ಆರ್‌ಸಿಬಿ ಖ್ಯಾತ ಆಟಗಾರ ಟೀಂ ಇಂಡಿಯಾ ನಾಯಕ : ವಿರಾಟ್‌ ಕೊಹ್ಲಿ ಅಲ್ಲ, ಮತ್ಯಾರು ?

ಹಾಂಗ್ ಕಾಂಗ್ ಸಿಕ್ಸಸ್ 2026' (Hong Kong Sixes 2026) ಪಂದ್ಯಾವಳಿ ನಡೆಯಲಿದ್ದು, ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಭಾರತ ಕ್ರಿಕೆಟ್‌ ತಂಡದ ನೇತೃತ್ವವನ್ನು ವಹಿಸಲಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

2 min read

WhatsAppPost
rcb star player Bhuvaneshwar Kumar india captain not virat kohli Hong Kong Sixes 2026
Photo: IPL/ BCCI

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಖ್ಯಾತ ಆಟಗಾರನಿಗೆ ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದೆ. ಆರ್‌ಸಿಬಿಯ ಖ್ಯಾತ ಬೌಲರ್‌ ಭುವನೇಶ್ವರ್‌ ಕುಮಾರ್‌ ಭಾರತ ತಂಡದ ನಾಯಕನಾಗಲಿದ್ದಾರೆ.

ಅಕ್ಟೋಬರ್‌ ಅಂತ್ಯದಲ್ಲಿ 'ಹಾಂಗ್ ಕಾಂಗ್ ಸಿಕ್ಸಸ್ 2026' (Hong Kong Sixes 2026) ಪಂದ್ಯಾವಳಿ ನಡೆಯಲಿದ್ದು, ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಭಾರತ ಕ್ರಿಕೆಟ್‌ ತಂಡದ ನೇತೃತ್ವವನ್ನು ವಹಿಸಲಿದ್ದಾರೆ. ತಂಡದಲ್ಲಿ ಕೃನಾಲ್ ಪಾಂಡ್ಯ, ನಿತೀಶ್ ರಾಣಾ, ಶಶಾಂಕ್ ಸಿಂಗ್ ಮತ್ತು ಟಿ. ನಟರಾಜನ್ ಸೇರಿದಂತೆ ಐಪಿಎಲ್ (IPL)ನ ಸ್ಟಾರ್‌ ಆಟಗಾರರು ಟೀಂ ಇಂಡಿಯಾವನ್ನು ಪ್ರತಿನಿಧಿಸಲಿದ್ದಾರೆ.

ಭುವನೇಶ್ವರ್‌ ಕುಮಾರ್‌ 2022ರ ನವೆಂಬರ್‌ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ದದ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 36 ವಯಸ್ಸಿನ ಭುವೇಶ್ವರ್‌ ಕುಮಾರ್‌ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹಾಂಗ್ ಕಾಂಗ್ ಸಿಕ್ಸಸ್ ಕ್ರಿಕೆಟ್‌ ಪಂದ್ಯಾವಳಿ ಅಕ್ಟೋಬರ್ 30 ಮತ್ತು ನವೆಂಬರ್ 1 ರಂದು ನಡೆಯಲಿದೆ.

ವಿರಾಟ್‌ ಕೊಹ್ಲಿ ಅವರು ಪ್ರತಿನಿಧಿಸುವ ಆರ್‌ಸಿಬಿ ತಂಡ ಐಪಿಎಲ್ 2026ಕ್ಕೂ 10.75 ಕೋಟಿ ರೂ.ಗೆ (retention) ಭುವನೇಶ್ವರ್ ಅವರನ್ನು ಉಳಿಸಿಕೊಂಡಿತ್ತು. ಕೃನಾಲ್ ಪಾಂಡ್ಯ, ನಿತೀಶ್ ರಾಣಾ, ಶಶಾಂಕ್ ಸಿಂಗ್, ರಾಹುಲ್ ತ್ರಿಪಾಠಿ, ರಾಹುಲ್ ತೆವಾಟಿಯಾ ಮತ್ತು ಟಿ. ನಟರಾಜನ್ ಅವರನ್ನು ಒಳಗೊಂಡ ತಂಡವನ್ನು ಮುನ್ನೆಡೆಸಲಿದ್ದಾರೆ. ಇನ್ನು ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರ ಶಶಾಂಕ್‌ ಹೊರತು ಪಡಿಸಿದ್ರೆ ಉಳಿದ ಎಲ್ಲಾ ಆಟಗಾರರು ಭಾರತ ತಂಡದ ಪರ ಆಡಿದ್ದಾರೆ.

ಕೇವಲ ಆರು ಆಟಗಾರರ ಹಾಂಗ್‌ ಕಾಂಗ್‌ ಸಿಕ್ಸಸ್‌

ಹಾಂಗ್‌ ಕಾಂಗ್‌ ಸಿಕ್ಸಸ್‌ ವಿಶೇಷ ಸ್ವರೂಪದಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಾವಳಿ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತೀ ತಂಡವು ಆರು ಮಂದಿ ಆಟಗಾರರನ್ನು ಒಳಗೊಂಡಿರಲಿದೆ. ಪಿಚ್‌ ಆಟಗಾರರು ಪಿಚ್‌ಗೆ ಹೊಂದಿಕೊಳ್ಳಲು ಮತ್ತು ಲಯ ಕಂಡುಕೊಳ್ಳುವುದಕ್ಕೆ ಅತ್ಯಂತ ಕಡಿಮೆ ಸಮಯ ಇರುತ್ತದೆ.

ಐಪಿಎಲ್‌ 2026ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಿರುವ ಭುವೇಶ್ವರ್‌ ಕುಮಾರ್‌ ಪ್ರಸ್ತುತ ಸಾಲಿನಲ್ಲಿ ಒಟ್ಟು 16 ಪಂದ್ಯಗಳನ್ನು ಆಡಿದ್ದು, 17.89 ಸರಾಸರಿಯಲ್ಲಿ ಬರೋಬ್ಬರಿ 28 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೇ RCB ಸತತ ಎರಡನೇ ಬಾರಿಗೆ ಐಪಿಎಲ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಭುವನೇಶ್ವರ್‌ ಕುಮಾರ್‌ ದೀರ್ಘಕಾಲದಿಂದಲೂ ಅಂತರರಾಷ್ಟ್ರೀಯ ಪಂದ್ಯಾವಳಿಗಳನ್ನು ಆಡುತ್ತಿದ್ದಾರೆ. ಜೊತೆಗೆ ಐಪಿಎಲ್‌( IPL) ಪಂದ್ಯಾವಳಿಯ ಅನುಭವದ ಕಾರಣದಿಂದಾಗಿ ಹೊಸ ಚಂಡಿನೊಂದಿಗೆ (new ball) ಎದುರಾಳಿಯನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಭಾರತ ತಂಡದ ಪರ ಒಟ್ಟು 87 ಟಿ20 ಪಂದ್ಯಗಳನ್ನು ಆಡಿರುವ ಭುವನೇಶ್ವರ್ ಕುಮಾರ್‌ 23.1 ರ ಸರಾಸರಿಯಲ್ಲಿ 90 ವಿಕೆಟ್‌ ಕಬಳಿಸಿದ್ದಾರೆ.

ಭುವನೇಶ್ವರ್‌ ಕುಮಾರ್‌ ಜೊತೆಗೆ ತಂಡದಲ್ಲಿರುವ ಕೃನಾಲ್‌ ಪಾಂಡ್ಯ ಕೂಡ ಹೆಚ್ಚು ಅನುಭವ ಹೊಂದಿದ್ದಾರೆ. ಐಪಿಎಲ್‌ (IPL 2026)ಕ್ಕೂ ಅವರನ್ನು ಆರ್‌ಸಿಬಿ ತಂಡ 5.75 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಂಡಿತ್ತು. 2026ರ ಐಪಿಎಲ್‌ನಲ್ಲಿ ಒಟ್ಟು ಆಡಿದ 16 ಪಂದ್ಯಗಳಲ್ಲಿ 145.8 ರ ಸ್ಟ್ರೈಕ್-ರೇಟ್‌ನೊಂದಿಗೆ 226 ರನ್ ಜೊತೆಗೆ 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಉಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾಜಿ ನಾಯಕ ನಿತೀಶ್ ರಾಣಾ ಕೂಡ ತಂಡದಲ್ಲಿದ್ದಾರೆ. ಈ ಬಾರಿ ರಾಣಾ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲಿದ್ದು, ಬ್ಯಾಟಿಂಗ್‌ ಕ್ರಮಾಂಕದಲ್ಲಿ ಭಡ್ತಿ ಹೊಂದಲಿದ್ದಾರೆ. ಅಲ್ಲದೇ ಶಶಾಂಕ್ ಸಿಂಗ್ ಹಾಗೂ ರಾಹುಲ್ ತೆವಾಟಿಯಾ ಮ್ಯಾಚ್‌ ಫಿನಿಶರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಟಿ. ನಟರಾಜನ್ ಬೌಲಿಂಗ್‌ ಪಡೆಗೆ ಶಕ್ತಿ ತುಂಬಲಿದ್ದಾರೆ.

2025ರಲ್ಲಿ ನಡೆದ ಹಾಂಗ್ ಕಾಂಗ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ದ ಗೆಲುವು ಕಂಡಿದ್ದರೂ ಕೂಡ, ಉಳಿದ ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು. ಈ ಬಾರಿಯೂ ಟೀಂ ಇಂಡಿಯಾ ಕಣಕ್ಕೆ ಇಳಿಯುತ್ತಿದೆ. ಕಳೆದ ಬಾರಿಯ ಫೈನಲ್‌ ಪಂದ್ಯದಲ್ಲಿ ಕುವೈತ್‌ ತಂಡವನ್ನು ಸೋಲಿಸಿದ ಪಾಕಿಸ್ತಾನ ಪ್ರಶಸ್ತಿಯನ್ನು ಜಯಿಸಿತ್ತು.

ಈ ಪಂದ್ಯಾವಳಿಯಲ್ಲಿ ಎಂಟು ಪ್ರಮುಖ ಕ್ರಿಕೆಟ್ ರಾಷ್ಟ್ರಗಳು ಹಾಗೂ ನಾಲ್ಕು ಸಹ ಸದಸ್ಯ ರಾಷ್ಟ್ರಗಳು ಭಾಗವಹಿಸಲಿದ್ದು, ಹಾಂಗ್‌ಕಾಂಗ್‌ನ 'ಟಿನ್ ಕ್ವಾಂಗ್ ರೋಡ್ ರೆಕ್ರಿಯೇಷನ್ ​​ಗ್ರೌಂಡ್' ಪಂದ್ಯಾವಳಿಗೆ ಸಾಕ್ಷಿಯಾಗಲಿದೆ.

Topics

ಸಂಬಂಧಿತ ಸುದ್ದಿಗಳು