ಭಾರತ ಕ್ರಿಕೆಟ್ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಟೆಸ್ಟ್ ಕ್ರಿಕೆಟ್‌ಗೆ (First-Class Cricket) ಅಧಿಕೃತವಾಗಿ ವಿದಾಯ ಹೇಳಿದ್ದಾರೆ.ಆದರೆ ಭಾರತೀಯ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರು ಮುಂದುವರಿಲಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆದರೆ ನನ್ನಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದೆ. ಮುಗಿದಿಲ್ಲ. ಭಾರತ ತಂಡಕ್ಕೆ ಕಂಬ್ಯಾಕ್ ಮಾಡುತ್ತೇನೆ ಎಂದು ಬಾವುಕವಾಗಿ ಬರೆದುಕೊಂಡಿದ್ದಾರೆ.
ಏಕದಿನ, ಟಿ20 ಕ್ರಿಕೆಟ್ ನತ್ತ ಚಹಾಲ್ ಗಮನ
ಯುಜ್ವೇಂದ್ರ ಚಹಾಲ್ ಫಸ್ಟ್‌ಕ್ಲಾಸ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಕೂಡ ಮುಂದೆ ವೈಟ್‌ಬಾಲ್ (Limited-overs) ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಪುನರಾಗಮನ ಮಾಡುವತ್ತ ಗಮನ ಹರಿಸಿದ್ದಾರೆ. ಸದ್ಯ ಟೀಂ ಇಂಡಿಯಾದಿಂದ ದೂರ ಇರುವ ಚಹಲ್ ಮುಂಬರುವ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಯುಜ್ವೇಂದ್ರ ಚಹಾಲ್ ಇದುವರೆಗೆ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಇದುವರೆಗೆ ಒಟ್ಟು 72 ಏಕದಿನ ಪಂದ್ಯಗಳನ್ನು ಆಡಿದ್ದು, ಬರೋಬ್ಬರಿ 121 ವಿಕೆಟ್ ಪಡೆದಿದ್ದಾರೆ. ಟಿ20 80 ಪಂದ್ಯಗಳನ್ನು ಆಡಿದ್ದು, 96 ಹಾಗೂ ಐಪಿಎಲ್‌ನಲ್ಲಿ 188 ಪಂದ್ಯಗಳ ಮೂಲಕ 233 ವಿಕೆಟ್ ಕಬಳಿಸಿದ್ದಾರೆ.
36 ವರ್ಷ ಪ್ರಾಯದ ಯುಜ್ವೇಂದ್ರ ಚಹಾಲ್ ತನಗೆ 10 ವರ್ಷ ಇದ್ದಾಗ ಕೆಂಪು ಚೆಂಡನ್ನು ಕೈಯಲ್ಲಿ ಹಿಡಿದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ನಾನು ಮೊದಲ ಬಾರಿಗೆ ಕೆಂಪು ಚೆಂಡನ್ನು ಕೈಯಲ್ಲಿ ಹಿಡಿದಾಗ 10 ವರ್ಷ. ಆಗ ಕ್ರಿಕೆಟ್ ಮೇಲೆ ಇಷ್ಟೊಂದು ಗಾಢವಾದ ಪ್ರೀತಿ ಮೂಡುತ್ತದೆ ಅಂತಾ ಅನಿಸಿಕೊಂಡಿರಲಿಲ್ಲ. ತಾಳ್ಮೆ, ದೃಢತೆ ಮತ್ತು ಪ್ರತೀ ವಿಕೆಟ್‌ಗಾಗಿ ಹೋರಾಡುವ ಖುಷಿಯನ್ನು ನಾನು ಕಲಿತಿದ್ದೇ ಇಲ್ಲೇ ಎಂದು ಅವರು ಬರೆದುಕೊಂಡಿದ್ದಾರೆ.
ಭಾರತ ತಂಡದ ಪರವಾಗಿ ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಸಿಗದೇ ಇದ್ದರೂ ಕೂಡ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ನನಗೆ ಸಂಪೂರ್ಣ ತೃಪ್ತಿಯಿದೆ. ಲಾರ್ಡ್ಸ್ ಮೈದಾನದಲ್ಲಿ ನಾರ್ಥಾಂಪ್ಟನ್‌ಷೈರ್ ಪರ ಆಡಿದ ತಮ್ಮ ಕೊನೆಯ ಫಸ್ಟ್ ಕ್ಲಾಸ್ ಪಂದ್ಯದ ಬಗ್ಗೆ ಮಾತನಾಡಿದ್ದು, ಇದು ತಮಗೆ ಅತ್ಯಂತ ಬಾವುಕ ಕ್ಷಣ ಎಂದಿದ್ದಾರೆ.
ಯುಜ್ವೇಂದ್ರ ಚಹಾಲ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 49 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿದ್ದು, 148 ವಿಕೆಟ್ ಕಬಳಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಕೌಂಟಿ ಚಾಂಪಿಯನ್‌ಷಿಪ್ ನಲ್ಲಿ ನಾರ್ಥಾಂಪ್ಟನ್‌ಷೈರ್ ತಂಡದ ಪರವಾಗಿ ಆಡಿದ್ದು, ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದರು. 2026-27ರ ಸಾಲಿನಲ್ಲಿ ಒಟ್ಟು 5 ಪಂದ್ಯಗಳನ್ನು ಆಡಿದ್ದು, ಒಟ್ಟು 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.