5 ರೂ. ಡಾಕ್ಟರ್​ ಎಂದೇ ಖ್ಯಾತರಾದ ಡಾ.ಕೆ.ಪಿ ಶೆಟ್ಟಿ ವಿಧಿವಶ

ಕೋಟ : Dr. K. P. Shetty: ಐದು ರೂಪಾಯಿ ಡಾಕ್ಟರ್​ ಎಂದೇ ಜನಮಾನಸದಲ್ಲಿ ಚಿರಪರಿಚಿತರಾಗಿದ್ದ ಮಾಬುಕಳ ಹಂಗಾರಕಟ್ಟೆ ಬಾಳ್ಕುದ್ರುವಿನ ಪ್ರಸಿದ್ಧ ವೈದ್ಯ ಡಾ.ಕೆ.ಪಿ. ಶೆಟ್ಟಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಬಡವರ ಬಂಧು ಎಂದೇ ಖ್ಯಾತರಾಗಿದ್ದ ಡಾ. ಕೆ.ಪಿ ಶೆಟ್ಟಿ ಅವರು 5 ದಶಕಗಳಿಗೂ ಅಧಿಕ ಕಾಲ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರಾಗಿ ಬಳಿಕ ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಕೆ.ಪಿ ಶೆಟ್ಟಿ ಅವರು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಕ್ಲಿನಿಕ್​ ನಡೆಸುವ ಮೂಲಕ ಪ್ರಸಿದ್ಧಿ ಪಡೆದಿದ್ದರು.

Also Read: Fish harvest in Udupi : ಉಡುಪಿಯಲ್ಲಿಂದು ಮೀನಿನ ಸುಗ್ಗಿ : ಸಮುದ್ರ ದಡಕ್ಕೆ ಬಂದು ಬಿದ್ದ ಲಕ್ಷ ಲಕ್ಷ ಮೀನುಗಳು

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಬಡ ರೋಗಿಗಳಿಗೆ ನನ್ನಿಂದ ಮತ್ತಷ್ಟು ಸಹಾಯವಾಗಬೇಕು ಎಂಬ ಸದುದ್ದೇಶದೊಂದಿಗೆ ಸರ್ಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ಕ್ಲಿನಿಕ್​ನಲ್ಲಿ ಅತ್ಯಂತ ಕಡಿಮೆ ದರಕ್ಕೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಜನರು ಇವರಿಗೆ 5 ರೂಪಾಯಿ ಡಾಕ್ಟರ್​ ಎಂಬ ಬಿರುದು ನೀಡಿದ್ದರು. ಕೇವಲ 30 ರೂಪಾಯಿಗಳಿಗೆ ಸರ್ವ ರೋಗಗಳಿಗೂ ಔಷಧಿ ನೀಡುತ್ತಿದ್ದ ಸಹೃದಯಿ ವೈದ್ಯರ ನಿಧನದಿಂದ ಸ್ಥಳೀಯರು ದುಃಖಕ್ಕೀಡಾಗಿದ್ದಾರೆ.

Exit mobile version