Smriti Mandhana: ವಿಶೇಷ ಅಭಿಮಾನಿಗೆ ಫೋನ್ ಗಿಫ್ಟ್ ನೀಡಿದ ಸ್ಮೃತಿ ಮಂಧಾನ

Published by
Kannada News Next Desk

Smriti Mandhana gift : ಕೊಲಂಬೊ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಎಂತಹ ಹೃದಯವಂತೆ ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಸಿಕ್ಕಿದೆ. ಶ್ರೀಲಂಕಾದಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯನ್ನಾಡುತ್ತಿರುವ ಭಾರತ ಮಹಿಳಾ ತಂಡ ಶುಕ್ರವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.

Image Credit to Original Source

ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಸ್ಮೃತಿ ಮಂಧನ 31 ಎಸೆತಗಳಲ್ಲಿ 45 ರನ್ ಬಾರಿಸಿ ಮಿಂಚಿದ್ದರು. ಪಂದ್ಯದ ನಂತರ ಅಧೀನ ಎಂಬ ವಿಕಲಾಂಗ ಚೇತನ ಹುಡುಗಿಗೆ ಸ್ಮೃತಿ ಮಂಧನ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿ ಹೃದಯವಂತಿಕೆ ಮೆರೆದಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದ್ದು, ಸ್ಮೃತಿ ಮಂಧನ ನಡೆಗೆ ಕ್ರಿಕೆಟ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://x.com/criccrazyjohns/status/1814613584208437315?s=46

ಇದನ್ನೂ ಓದಿ :  ದ್ರೋಣಾಚಾರ್ಯ ದ್ರಾವಿಡ್ ಮುಂದಿನ ನಡೆಯೇನು? ಇಲ್ಲಿದೆ ಉತ್ತರ

ಸ್ಮೃತಿ ಮಂಧನ ಅವರ ಅಭಿಮಾನಿಯಾಗಿರುವ ಅಧೀಶ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ತಾಯಿಯ ಜೊತೆ ವ್ಹೀಲ್ ಚೇರ್’ನಲ್ಲಿ ಆಗಮಿಸಿದ್ದಳು. ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಹರ್ಮನ್ ಪ್ರೀತ್ ಸಾರಥ್ಯದ ಭಾರತೀಯ ವನಿತಾ ತಂಡ ಭಾನುವಾರ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ.

Image Credit to Original Source

ಸ್ಮೃತಿ ಮಂದಾನ ಪ್ರಸಕ್ತ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.  ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಸತತ ಶತಕ ಬಾರಿಸಿದ್ದ ಸ್ಮೃತಿ ಮಂದಾನ, ಸದ್ಯ ಏಷ್ಯಾ ಕಪ್‌ನಲ್ಲಿಯೂ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಭಾರತ ತಂಡ ಇಂದು ಯುಎಇ ತಂಡವನ್ನು ಎದುರಿಸಲಿದ್ದು, ಸದ್ಯ ಭಾರತ ಗೆಲುವು ಸಾಧಿಸಿದ್ರೆ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ.

ಇದನ್ನೂ ಓದಿ : KL Rahul : ಟೀಮ್ ಇಂಡಿಯಾದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್‌ಗೆ ಮತ್ತೆ ಅನ್ಯಾಯ 

ಏಷ್ಯಾಕಪ್‌ನಲ್ಲಿ ಭಾರತೀಯ ಮಹಿಳೆಯರ ತಂಡ ಭರ್ಜರಿ ಫಾರ್ಮನಲ್ಲಿದೆ. ಪಾಕಿಸ್ತಾನ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಉಳಿದಂತೆ ಭಾರತ ಇಂದು ಯುಎಇ ತಂಡವನ್ನು ಎದುರಿಸಲಿದ್ರೆ, ಉಳಿದ ಲೀಗ್‌ ಪಂದ್ಯದಲ್ಲಿ ನೇಪಾಳವನ್ನು ಸೆಣೆಸಬೇಕಾಗಿದೆ. ಭಾರತದ ವಿರುದ್ದ ಎರಡೂ ತಂಡಗಳು ದುರ್ಬಲವಾಗಿದೆ.

ಇದನ್ನೂ ಓದಿ : Yuvraj Singh: 42ನೇ ವಯಸ್ಸಲ್ಲೂ ಅದೇ ಖದರ್, ಅದೇ ಪವರ್: ಕಾಂಗರೂ ಬೇಟೆಯಾಡಿದ ಯುವರಾಜ !

Smriti Mandhana gifted a phone to a special fan

Share