂಟ್ಸ್ (LSG):

ಸ್ಫೋಟಕ ವಿಕೆಟ್ ಕೀಪರ್-ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಹಾರ್ದಿಕ್ ಪಾಂಡ್ಯ ಬದಲಿಗೆ ಬದಲಾಯಿಸುವುದನ್ನು ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರ. ಆದರೆ ಈ ಕುರಿತು ಆರಂಭಿಕ ಚರ್ಚೆಗಳು ಇಂದಿಗೂ ನಡೆಯುತ್ತಿವೆ. ಆದರೆ ಔಪಚಾರಿಕ ಮಾತುಕತೆಗಳು ಇನ್ನೂ ಪೂರ್ಣಗೊಂಡಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ (CSK):

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸಿಇಓ ಕಾಸಿ ವಿಶ್ವನಾಥ್‌ ಅವರ ಪ್ರಕಾರ, ಸಿಎಸ್‌ಕೆ ಹಾರ್ದಿಕ್ ಪಾಂಡ್ಯ ಅವರನ್ನು ಬದಲಾಯಿಸಲು ಪ್ರಯತ್ನಿಸುತ್ತಿಲ್ಲ. ಸದ್ಯ ತಂಡವು ತನ್ನ ಹೊಸ ವಿದೇಶಿ ಮುಖ್ಯ ಕೋಚ್ ಮತ್ತು ನಾಯಕತ್ವದ ಬಗ್ಗೆ ಹೆಚ್ಚು ಗಮನಹರಿಸಿದೆ. ಆದಾಗ್ಯೂ, ಹಾರ್ದಿಕ್‌ ಪಾಂಡ್ಯ CSK ಭವಿಷ್ಯದಲ್ಲಿ ರೇಸ್‌ಗೆ ಪ್ರವೇಶಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.

ಒಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಐಪಿಎಲ್‌ 2027(IPL 2027) ಕ್ಕಿಂತ ಮೊದಲೇ ಇತರ ತಂಡಗಳನ್ನು ಸೇರ್ಪಡೆಗೊಳುವುದು ಬಹುತೇಕ ಖಚಿತ. ಮುಂದಿನ ಋತುವಿನಲ್ಲಿ ಅವರು ಮುಂಬೈ ತಂಡದ ಪರ ಆಡುವ ಸಾಧ್ಯತೆ ತೀರಾ ವಿರಳ. ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್‌ ಪಾಂಡ್ಯ ಅವರನ್ನು ತನ್ನಲ್ಲಿಯೇ ಉಳಿಸಿಕೊಳ್ಳುತ್ತಾ ? ಇಲ್ಲ ಹೊಸ ತಂಡವನ್ನು ಅವರು ಕೂಡಿ ಕೊಳ್ತಾರಾ ಅನ್ನೋದನ್ನು ಇನ್ನಷ್ಟೇ ತಿಳಿದು ಬರಬೇಕಾಗಿದೆ.