Google : ಗೂಗಲ್ ಪಿಕ್ಸೆಲ್ 11 : ಐಪೋನ್‌ಗೂ ಟಕ್ಕರ್‌ ಕೊಡುತ್ತೆ ಗೂಗಲ್‌ನ ಈ ಸ್ಮಾರ್ಟ್‌ಪೋನ್‌

ಗೂಗಲ್‌ ಪಿಕ್ಸೆಲ್‌ 11 ಮೊಬೈಲ್‌ ಅಗಸ್ಟ್‌ 12ರಂದು ನಡೆಯಲಿರುವ 'ಮೇಡ್ ಬೈ ಗೂಗಲ್' (Made by Google) ಜಾಗತಿಕ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ಇಡೀ ವಿಶ್ವದ ಗಮನ ಸೇಳೆದಿರುವ ಈ ಸ್ಮಾರ್ಟ್‌ಪೋನ್‌ನಲ್ಲಿ ಅಂತಹ ವಿಶೇಷತೆಗಳು ಏನಿದೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಬೆಂಗಳೂರು: ಸ್ಮಾರ್ಟ್‌ಫೋನ್ ಗ್ರಾಹಕರಿಗಾಗಿಯೇ ಗೂಗಲ್‌ ಹೊಸ ತಂತ್ರಜ್ಞಾನದ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡುತ್ತಿದೆ. ಮುಂದಿನ ತಲೆಮಾರಿನ ಫ್ಲ್ಯಾಗ್‌ಶಿಪ್‌ ಪೋನ್‌ ಎನಿಸಿಕೊಂಡಿರುವ ‘ಗೂಗಲ್ ಪಿಕ್ಸೆಲ್ 11′ ( Google Pixel 11) ಮಾರುಕಟ್ಟೆಗೆ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಸದ್ಯ ಈ ಮೊಬೈಲ್‌ನ ಫೀಚರ್ಸ್‌ (Google Pixel 11 Features) ಲೀಕ್‌ ಆಗಿದ್ದು, ಬಾರೀ ಚರ್ಚೆಗೆ ಕಾರಣವಾಗಿದೆ.

ಗೂಗಲ್‌ ಪಿಕ್ಸೆಲ್‌ 11 ಮೊಬೈಲ್‌ ಅಗಸ್ಟ್‌ 12ರಂದು ನಡೆಯಲಿರುವ ‘ಮೇಡ್ ಬೈ ಗೂಗಲ್’ (Made by Google) ಜಾಗತಿಕ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ಇಡೀ ವಿಶ್ವದ ಗಮನ ಸೇಳೆದಿರುವ ಈ ಸ್ಮಾರ್ಟ್‌ಪೋನ್‌ನಲ್ಲಿ ಅಂತಹ ವಿಶೇಷತೆಗಳು ಏನಿದೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಹೊಸ ಪ್ರೊಸೆಸರ್ ಮತ್ತು ಪವರ್‌ಫುಲ್ ಪರ್ಫಾರ್ಮೆನ್ಸ್

ಗೂಗಲ್‌ ಕಂಪೆನಿ ಸ್ಯಾಮ್‌ಸಂಗ್‌ ಬದಲು ಟಿಎಸ್‌ಎಂಸಿಯ ಅತ್ಯಾಧುನಿಕ 2nm ತಂತ್ರಜ್ಞಾನ ಆಧಾರಿತ Tensor G6 ಚಿಪ್‌ಸೆಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ಸ್ಮಾರ್ಟ್‌ಪೋನ್‌ನ ವೇಗವನ್ನು ಹೆಚ್ಚಳ ಮಾಡಲಿದ್ದು, ದೀರ್ಘಕಾಲದ ಬ್ಯಾಟರಿ ಬಾಳಿಕೆಯ ಜೊತೆಗೆ ಹೀಟಿಂಗ್‌ ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲಿದೆ.

ಕ್ಯಾಮೆರಾ ಬಾರ್‌ನಲ್ಲಿ ಪಿಕ್ಸೆಲ್‌ ಗ್ಲೋ ಮ್ಯಾಜಿಕ್‌

ಗೂಗಲ್‌ ಈ ಬಾರಿ ಸ್ಮಾರ್ಟ್‌ಪೋನ್‌ನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಗೂಗಲ್‌ ಪಿಕ್ಸೆಲ್‌ 11ನಲ್ಲಿ ಕ್ಯಾಮೆರಾ ಬಾರ್‌ ಸುತ್ತಲೂ ‘Pixel Glow’ LED ಲೈಟಿಂಗ್ ಅಳವಡಿಸಲಾಗಿದ್ದು, ನೋಟಿಫಿಕೇಶನ್‌, ಚಾರ್ಜಿಂಗ್‌ ಇಟ್ಟಾಗ ವಿಭಿನ್ನವಾಗಿ ಗ್ಲೋ ಆಗಲಿದೆ. ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅತ್ಯಂತ ಸುಧಾರಿತ ಮೆಡಿಟೆಕ್‌ ಎಂ90 ( MediaTek M90) ಮಾಡೆಮ್ ಬಳಸಲಾಗುತ್ತಿದೆ.

ಗೂಗಲ್‌ ಪಿಕ್ಸೆಲ್‌ ಕ್ಯಾಮೆರಾ ಮತ್ತು ಡಿಸ್ಪ್ಲೈ ವಿಶೇಷತೆ ಏನು ?

ಗೂಗಲ್‌ ಪಿಕ್ಸೆಲ್‌ 11 : ಬೆಲೆ ಮತ್ತು ಲಭ್ಯತೆ ಎಷ್ಟು?

ಅಮೆಜಾನ್ ಲಿಸ್ಟಿಂಗ್ ಮಾಹಿತಿಯ ಪ್ರಕಾರ ಗೂಗಲ್ ಪಿಕ್ಸೆಲ್ 11 ಸ್ಮಾರ್ಟ್‌ಪೋನ್‌ ಆರಂಭದ ಬೆಲೆಯೇ ಸುಮಾರು $899 (ಭಾರತೀಯ ರೂಪಾಯಿಗಳಲ್ಲಿ ಅಂದಾಜು ₹86,450) ಇದರಲಿದೆ. ಲೈಟ್ ಫಾಗ್, ಮಿಡ್‌ನೈಟ್, ಮಾಸ್ ಮತ್ತು ಫ್ಯೂಷಿಯಾ ಬಣ್ಣಗಳಲ್ಲಿಯೂ ಈ ಸ್ಮಾರ್ಟ್‌ಪೋನ್‌ ಲಭ್ಯವಿದೆ.

ಗೂಗಲ್‌ ಪಿಕ್ಸೆಲ್‌ 11 ಗೂಗಲ್‌ನ ಅತ್ಯಾಧುನಿಕ ಜೆಮಿನಿ AI (Gemini Intelligence) ಜೊತೆಗೆ ಆಂಡ್ರಾಯ್ಡ್ 17 ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಐಪೋನ್‌, ಸ್ಯಾಮ್‌ಸಂಗ್‌, ವಿವೋ, ಓಪೋ ಸ್ಮಾರ್ಟ್‌ಪೋನ್‌ಗಳಿಗೆ ಗೂಗಲ್‌ ಪಿಕ್ಸೆಲ್‌ 11 ತೀವ್ರ ಪೈಪೋಟಿ ನೀಡುವುದಂತೂ ಗ್ಯಾರಂಟಿ.

google pixel 11 features kannada news

Exit mobile version