Fish harvest in Udupi : ಉಡುಪಿಯಲ್ಲಿಂದು ಮೀನಿನ ಸುಗ್ಗಿ : ಸಮುದ್ರ ದಡಕ್ಕೆ ಬಂದು ಬಿದ್ದ ಲಕ್ಷ ಲಕ್ಷ ಮೀನುಗಳು

Fish harvest in Udupi : ಮೀನು ಅಂದರೆ ಸಾಕು ಕರಾವಳಿ ಭಾಗದ ಜನತೆ ಕಣ್ಣು ಅರಳಿಸುತ್ತಾರೆ. ಅಂತದ್ರಲ್ಲಿ ಸಮುದ್ರದ ದಡಕ್ಕೆ ತಾನಾಗಿಯೇ ರಾಶಿ ರಾಶಿ ಮೀನುಗಳು ಬಂದರೆ ಖುಷಿ ಎಷ್ಟಾಗಬೇಡ..! ಈ ವಿಚಾರವನ್ನು ಹೇಳೋಕೆ ಕಾರಣ ಕೂಡ ಇದೆ. ಇದು ಕಲ್ಪನೆಯಲ್ಲ.. ನಿಜವಾಗಿಯೂ ಉಡುಪಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

\ಸಮುದ್ರದ ದಡಕ್ಕೆ ರಾಶಿ ರಾಶಿ ಮೀನುಗಳು ಬಂದಿದ್ದು ಸ್ಥಳೀಯರು ಆಶ್ಚರ್ಯ, ಸಂತೋಷ ಎಲ್ಲವನ್ನೂ ವ್ಯಕ್ತಪಡಿಸಿದ್ದಾರೆ. ಉಡುಪಿ ತಾಲೂಕಿನ ಮಲ್ಪೆ ಸಮುದ್ರದಡದಲ್ಲಿರುವ ಸೀ ವಾಕ್ ಬಳಿಯಲ್ಲಿ ಮೀನಿನ ಸುಗ್ಗಿ ನಡೆದಿದೆ. ತಡರಾತ್ರಿ ಸಂದರ್ಭದಲ್ಲಿ ಅಪರೂಪದ ಘಟನೆಯೊಂದು ಸಂಭವಿಸಿದ್ದು ಏಕಾಏಕಿ ಸಮುದ್ರದ ಅಲೆಗಳ ಜೊತೆಯಲ್ಲಿ ಮೀನುಗಳು ತೇಲಿಕೊಂಡು ಬಂದಿವೆ.
ಸಮುದ್ರದ ಅಲೆಯೊಂದಿಗೆ ದಂಡಕ್ಕೆ ಬಂದು ಬಿದ್ದ ಲಕ್ಷ ಲಕ್ಷ ಭೂತಾಯಿ, ಬಂಗುಡೆ ಮೀನುಗಳನ್ನು ಕಂಡು ಮತ್ಸ್ಯ ಪ್ರಿಯರು ಸಖತ್ ಖುಷ್ ಆಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಸಮುದ್ರ ದಡದಲ್ಲಿ ತಾವಾಗಿಯೇ ಬಂದು ಬಿದ್ದ ಮೀನುಗಳ ರಾಶಿ ಕಂಡು ಮೀನು ಪ್ರಿಯರು ಬಾಯಲ್ಲಿ ನೀರೂರಿಸಿಕೊಮಡಿದ್ದಾರೆ . ಒಟ್ನಲ್ಲಿ ಇಂದು ಉಡುಪಿಯಲ್ಲಿ ಮೀನಿನ ಸುಗ್ಗಿಯೇ ನಡೆಯುತ್ತಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಕಡಲ ತೀರದಲ್ಲಿ ಮೀನುಗಾರರಿಗೆ ಭಾರೀ ಪ್ರಮಾಣದಲ್ಲಿ ಮೀನು ಲಭ್ಯವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಉಡುಪಿಯಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ.
ಈ ಬಾರಿ ಮೀನುಗಾರರಿಗೆ ಅತೀ ಹೆಚ್ಚು ಪ್ರಮಾಣದಲ್ಲಿ ಮೀನು ಲಭ್ಯವಾಗುತ್ತಿದ್ದು, ಮೀನುಗಾರರು ಸಖತ್ ಖುಷಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಹೇರಳ ಪ್ರಮಾಣದಲ್ಲಿ ಮೀನು ದೊರೆಯುತ್ತಿದೆ.
Fish harvest in Udupi today: Lakhs of fish washed ashore



