BSNL AirFibre: ಊರಲ್ಲಿ ವೈಫೈ ಕೇಬಲ್‌ ಕಟ್‌ ಆಗೋ ಚಿಂತೆ ಬಿಡಿ: ಬಿಎಸ್‌ಎನ್‌ಎಲ್‌ ಏರ್‌ ಫೈಬರ್‌ ವಿಶೇಷ ಪ್ಲಾನ್

ಫೈಬರ್ ಲೈನ್‌ಗಳ ತಾಪತ್ರಯವಿಲ್ಲದೆ, ಕೈಗೆಟುಕುವ ದರದಲ್ಲಿ ಅತ್ಯಧಿಕ ಡೇಟಾ ಹಾಗೂ ಉಚಿತ ಒಟಿಟಿ ಸೌಲಭ್ಯವನ್ನು ಬಯಸುವ ಇಂಟರ್ನೆಟ್ ಪ್ರಿಯರಿಗೆ ಬಿಎಸ್ಎನ್‌ಎಲ್‌ನ ಈ ಏರ್‌ಫೈಬರ್ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.

ಕೇಬಲ್ ಅಥವಾ ಫೈಬರ್ ಲೈನ್‌ಗಳನ್ನು ತಲುಪಿಸಲು ಸಾಧ್ಯವಾಗದ ಗ್ರಾಹಕರಿಗಾಗಿ ಬಿಎಸ್ಎನ್‌ಎಲ್ ಸಂಸ್ಥೆಯು ತನ್ನ 4G ನೆಟ್‌ವರ್ಕ್ ಆಧಾರಿತ ‘ಏರ್‌ಫೈಬರ್’ (BSNL Air Fiber Plans) ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಯ ಮೂಲಕ ಹೊಸದೊಂದು ಭರ್ಜರಿ ಯೋಜನೆಯನ್ನು ಪರಿಚಯಿಸಿದೆ. ಹೈ-ಸ್ಪೀಡ್ ಇಂಟರ್ನೆಟ್ ಜೊತೆಗೆ ಅತ್ಯಧಿಕ ಡೇಟಾ ಮತ್ತು ಉಚಿತ ಮನರಂಜನೆಯನ್ನು ಬಯಸುವ ಗ್ರಾಹಕರಿಗಾಗಿ ಈ ವಿಶೇಷ ಪ್ಲಾನ್ ಲಾಂಚ್ ಮಾಡಲಾಗಿದೆ.

ಬಿಎಸ್ಎನ್‌ಎಲ್‌ನ ಈ ಪ್ರೀಮಿಯಂ ಯೋಜನೆಯಲ್ಲಿ ಗ್ರಾಹಕರಿಗೆ 200 Mbps ವರೆಗಿನ ಗರಿಷ್ಠ ಡೌನ್‌ಲೋಡ್ ವೇಗ ಸಿಗಲಿದೆ. ಆನ್‌ಲೈನ್ ಗೇಮಿಂಗ್, ತಡೆರಹಿತ ವೀಡಿಯೊ ಕಾಲಿಂಗ್ ಮತ್ತು ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಈ ವೇಗ ಅತ್ಯಂತ ಸೂಕ್ತವಾಗಿದೆ.

ಈ ಪ್ಲಾನ್‌ನ ಪ್ರಮುಖ ಆಕರ್ಷಣೆಯೆಂದರೆ ಇದರ ಡೇಟಾ ಮಿತಿ. ಗ್ರಾಹಕರಿಗೆ ತಿಂಗಳಿಗೆ ಬರೋಬ್ಬರಿ 5TB (5,000 GB) ಡೇಟಾವನ್ನು ನೀಡಲಾಗುತ್ತಿದ್ದು, ಒಂದು ವೇಳೆ ಈ ಮಿತಿ ಮುಗಿದರೂ ಸಹ 10 Mbps ವೇಗದಲ್ಲಿ ಅನ್‌ಲಿಮಿಟೆಡ್ ಇಂಟರ್ನೆಟ್ ಬಳಕೆ ಮುಂದುವರಿಸಬಹುದು. ಮಾರುಕಟ್ಟೆಯಲ್ಲಿನ ಇತರ ಪ್ರಮುಖ ಟೆಲಿಕಾಂ ಕಂಪನಿಗಳು ಸಾಮಾನ್ಯವಾಗಿ 3.3TB ವರೆಗೆ ಮಾತ್ರ ಡೇಟಾ ನೀಡುತ್ತಿದ್ದು, ಬಿಎಸ್ಎನ್‌ಎಲ್ 5TB ನೀಡುತ್ತಿರುವುದು ದೊಡ್ಡ ಕುಟುಂಬಗಳಿಗೆ ವರವಾಗಲಿದೆ.

Best OTT Web Series: ವೀಕೆಂಡ್ ಮೂಡ್‌ಗೆ ಪರ್ಫೆಕ್ಟ್ ಎಂಟರ್‌ಟೇನರ್: ‘ಪ್ರೀತಮ್ ಅಂಡ್ ಪೆಡ್ರೊ’ ವೆಬ್ ಸಿರೀಸ್

ಹೆಚ್ಚುವರಿ ವೆಚ್ಚವಿಲ್ಲದೆ ಉಚಿತ ಒಟಿಟಿ ಮತ್ತು ಅನ್‌ಲಿಮಿಟೆಡ್ ಕರೆಗಳು
ಇಂಟರ್ನೆಟ್ ಮಾತ್ರವಲ್ಲದೆ ಗ್ರಾಹಕರ ಮನರಂಜನೆಗೂ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. JioHotstar, ZEE5, SonyLIV, Lionsgate Play, Hungama, ShemarooMe ಹಾಗೂ EpicOn ನಂತಹ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆಯನ್ನು ಈ ಪ್ಲಾನ್ ಒಳಗೊಂಡಿದೆ. ಇದರೊಂದಿಗೆ ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಉಚಿತವಾಗಿ ಮತ್ತು ಅಪರಿಮಿತವಾಗಿ ಲ್ಯಾಂಡ್‌ಲೈನ್ ಕರೆಗಳನ್ನು ಮಾಡುವ ಸೌಲಭ್ಯವನ್ನೂ ನೀಡಲಾಗಿದೆ. ಆದರೆ, ಕರೆ ಮಾಡಲು ಬೇಕಾಗುವ ಲ್ಯಾಂಡ್‌ಲೈನ್ ಫೋನ್ ಉಪಕರಣವನ್ನು ಗ್ರಾಹಕರೇ ಸ್ವತಃ ಖರೀದಿಸಬೇಕಾಗುತ್ತದೆ.

ಫೈಬರ್ ಲೈನ್‌ಗಳ ತಾಪತ್ರಯವಿಲ್ಲದೆ, ಕೈಗೆಟುಕುವ ದರದಲ್ಲಿ ಅತ್ಯಧಿಕ ಡೇಟಾ ಹಾಗೂ ಉಚಿತ ಒಟಿಟಿ ಸೌಲಭ್ಯವನ್ನು ಬಯಸುವ ಇಂಟರ್ನೆಟ್ ಪ್ರಿಯರಿಗೆ ಬಿಎಸ್ಎನ್‌ಎಲ್‌ನ ಈ ಏರ್‌ಫೈಬರ್ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.

Exit mobile version