mAadhaar Vs New Aadhaar App: ಭಾರತ ಸರ್ಕಾರದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಇತ್ತೀಚೆಗೆ ಹೊಸ ಆಧಾರ್ ಅಪ್ಲಿಕೇಶನ್ (Aadhaar App) ಅನ್ನು ಬಿಡುಗಡೆ ಮಾಡಿದೆ.
ಹಳೆಯ ಆಧಾರ್ ಆ್ಯಪ್ನಲ್ಲಿ ಇರದ ವೈಶಿಷ್ಟ್ಯಗಳನ್ನು ಅಳವಡಿಸಿ ಹೊಸ ಆಧಾರ್ ಅಪ್ಲಿಕೇಶನ್ ಬಿಡುಗಡೆಮಾಡಿದೆ.
ಪ್ರಾಧಿಕಾರದ ಪ್ರಕಾರ ಹಳೆಯ ಎಂಆಧಾರ್ ಅಪ್ಲಿಕೇಶನ್ಗಿಂತ ಹೊಸ ಆಧಾರ್ ಆ್ಯಪ್ ಸುರಕ್ಷಿತ, ಸುಲಭ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತದೆ ಎಂದು ಹೇಳಿದೆ.
ಯುಐಡಿಎಐ ಈ ಹೊಸ ಅಪ್ಲಿಕೇಶನ್ ಬಗ್ಗೆ ಮಾಹಿತಿಯನ್ನು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದೆ.
ಆಧಾರ್ ಸೇವೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ಮತ್ತು ಫೇಸ್ ವೆರಿಫಿಕೇಷನ್ ಸೌಲಭ್ಯ ಒದಗಿಸುವ ಸಲುವಾಗಿ ಈ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಈ ಹೊಸ ಆಧಾರ್ ಅಪ್ಲಿಕೇಶನ್ ಏಕೆ ವಿಶೇಷವಾಗಿದೆ? ಏನೇನು ಸುರಕ್ಷತೆಗಳಿವೆ ಎಂದು ತಿಳಿಯೋಣ.
ಹೊಸ ಆಧಾರ್ ಆ್ಯಪ್ ಹೇಗಿದೆ?
ಹೊಸ ಆಧಾರ್ ಆ್ಯಪ್ ಪರಿಚಯಿಸಿದ ಮೇಲೆ ನೀವು ಎಲ್ಲ ಕಡೆ ನಿಮ್ಮ ಆಧಾರ್ ಕಾರ್ಡ್ನ ಫೋಟೋಕಾಪಿ ಪ್ರತಿಯನ್ನು ಕೊಂಡೊಯ್ಯುವ ಅವಶ್ಯಕತೆಯಿಲ್ಲ.
ಏಕೆಂದರೆ ಈ ಹೊಸ ಆ್ಯಪ್ ಫೇಸ್ ಐಡಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ ಆಧಾರ್ ವೆರಿಫಿಕೇಷನ್ ಮಾಡುತ್ತದೆ. ಯುಪಿಐ ಪಾವತಿ ಮಾಡುವಾಗ ನೀವು ಅಪ್ಲಿಕೇಶನ್ ಅನ್ನು ಅನ್ಲಾಕ್ ಮಾಡುವಂತೆಯೇ ಇರುತ್ತದೆ.
ಇದನ್ನೂ ಓದಿ: ಐಫೋನ್, ಆಂಡ್ರಾಯ್ಡ್ ಫೋನ್ ಬೆಲೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ Z Fold 6: ಖರೀದಿಸುವುದು ಎಲ್ಲಿ?
mAadhaar Vs ನ್ಯೂ ಆಧಾರ್ ಅಪ್ಲಿಕೇಶನ್
ನೀವು ಮೊದಲು ತಿಳಿದುಕೊಳ್ಳಬೇಕಾದ ಸಂಗತಿಯೇನೆಂದರೆ ಈ ಎರಡೂ ಅಪ್ಲಿಕೇಶನ್ಗಳು ಯುಐಡಿಎಐ ನ ಅಪ್ಲಿಕೇಶನ್ಗಳಾಗಿವೆ. ಆದರೆ ಹೊಸ ಆಧಾರ್ ಅಪ್ಲಿಕೇಶನ್ ಹೆಚ್ಚು ಸ್ಮಾರ್ಟ್ ಹಾಗೂ ಅನುಕೂಲಕರವಾಗಿದೆ.
mAadhaar ಅಪ್ಲಿಕೇಶನ್ನಲ್ಲಿ 4 ಅಂಕಿಗಳ ಪಿನ್ ಅಥವಾ ಒಟಿಪು ಅನ್ನು ನಮೂದಿಸುವ ಮೂಲಕ ಆಧಾರ್ ಅನ್ನು ಪ್ರವೇಶಿಬಹುದಾಗಿತ್ತು.
ಅದರಲ್ಲಿ ಇ-ಆಧಾರ್ ಡೌನ್ಲೋಡ್ ಮಾಡುವುದು, QR ಕೋಡ್ ಪ್ರದರ್ಶಿಸುವುದು ಅಥವಾ ನಿಮ್ಮ ವಿಳಾಸವನ್ನು ನವೀಕರಿಸುವಂತಹ ಮೂಲಭೂತ ವೈಶಿಷ್ಟ್ಯಗಳನ್ನು ನೀಡಿದ್ದರೂ ಸಹ ಹೊಸ ಆಧಾರ್ ಅಪ್ಲಿಕೇಶನ್ ಸಂಪೂರ್ಣವಾಗಿ ಮುಖ ದೃಢೀಕರವನ್ನು ಅವಲಂಬಿಸಿದೆ.
ಇದನ್ನೂ ಓದಿ: WhatsApp Money: ವಾಟ್ಸ್ಆಪ್ನಿಂದ ಹಣ ಗಳಿಸುವುದು ಹೇಗೆ? ಇಲ್ಲಿದೆ ನೀವು ಸಹ ದುಡ್ಡು ಮಾಡಬಹುದಾದ ಸುಲಭ ಟಿಪ್ಸ್
ಅಷ್ಟೇ ಅಲ್ಲದೇ ಮೊದಲಿದ್ದ ಆಧಾರ್ ಆ್ಯಪ್ ಗಿಂತ ಹೆಚ್ಚು ಸುರಕ್ಷಿತವಾಗಿದೆ. ಹೇಗೆಂದರೆ QR ಕೋಡ್ ಸ್ಕ್ಯಾನ್ ಮಾಡಿದ ನಂತರ ಹೆಸರು ಮತ್ತು ವಿಳಾಸದಂತಹ ಪ್ರಮುಖ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬಹುದಾದ ಸೌಲಭ್ಯ ಇದರಲ್ಲಿದೆ. ಅಂದರೆ ಡೇಟಾವನ್ನು ನೀವು ಸಂಪೂರ್ಣವಾಗಿ ನಿಯಂತ್ರಿಸುವ ಸೌಲಭ್ಯ ಇದರಲ್ಲಿದೆ. ಹಾಗಾಗಿ ಇದು ಹೆಚ್ಚು ಸುರಕ್ಷಿತವಾಗಿದೆ.
