ರಾಜ್ಯದಲ್ಲಿ ಬಿಸಿಲ ಧಗೆ ಮಿತಿಮೀರಿದೆ. 2 ದಿನಗಳ ಹಿಂದೆಯಷ್ಟೇ ಬೀದರ್ನಲ್ಲಿ 20 ವರ್ಷದ ಯುವಕ ಬಿಸಿಲಿನ ಝಳ ತಾಳಲಾರದೇ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ರಾಜ್ಯದಲ್ಲಿ ಹೀಟ್ ಸ್ಟ್ರೋಕ್ಗೆ ಮತ್ತೊಂದು ಸಾವು ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಸರ್ಕಾರಿ ಅಧಿಕಾರಿ ಹೀಟ್ ಸ್ಟ್ರೋಕ್ಗೆ ಬಲಿಯಾಗಿದ್ದಾರೆ..!
ಮೃತರನ್ನು ರಾಯಬಾಗ ಪಟ್ಟಣದ ನಿವಾಸಿ 38 ವರ್ಷದ ವೆಂಕಟೇಶ ಬಳ್ಳಾರಿ ಎಂದು ಗುರುತಿಸಲಾಗಿದೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಬಸವೇಶ್ವರ ಜಯಂತಿ ಸಂದರ್ಬದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಮಳೆಯ ಸಿಹಿ ಸುದ್ದಿ: ಮುಂದಿನ 5 ದಿನ ಎಲ್ಲೆಲ್ಲಿ ಮಳೆ ? ಅತ್ತ ಸುಡುತ್ತಿರುವ ಬಿಸಿಲಿಗೆ ಸಿಗಲಿದೆಯೇ ಮುಕ್ತಿ
ಬಸವೇಶ್ವರ ಜಯಂತಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ವೆಂಕಟೇಶ ತಲೆ ತಿರುಗಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಬಿಸಿಲಿನ ಬೇಗೆ ತಾಳಲಾರದೇ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ವೆಂಕಟೇಶ್ ಆಪ್ತ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ದಿನಕ್ಕೊಂದು ಸಾವು ಸಂಭವಿಸುತ್ತಿರುವುದು ಆತಂಕಕ್ಕೆ ದಾರಿ ಮಾಡಿದೆ.
