ಶ್ರೇಷ್ಠ ಗಂಡಂದಿರಾಗುವ ಗುಣ ಹೊಂದಿರುವ 5 ರಾಶಿಗಳು: ಇಲ್ಲಿದೆ ಬೆಸ್ಟ್ ಹಸ್ಬೆಂಡ್ ರಾಶಿಗಳು!
ಪ್ರತಿಯೊಬ್ಬ ಹುಡುಗಿಯೂ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವ ಮತ್ತು ಗೌರವದಿಂದ ನಡೆಸಿಕೊಳ್ಳುವ ಗಂಡ ಸಿಗಬೇಕೆಂದು ಬಯಸುತ್ತಾಳೆ.
By Meghana Pranuth | ಮೇಘನಾ ಪ್ರಣೂತ್
1 min read
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ರಾಶಿಚಕ್ರವು ಆತನ ಸ್ವಭಾವ, ಚಿಂತನೆ ಮತ್ತು ಜೀವನ ಸಂಗಾತಿಯೊಂದಿಗಿನ ಬಾಂಧವ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ಹುಡುಗಿಯೂ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವ ಮತ್ತು ಗೌರವದಿಂದ ನಡೆಸಿಕೊಳ್ಳುವ ಗಂಡ ಸಿಗಬೇಕೆಂದು ಬಯಸುತ್ತಾಳೆ.
ಈ 5 ರಾಶಿಯ ಪುರುಷರು ತಮ್ಮ ಪತ್ನಿಯನ್ನು ಬರಿ ಹೆಂಡತಿಯಾಗಿ ನೋಡದೆ, ತಮ್ಮ ಜೀವನದ 'ರಾಣಿ'ಯಂತೆ ಆರಾಧಿಸುತ್ತಾರೆ. ಪತ್ನಿಯ ಸಣ್ಣ ಆಸೆಯನ್ನೂ ಈಡೇರಿಸಲು ಇವರು ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ.
ಆ ರಾಶಿಗಳು ಯಾವುವು ಎಂಬ ಪೂರ್ಣ ವಿವರ ಇಲ್ಲಿದೆ:
1. ವೃಷಭ ರಾಶಿ (Taurus):
ವೃಷಭ ರಾಶಿಯ ಅಧಿಪತಿ ಶುಕ್ರಾಚಾರ್ಯ. ಹೀಗಾಗಿ ಈ ರಾಶಿಯ ಪುರುಷರಲ್ಲಿ ಪ್ರೀತಿ, ಪ್ರೇಮ ಮತ್ತು ಸೌಂದರ್ಯದ ಕಲ್ಪನೆ ಹೆಚ್ಚಿರುತ್ತದೆ. ಇವರು ಒಮ್ಮೆ ಒಬ್ಬರನ್ನು ಪ್ರೀತಿಸಿದರೆ ಅಥವಾ ಮದುವೆಯಾದರೆ ಕೊನೆಯವರೆಗೂ ಅತ್ಯಂತ ನಿಷ್ಠೆಯಿಂದ ಇರುತ್ತಾರೆ. ತಮ್ಮ ಪತ್ನಿಗೆ ಯಾವುದೇ ಆರ್ಥಿಕ ಮುಗ್ಗಟ್ಟು ಬಾರದಂತೆ ನೋಡಿಕೊಳ್ಳುವುದು ಇವರ ಮೊದಲ ಆದ್ಯತೆ. ಪತ್ನಿ ಕೇಳಿದ್ದನ್ನೆಲ್ಲಾ ತಂದುಕೊಡುವುದು, ಆಕೆಗೆ ಇಷ್ಟವಾದ ಆಹಾರ, ಉಡುಪು ಹಾಗೂ ಐಷಾರಾಮಿ ಜೀವನವನ್ನು ಒದಗಿಸಲು ಇವರು ಹಗಲಿರುಳು ಶ್ರಮಿಸುತ್ತಾರೆ.
2. ಕರ್ಕಾಟಕ ರಾಶಿ (Cancer):
ಚಂದ್ರನ ಪ್ರಭಾವಕ್ಕೊಳಗಾದ ಕರ್ಕಾಟಕ ರಾಶಿಯವರು ಅತ್ಯಂತ ಭಾವುಕರು ಮತ್ತು ಕುಟುಂಬಕ್ಕೆ ಮೊದಲ ಆದ್ಯತೆ ನೀಡುವವರು. ಪತ್ನಿಯ ಮನಸ್ಸಿನ ಭಾವನೆಗಳನ್ನು ಹೇಳದೆಯೇ ಅರ್ಥಮಾಡಿಕೊಳ್ಳುವ ಶಕ್ತಿ ಇವರಿಗಿದೆ. ಇವರಿಗೆ ಹೊರಗಿನ ಜಗತ್ತಿಗಿಂತ ಹೆಂಡತಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದೇ ಇಷ್ಟ.ಪತ್ನಿ ಸ್ವಲ್ಪ ಬೇಸರದಲ್ಲಿದ್ದರೂ ಇವರು ತಕ್ಷಣ ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಹೆಂಡತಿಯ ಕಣ್ಣಿನಲ್ಲಿ ನೀರು ಬರುವುದನ್ನು ಇವರು ಸಹಿಸುವುದಿಲ್ಲ.
3. ಸಿಂಹ ರಾಶಿ (Leo):
ಸೂರ್ಯನ ಆಡಳಿತಕ್ಕೊಳಗಾದ ಸಿಂಹ ರಾಶಿಯ ಪುರುಷರು ರಾಜ ಗಾಂಭೀರ್ಯ ಹೊಂದಿದವರು. ಅಂತೆಯೇ ತಮ್ಮ ಪತ್ನಿಯನ್ನು 'ರಾಣಿ'ಯಂತೆಯೇ ನಡೆಸಿಕೊಳ್ಳುತ್ತಾರೆ. ಸಮಾಜದಲ್ಲಿ ಅಥವಾ ಸಂಬಂಧಿಕರ ಮುಂದೆ ತಮ್ಮ ಪತ್ನಿಯನ್ನು ಅತ್ಯಂತ ಗೌರವದಿಂದ ಮತ್ತು ಹೆಮ್ಮೆಯಿಂದ ಪರಿಚಯಿಸುತ್ತಾರೆ. ಪತ್ನಿಗೆ ಸದಾ ರಕ್ಷಣೆ ನೀಡುವ ಇವರು, ಆಗಾಗ್ಗೆ ಆಶ್ಚರ್ಯಕರ ಉಡುಗೊರೆಗಳನ್ನು (Surprise Gifts) ನೀಡಿ ಸಂತಸಪಡಿಸುತ್ತಾರೆ. ಪತ್ನಿಯ ಕನಸುಗಳು ಮತ್ತು ವೃತ್ತಿಜೀವನಕ್ಕೆ ಇವರು ಸದಾ ಬೆಂಬಲವಾಗಿ ನಿಲ್ಲುತ್ತಾರೆ.
4. ತುಲಾ ರಾಶಿ (Libra)
ಶುಕ್ರ ಗ್ರಹದ ಪ್ರಭಾವದಿಂದಾಗಿ ತುಲಾ ರಾಶಿಯವರು ಹುಟ್ಟಿನಿಂದಲೇ ಪ್ರೇಮಮಯ ಸ್ವಭಾವದವರು. ದಾಂಪತ್ಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬಾರದಂತೆ ಇವರು ಸದಾ ಜಾಗರೂಕರಾಗಿರುತ್ತಾರೆ. ಪ್ರತಿಯೊಂದು ಸಣ್ಣ-ಪುಟ್ಟ ನಿರ್ಧಾರಗಳಲ್ಲೂ ಹೆಂಡತಿಯ ಅಭಿಪ್ರಾಯವನ್ನು ಕೇಳಿ, ಆಕೆಗೆ ಸಮಾನ ಸ್ಥಾನಮಾನ ನೀಡುತ್ತಾರೆ. ಪತ್ನಿಯನ್ನು ವಿಹಾರಕ್ಕೆ ಕರೆದುಕೊಂಡು ಹೋಗುವುದು, ಆಕೆಯಿಷ್ಟದ ಕೆಲಸಗಳನ್ನು ಮಾಡುವುದು ಇವರಿಗೆ ತುಂಬಾ ಇಷ್ಟ.
5. ಮೀನ ರಾಶಿ (Pisces):
ಗುರು ಮತ್ತು ಶುಕ್ರನ ಶುಭ ಪ್ರಭಾವ ಹೊಂದಿರುವ ಮೀನ ರಾಶಿಯವರು ಅತ್ಯಂತ ದಯಾಳುಗಳು ಮತ್ತು ಕಲ್ಪನಾಶೀಲರು. ಮೀನ ರಾಶಿಯ ಪುರುಷರು ತಮ್ಮ ಪತ್ನಿಯನ್ನು ಕೇವಲ ಪ್ರೀತಿಸುವುದಿಲ್ಲ, ದೇವತೆಯಂತೆ ಆರಾಧಿಸುತ್ತಾರೆ. ಹೆಂಡತಿಯ ಮುಖದಲ್ಲಿ ನಗು ನೋಡಲು ತಮ್ಮ ಸ್ವಂತ ಆಸೆ-ಆಕಾಂಕ್ಷೆಗಳನ್ನು ತ್ಯಾಗ ಮಾಡಲು ಇವರು ಹಿಂಜರಿಯುವುದಿಲ್ಲ. ಪತ್ನಿಯ ಪ್ರತಿಯೊಂದು ನಿರ್ಧಾರಕ್ಕೂ ಬೆನ್ನೆಲುಬಾಗಿ ನಿಂತು ಆಕೆಯ ಯಶಸ್ಸಿನಲ್ಲಿ ಭಾಗಿಯಾಗುತ್ತಾರೆ.
Topics
ಸಂಬಂಧಿತ ಸುದ್ದಿಗಳು
astrology
ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ವ್ರತದ ಪೌರಾಣಿಕ ಸಂಪೂರ್ಣ ಹಿನ್ನೆಲೆ ಇಲ್ಲಿದೆ
astrology
ಆಗಸ್ಟ್ 12 ರಂದು ಭೀಮನ ಅಮಾವಾಸ್ಯೆ ಸಂಭ್ರಮ: ಆಚರಣೆಗೆ ಸೂರ್ಯಗ್ರಹಣ ಯಾವುದೇ ಅಡ್ಡಿಯಿಲ್ಲ
astrology
ಗುರು ಕೃಪೆಯಿಂದ 'ಕೋಟ್ಯಾಧಿಪತಿ ಯೋಗ': ಈ 5 ರಾಶಿಯವರಿಗೆ ಸಂಪತ್ತಿನ ಸುರಿಮಳೆ
astrology

