Byndoor News: ಹೈಕೋರ್ಟ್ ಆದೇಶಕ್ಕೆ ಕ್ಯಾರೆ ಅನ್ನದ ಅಧಿಕಾರಿಗಳು, ಕಾಲ್ತೋಡಿನಲ್ಲಿ ಒತ್ತುವರಿ ತೆರವು ಹೆಸರಲ್ಲಿ ಹೈಡ್ರಾಮಾ

ಬೈಂದೂರು : ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವ ಸಲುವಾಗಿ ಹೈಕೋರ್ಟ್‌ ಆದೇಶ ಹೊರಡಿಸಿದ್ದರು ಕೂಡ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ

ಬೈಂದೂರು (Byndoor News): ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವ ಸಲುವಾಗಿ ಹೈಕೋರ್ಟ್‌ ಆದೇಶ ಹೊರಡಿಸಿದ್ದರು ಕೂಡ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಎಂಬಲ್ಲಿ ನಡೆದಿದೆ.

ಹೈಕೋರ್ಟ್ ಆದೇಶವಿದ್ದರೂ ತೆರವು ಮಾಡದ ಅಧಿಕಾರಿಗಳು

ಕಾಲ್ತೋಡು ಗ್ರಾಮದಲ್ಲಿರುವ ಸರ್ವೇ ನಂಬರ್ 250 ರ ಸರಕಾರಿ ಜಾಗವನ್ನು ಪ್ರಭಾವವಿಗಳು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿಯನ್ನು ತಕ್ಷಣವೇ ತೆರವು ಮಾಡುವಂತೆ ಕರ್ನಾಟಕ ಹೈಕೋರ್ಟ್‌ ನಾಲ್ಕು ವಾರಗಳ ಗಡುವು ನೀಡಿತ್ತು. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ, ಸರ್ವೇಯರ್‌ ಹಾಗೂ ಪೊಲೀಸ್‌ ಇಲಾಖೆಯ ಸಿಬ್ಬಂಧಿಗಳು ಸ್ಥಳಕ್ಕೆ ತೆರಳಿದ್ದರು.

ಒತ್ತುವರಿ ಜಾಗದಲ್ಲಿ ಅಳವಡಿಸಲಾಗಿದ್ದ ಮಳ್ಳು ಬೇಲಿಯನ್ನು ತಕ್ಷಣ ಅಧಿಕಾರಿಗಳು ತೆರವಿಗೆ ಮುಂದಾಗದೇ ಒತ್ತುವರಿ ಮಾಡಿದವರಿಗೆ ಮತ್ತೆ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಸಂಜೆ ನೋಟಿಸ್, ಅಧಿಕಾರಿಗಳ ಹೈಡ್ರಾಮಾ

ಸ್ಥಳೀಯರು ಒತ್ತುವರಿ ತೆರವಿಗೆ ಹೈಕೋರ್ಟ್‌ನಿಂದ ತೆರವು ಆದೇಶ ತಂದಿದ್ರೂ ಕೂಡ ನ್ಯಾಯಾಲಯದ ಆದೇಶವನ್ನು ತೆರವು ಮಾಡಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರವಿವಾರ ಸಂಜೆ 4 ಗಂಟೆಗೆ ನೋಟೀಸ್‌ ನೀಡಿ ಸೋಮವಾರ ಬೆಳಗ್ಗೆ ತೆರವುಗೊಳಿಸಬೇಕು. ಆದರೆ ಹೈಕೋರ್ಟ್‌ ಆದೇಶ ಇದ್ದರೂ ಕೂಡ ಅಧಿಕಾರಿಗಳು ಮತ್ತೆ ಒಂದು ವಾರಗಳ ಗಡುವು ನೀಡಿದ್ದಾರೆ ಅನ್ನೋದು ಸ್ಥಳೀಯರ ಆರೋಪ.

ಸರಕಾರಿ ಜಾಗ ಒತ್ತುವರಿ ತೆರವು ಮಾಡುವ ಸಲುವಾಗಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ 4 ವಾರಗಳ ಗಡುವು ಈಗಾಗಲೇ ಮುಕ್ತಾಯಗೊಂಡಿದೆ. ಒತ್ತುವರಿದಾರರು ಮತ್ತಷ್ಟು ಕಾಲಾವಕಾಶ ನೀಡ್ತಾ ಇರೋದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾನವೀಯತೆ ನೆಪ ಹೇಳಿದ ಅಧಿಕಾರಿ

ಈ ಕುರಿತು ಮಾತನಾಡಿದ ಗ್ರಾಮ ಆಡಳಿತಾಧಿಕಾರಿಗಳು ಮಾನವೀಯತೆ ನೆಪದಲ್ಲಿ ಕಾಲಾವಕಾಶ ನೀಡಲಾಗಿದೆ ಎಂದಿದ್ದಾರೆ. ಒತ್ತುವರಿದಾರರಾದ ಜ್ಯೋತಿ ಶೆಟ್ಟಿ ಅವರು 3 ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ. ಇದು ಇಬ್ಬರ ಪರವಾಗಿ ಯೋಚಿಸಬೇಕಾದ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಯಿಂದ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಆದರೆ ಖಂಡಿತವಾಗಿಯೂ ಒತ್ತುವರಿ ತೆರವು ಮಾಡ್ತೇವೆ ಎಂದಿದ್ದಾರೆ.

ಆದರೆ ಅಧಿಕಾರಿಗಳ ಈ ಮಾತಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಇತರ ಕಡೆಗಳಲ್ಲಿ ಸಾರ್ವಜನಿಕರರು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಸರಕಾರ ರಾತ್ರೋ ರಾತ್ರಿ ನೋಟೀಸ್‌ ನೀಡಿ ಬೆಳಗ್ಗೆ ತೆರವು ಮಾಡುತ್ತಿದೆ. ಆದರೆ ಕಾಲ್ತೋಡಿ ಬೈಂದೂರಿನಲ್ಲಿ ಹೈಕೋರ್ಟ್‌ ಆದೇಶವಿದ್ದರೂ ಕೂಡ ಒತ್ತುವರಿ ತೆರವು ಆಗ್ತಾ ಇಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂದು ಸ್ಥಳೀಯರು ಆರೋಪಿಸಿದ್ದಾರೆ.

byndoor kalthodu government land encroachment high court order

Exit mobile version