DSLR ಕ್ಯಾಮೆರಾಗಳಿಗೂ ನಡುಕ ಹುಟ್ಟಿಸಿದ Oppo Find X9 Ultra

ಒಪ್ಪೋ ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಒಪ್ಪೋ ಫೈಂಡ್‌ ಎಕ್ಸ್‌ 9 ಅಲ್ಟ್ರಾ( Oppo Find X9 Ultra) ಸ್ಮಾರ್ಟ್‌ಪೋನ್‌ ಅನ್ನು ಮುಂದಿನ ವಾರ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.

Oppo Find X9 Ultra Launch: ಒಪ್ಪೋ ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಒಪ್ಪೋ ಫೈಂಡ್‌ ಎಕ್ಸ್‌ 9 ಅಲ್ಟ್ರಾ( Oppo Find X9 Ultra) ಸ್ಮಾರ್ಟ್‌ಪೋನ್‌ ಅನ್ನು ಮುಂದಿನ ವಾರ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ವೃತ್ತಿಪರ ದರ್ಜೆಯ ಕ್ಯಾಮೆರಾ ಮತ್ತು ಬೃಹತ್ ಬ್ಯಾಟರಿ ಬ್ಯಾಕಪ್‌ನೊಂದಿಗೆ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಕ್ಯಾಮರಾ ಪ್ರಿಯರಿಗಾಗಿಯೇ ವಿಶೇಷ ವಿನ್ಯಾಸ

ಒಪ್ಪೋ ತನ್ನ ‘Find X’ ಸರಣಿಯಲ್ಲಿ ಯಾವಾಗಲೂ ಕ್ಯಾಮರಾಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಬಾರಿ ವಿಶ್ವವಿಖ್ಯಾತ Hasselblad (ಹ್ಯಾಸೆಲ್‌ಬ್ಲಾಡ್) ಕಂಪನಿಯ ಸಹಯೋಗದೊಂದಿಗೆ ಕ್ಯಾಮರಾ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ 200 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇರಲಿದೆ ಎಂದು ಹೇಳಲಾಗುತ್ತಿದೆ. ಇದು 8K ಅಲ್ಟ್ರಾ ಕ್ಲಿಯರ್ ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸಲಿದ್ದು, ವ್ಲಾಗರ್ಸ್ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೇಳಿ ಮಾಡಿಸಿದಂತಿದೆ.

7050mAh ಬ್ಯಾಟರಿ ಸಾಮರ್ಥ್ಯ

ಈ ಫೋನ್‌ನ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಅದರ ಬ್ಯಾಟರಿ. Find X8 Ultra ಮಾದರಿಯಲ್ಲಿದ್ದ 6100mAh ಬ್ಯಾಟರಿಯನ್ನು ಅಪ್‌ಗ್ರೇಡ್ ಮಾಡಿ, ಹೊಸ Find X9 Ultra ನಲ್ಲಿ 7050mAh ಬ್ಯಾಟರಿ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿರಲಿದೆ.

Also Read : ಪವರ್‌ಫುಲ್‌ ಗೇಮಿಂಗ್ ಮೊಬೈಲ್‌ ನುಬಿಯಾ ನಿಯೋ 5 ಪ್ರೋ ಅನಾವರಣ: 50 MP ಕ್ಯಾಮೆರಾ, 80W ಫಾಸ್ಟ್‌ ಚಾರ್ಜಿಂಗ್‌ ವೈಶಿಷ್ಟ್ಯ

ಪ್ರೀಮಿಯಂ ಡ್ಯುಯಲ್ ಟೋನ್ ವಿನ್ಯಾಸ

ಫೋನ್‌ನ ಹಿಂಭಾಗದಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಇರಲಿದ್ದು, ಲೆದರ್ ಫಿನಿಶ್ ಮತ್ತು ಪ್ರೀಮಿಯಂ ಮೆಟೀರಿಯಲ್‌ನ ಡ್ಯುಯಲ್ ಟೋನ್ ವಿನ್ಯಾಸ ಇರಲಿದೆ. ಇದು ಕಪ್ಪು ಮತ್ತು ಕಿತ್ತಳೆ (Orange) ಬಣ್ಣಗಳಲ್ಲಿ ಲಭ್ಯವಿರಲಿದೆ ಎಂದು ಟೀಸರ್ ಸೂಚಿಸಿದೆ.

ವಿಶೇಷ ‘Hasselblad Earth Explorer’ ಆವೃತ್ತಿ

ಸಾಮಾನ್ಯ ಮಾದರಿಯ ಜೊತೆಗೆ, ಒಪ್ಪೋ ‘Hasselblad Earth Explorer Master Set’ ಎಂಬ ವಿಶೇಷ ಆವೃತ್ತಿಯನ್ನು ಸಹ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಪ್ರೊಫೆಷನಲ್ ಟೆಲಿಕನ್ವರ್ಟರ್ ಮತ್ತು ಕ್ಯಾಮೆರಾ ಹ್ಯಾಂಡಲ್ ಕೇಸ್‌ನಂತಹ ಎಕ್ಸ್‌ಕ್ಲೂಸಿವ್ ಆಕ್ಸೆಸರಿಗಳು ಇರಲಿವೆ.

Also Read : ವಿವೋ X300 FE ಅಬ್ಬಬ್ಬಾ ಎಂತಹಾ ಫೀಚರ್ಸ್‌ ! 6500mAh ಬ್ಯಾಟರಿ, 50MP ಸೋನಿ IMX921 ZEISS ಕ್ಯಾಮೆರಾ

ಪ್ರಮುಖ ವೈಶಿಷ್ಟ್ಯಗಳು (Expected):

oppo find x9 ultra launch date specifications hasselblad camera battery upgrade kannada

Exit mobile version