ಭಾರತದ ತಂಡ ಖ್ಯಾತ ಆಟಗಾರ ರಿಷಬ್ ಪಂತ್ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಎ ಹಾಗೂ ನ್ಯೂಜಿಲೆಂಡ್ ಎ ನಡುವಿನ ಎರಡು ಅನಧಿಕೃತ ಟೆಸ್ಟ್ ಪಂದ್ಯದಿಂದ ರಿಷಬ್ ಪಂತ್ ಹೊರಬಿದ್ದಿದ್ದಾರೆ. ಪಂತ್ ಬದಲು ಇದೀಗ ಕುಮಾರ ಕುಶಾಗ್ರ ಸ್ಥಾನ ಪಡೆದಿದ್ದಾರೆ.
ಇರಾನಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಿಷಬ್ ಪಂತ್ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಪ್ರತಿನಿಧಿಸುತ್ತಿದ್ದರು. ಈ ವೇಳೆಯಲ್ಲಿ ರಿಷಬ್ ಪಂತ್ ಎಡಭಾಗದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಆದರೆ ನಿಗದಿತ ಸಮಯದ ಒಳಗಾಗಿ ಅವರು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಎ ತಂಡದ ಸರಣಿಯಿಂದ ಪಂತ್ ಅವರನ್ನು ಕೈಬಿಡಲಾಗಿದೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಎ ತಂಡದ ನಡುವಿನ ಎರಡು ಪಂದ್ಯಗಳಿಂದಲೂ ರಿಷಬ್ ಪಂತ್ ಹೊರಗುಳಿಯಲಿದ್ದಾರೆ. ಹೀಗಾಗಿ ರಿಷಬ್ ಪಂತ್ ಅವರ ಬದಲು ಆಸ್ಟ್ರೇಲಿಯಾ ಎ ಮತ್ತು ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ, ಉತ್ತಮ ಪ್ರದರ್ಶನ ನೀಡಿದ ಕುಮಾರ್ ಕುಶಾಗ್ರ ಅವರನ್ನು ಬಿಸಿಸಿಐ ತಂಡಕ್ಕೆ ಆಯ್ಕೆ ಮಾಡಿದೆ.
ಮೊದಲ ಎರಡು ಪಂದ್ಯಗಳಿಂದ ರಿಷಬ್ ಪಂತ್ ಹೊರಗುಳಿಯುವ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್‌ಗೆ ತಂಡದ ನಾಯಕತ್ವ ನೀಡಲಾಗಿದೆ. ಆದರೆ ಮೂರನೇ ಪಂದ್ಯಕ್ಕೆ ರಿಷಬ್ ಪಂತ್ ಲಭ್ಯರಾಗ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ. ಸದ್ಯ ಪಂತ್ ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ವೈದ್ಯಕೀಯ ತಂಡದ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರವೇ ಮುಂದಿನ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ಭಾರತ ಎ ತಂಡದಲ್ಲಿ ಈ ಬಾರಿ ಸ್ಮರಣ್ ರವಿಚಂದ್ರನ್, ಯಶ್ ರಾಥೋಡ್, ಮುಕೇಶ್ ಚೌದರಿ ಸೇರಿದಂತೆ ಒಟ್ಟು ಮೂವರು ಅನ್‌ಕ್ಯಾಪ್ಡ್ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ನಾಲ್ಕನೇ ಆಟಗಾರನಾಗಿ ಕುಮಾರ್ ಕುಶಾಗ್ರ ಆಯ್ಕೆಯಾಗಿದ್ದಾರೆ. ಅಲ್ಲದೇ ತಂಡದಲ್ಲಿ ಅನುಭವಿ ಆಟಗಾರರಾದ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್, ದೇವದತ್ತ ಪಡಿಕ್ಕಲ್, ಸಾಯಿ ಸುದರ್ಶನ್ ಅವರನ್ನೂ ಕೂಡ ಆಯ್ಕೆ ಮಾಡಲಾಗಿದೆ.
ಭಾರತ ಎ ತಂಡ ಕೊನೆಯ ಪಂದ್ಯವನ್ನಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ತಪ್ಪಿಸಿಕೊಳ್ಳುವುದು ಖಚಿತ. ಇಬ್ಬರೂ ಆಟಗಾರರು ಏಕದಿನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಜಿಲೆಂಡ್ ಎ ತಂಡದ ವಿರುದ್ದದ ಮೊದಲ ಪಂದ್ಯ ಅಕ್ಟೋಬರ್ 24 ರಿಂದ 28 ರವರೆಗೆ ಲಿಂಕನ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಅಕ್ಟೋಬರ್ 31 ರಿಂದ ನವೆಂಬರ್ 3 ರವರೆಗೆ ಕ್ರೈಸ್ಟ್‌ಚರ್ಚ್ ನಡೆಯಲಿದೆ. ಅಂತಿಮ ಪಂದ್ಯ ನವೆಂಬರ್ 7 ರಿಂದ 10ರ ತನಕ ಲಿಂಕನ್‌ನಲ್ಲಿ ನಡೆಯಲಿದೆ.
ಇನ್ನು ನ್ಯೂಜಿಲೆಂಡ್ ವಿರುದ್ದದ ಮೊದಲ ಮೂರು ಏಕದಿನ ಪಂದ್ಯಗಳು ನವೆಂಬರ್ 4, 7 ಮತ್ತು 10 ರಂದು ನಡೆಯಲಿದೆ. ಹೀಗಾಗಿ ಕೊನೆಯ ಅನಧಿಕೃತ ಟೆಸ್ಟ್ ಪಂದ್ಯವನ್ನು ಕೆಎಲ್ ರಾಹುಲ್, ವಾಷಿಂಗ್ಟನ್ ಮತ್ತು ಜೈಸ್ವಾಲ್ ಆಡುತ್ತಿಲ್ಲ.
ಭಾರತ 'ಎ' ತಂಡದಲ್ಲಿ ಯಾರೆಲ್ಲಾ ಇದ್ದಾರೆ ?
ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್, ರವಿಚಂದ್ರನ್ ಸ್ಮರಣ್, ಧ್ರುವ್ ಜುರೆಲ್ [ನಾಯಕ] [ವಿಕೆಟ್ ಕೀಪರ್], ವಾಷಿಂಗ್ಟನ್ ಸುಂದರ್, ಔಕಿಬ್ ನಬಿ, ಆಕಾಶ್ ದೀಪ್, ಅಂಶುಲ್ ಕಂಬೋಜ್, ಮಾನವ್ ಸುಥಾರ್, ಮುಕೇಶ್ ಚೌಧರಿ, ಸಾಯಿ ಸುದರ್ಶನ್, ಯಶ್ ರಾಥೋಡ್, ಮುಕೇಶ್ ಕುಮಾರ್, ಕುಮಾರ್ ಕುಶಾಗ್ರ [ವಿಕೆಟ್ ಕೀಪರ್]