'ಕೌನ್ ಬನೇಗಾ ಕರೋಡ್‌ಪತಿ' ಶೋನಲ್ಲಿ ಯಶ್ ಕುರಿತು ಪ್ರಶ್ನೆ: ಯಶ್ ಪಯಣ ಮೆಚ್ಚಿದ ಬಿಗ್ ಬಿ!
ಯಶ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೇರುತ್ತಿದೆ. ದೇಶದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' (KBC) ಅಂಗಳದಲ್ಲೂ ಈಗ ಯಶ್ ಅವರ ಹೆಸರು
By Meghana Pranuth | ಮೇಘನಾ ಪ್ರಣೂತ್
1 min read
ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ 'ರಾಕಿಂಗ್ ಸ್ಟಾರ್' ಯಶ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೇರುತ್ತಿದೆ. ದೇಶದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' (KBC) ಅಂಗಳದಲ್ಲೂ ಈಗ ಯಶ್ ಅವರ ಹೆಸರು ಮೊಳಗಿರುವುದು!
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಶೋನಲ್ಲಿ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳ ಬಿರುದುಗಳಿಗೆ (Titles) ಸಂಬಂಧಿಸಿದಂತೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು:
ಪ್ರಶ್ನೆ: "ರಜನಿಕಾಂತ್ ಅವರಿಗೆ 'ಸೂಪರ್', ಚಿರಂಜೀವಿ ಅವರಿಗೆ 'ಮೆಗಾ' ಹಾಗೂ ಪವನ್ ಕಲ್ಯಾಣ್ ಅವರಿಗೆ 'ಪವರ್' ಎಂಬ ಬಿರುದುಗಳಿದ್ದರೆ, ನಟ ಯಶ್ ಅವರಿಗೆ ಇರುವ ಬಿರುದೇನು?"
ಸ್ಪರ್ಧಿ 'ರಾಕಿಂಗ್ ಸ್ಟಾರ್' ಎಂದು ಸರಿಯಾದ ಉತ್ತರ ನೀಡಿದರು. ಈ ವೇಳೆ ಅಮಿತಾಭ್ ಬಚ್ಚನ್ ಅವರು ಸಹ ಯಶ್ ಅವರ ಸಿನಿಮಾ ಪಯಣ ಹಾಗೂ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕೆಬಿಸಿಯಂತಹ ರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ದಗ್ಗಜ ನಟರ ಸಾಲಿನಲ್ಲಿ ಯಶ್ ಹೆಸರು ಪ್ರಸ್ತಾಪವಾಗಿರುವುದು ಅವರ ಅಗಾಧ ಕ್ರೇಜ್‌ಗೆ ಮತ್ತೊಂದು ಸಾಕ್ಷಿಯಾಗಿದೆ.
'ಕೆಜಿಎಫ್' ಸರಣಿಯ ಜಾಗತಿಕ ಯಶಸ್ಸಿನ ನಂತರ ಯಶ್ ಅವರ ಪ್ರತಿಯೊಂದು ಹೆಜ್ಜೆಯೂ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟೀಸರ್/ಟ್ರೇಲರ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದ್ದು, ಚಿತ್ರವು ಆಗಸ್ಟ್ 26ರಂದು ಬಿಡುಗಡೆಯಾಗಲಿದೆ.
ಬಾಲಿವುಡ್‌ನ ಬೃಹತ್ ವೆಂಚರ್ 'ರಾಮಾಯಣ' ಸಿನಿಮಾದಲ್ಲಿ ಯಶ್ ಅವರು 'ರಾವಣ'ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾ ದೀಪಾವಳಿ ಹಬ್ಬದ ವೇಳೆಗೆ ತೆರೆಕಾಣಲಿದೆ.
Topics
ಸಂಬಂಧಿತ ಸುದ್ದಿಗಳು
entertainment
"ಕನಸಿನಲ್ಲಿ ಬಂದು ತಬ್ಬಿಕೊಂಡಿದ್ದ" ಸುಶಾಂತ್ ಸಿಂಗ್: ಭಾವುಕರಾದ ಸಹೋದರಿ ಶ್ವೇತಾ, ಧೋನಿ ವಿರುದ್ಧ ಬೇಸರ!
entertainment
ನಟ ಯಶ್ ವಿರುದ್ಧ ನಟಿ ರಿಷಿಕಾ ಸಿಂಗ್ ಹೇಳಿಕೆ : ಸಿಡಿದೆದ್ದ ರಾಕಿಂಗ್ ಸ್ಟಾರ್ ಅಭಿಮಾನಿಗಳು
entertainment
ಸರ್ಜರಿ ವೇಳೆ ಆಪರೇಷನ್ ಟೇಬಲ್ನಲ್ಲೇ ಹಾಡು ಹಾಡಿದ ಸೋನು ನಿಗಮ್! ವೀಡಿಯೊ ವೈರಲ್
entertainment

