ದಿನಭವಿಷ್ಯ ಅಕ್ಟೋಬರ್ 10, 2026 ರ ಶನಿವಾರ. ಭಾದ್ರಪದ ಮಾಸ, ಕೃಷ್ಣಪಕ್ಷದ ದಿನದಂದು ಹಸ್ತ ನಕ್ಷತ್ರ ಹಾಗೂ ಇಂದ್ರ ಯೋಗ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಿಂದೂ ಧರ್ಮದಲ್ಲಿ ಇಂದಿನ ದಿನ ಅಂತ್ಯಂತ ಮಹತ್ವದ ದಿನ. ಈ ದಿನ ಸೂರ್ಯೋದಯದಿಂದ ಹಿಡಿದು ರಾತ್ರಿ 9.19ರವರೆಗೆ ಅಮಾವಾಸ್ಯೆಯ (2026 Mahalaya) ತಿಥಿ ಇರಲಿದೆ. ಈ ದಿನ ಪಿತೃಗಳಿಗೆ ಮಾಡುವ ತರ್ಪಣ, ಶ್ರಾದ್ದ ಕಾರ್ಯ, ದಾನ- ಧರ್ಮಗಳು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.
ಮೇಷರಾಶಿ (Aries)
ನಿಮ್ಮ ಪಾಲಿಗೆ ಇಂದು ಮಿಶ್ರಫಲಗಳಿಂದ ಕೂಡಿದ ದಿನವಾಗಿ ಇರಲಿದೆ. ವೃತ್ತಿರಂಗದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವುದು ಅತ್ಯವಶ್ಯಕ. ಪ್ರಯಾಣದ ವೇಳೆಯಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಬಹಳ ಎಚ್ಚರಿಕೆಯನ್ನು ವಹಿಸಿ.
ವೃಷಭ ರಾಶಿ (Taurus)
ಅನಿರೀಕ್ಷಿತ ಲಾಭ ಉಂಟಾಗಲಿದ್ದು, ಸಾಮಾಜಿಕವಾಗಿ ಕೀರ್ತಿ ಪ್ರತಿಷ್ಠೆ ಹೆಚ್ಚಲಿದೆ. ಸಂಗಾತಿಯ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ. ಹೊಸ ವ್ಯವಹಾರಕ್ಕೆ ಹೂಡಿಕೆ ಮಾಡುವುದುದಕ್ಕೆ ಇಂದು ಅತ್ಯಂತ ಅನುಕೂಲಕರವಾಗಿರುವ ದಿನ.
ಮಿಥುನ ರಾಶಿ (Gemini)
ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮ್ಮ ಕಾರ್ಯವನ್ನು ಪ್ರಶಂಸಿಸುತ್ತಾರೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದ್ದು, ಹಲವು ದಿನಗಳಿಂದ ಸ್ಥಗಿತವಾಗಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಶುಭ ಸುದ್ದಿಗಳು ಸಿಗಲಿದೆ.
ಕರ್ಕಾಟಕ ರಾಶಿ (Cancer)
ಆರ್ಥಿಕ ವಿಚಾರದಲ್ಲಿ ನೀವು ಎಚ್ಚರಿಕೆಯ ವಹಿಸಲೇ ಬೇಕು. ವ್ಯವಹಾರಿಕವಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಬದಲು ನೂರು ಬಾರಿ ಯೋಚಿಸಿ. ಅನಗತ್ಯ ಖರ್ಚುಗಳು ಹೆಚ್ಚಳವಾಗುವ ಸಾಧ್ಯತೆಯಿದೆ. ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ನಷ್ಟವನ್ನು ತರಬಹುದು. ತಾಳ್ಮೆಯಿಂದ ವ್ಯವಹಾರ ಕ್ಷೇತ್ರದಲ್ಲಿ ವರ್ತಿಸಿ.
ಸಿಂಹ ರಾಶಿ (Leo)
ಕೆಲಸದ ಒತ್ತಡದ ನಡುವಲ್ಲೇ ನಿಮ್ಮ ನಾಯಕತ್ವದ ಗುಣದಿಂದ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೀರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ. ಹೊರಗಿನ ಆಹಾರವನ್ನು ಸಾಧ್ಯವಾದಷ್ಟು ತಪ್ಪಿಸಿ. ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
ಕನ್ಯಾ ರಾಶಿ (Virgo)
ನಿಮ್ಮ ರಾಶಿಯಲ್ಲಿಯೇ ಚಂದ್ರನ ಸಂಚಾರ ಇರುವುದರಿಂದ ಮನಸ್ಸು ಆಹ್ಲಾದದ ಜೊತೆಗೆ ಸಕಾರಾತ್ಮಕವಾಗಿ ಇರಲಿದೆ. ಸೃಜನಶೀಲತೆ ಮತ್ತು ಮಾತಿನ ಚಾತುರ್ಯದಿಂದ ಎಲ್ಲರ ಮೆಚ್ಚುಗೆ ಗಳಿಸುತ್ತೀರಿ. ಕೌಟುಂಬಿಕವಾಗಿ ವಾತಾವರಣವು ಶಾಂತವಾಗಿ ಇರಲಿದೆ. ಬಂಧು ಮಿತ್ರರ ಆಗಮನದಿಂದ ನಿಮಗೆ ಸಂತಸ ಹೆಚ್ಚಾಗಿರಲಿದೆ.
ತುಲಾ ರಾಶಿ (Libra)
ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ. ಕಚೇರಿ ಕೆಲಸಗಳಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕವಾಗಿ ಹಳೆಯ ಸಾಲ ತೀರಿಸಲು ಅನುಕೂಲಕರವಾದ ವಾತಾವರಣ ಇರಲಿದೆ. ಕೋಪವನ್ನು ಸಾಧ್ಯವಾದಷ್ಟು ನಿಯಂತ್ರಣದಲ್ಲಿ ಇರಿಸುವುದು ಉತ್ತಮ.
ವೃಶ್ಚಿಕ ರಾಶಿ (Scorpio)
ಹೊಸ ಉದ್ಯಮ ಅಥವಾ ಮಹತ್ವದ ಯೋಜನೆಗಳನ್ನು ಆರಂಭಿಸಲು ಇಂದು ಶುಭದಿನ. ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಕಾರದಿಂದ ಕಷ್ಟಕರ ಕೆಲಸಗಳನ್ನು ಯಶಸ್ವಿ ಆಗಿ ಮುಗಿಸುತ್ತೀರಿ. ವೈವಾಹಿಕ ಜೀವನದಲ್ಲಿ ಪರಸ್ಪರ ಪ್ರೀತಿ ಮತ್ತು ಅನ್ಯೋನ್ಯತೆ ಹೆಚ್ಚಳವಾಗಲಿದೆ.
ಧನಸ್ಸು ರಾಶಿ (Sagittarius)
ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಸ್ವತಃ ಪರಿಶ್ರಮದ ಮೇಲೆ ನಂಬಿ ಇಡಿ. ಆರೋಗ್ಯ ಕ್ಷೇತ್ರದಲ್ಲಿ ಸ್ವಲ್ಪ ಸುಸ್ತು ಅಥವಾ ಆಯಾಸ ಕಂಡು ಬರುವ ಸಾಧ್ಯತೆಯಿದೆ. ಸಕಾಲದಲ್ಲಿ ನೀವು ವಿಶ್ರಾಂತಿಯನ್ನು ಪಡೆಯುವುದು ಅತೀ ಅವಶ್ಯಕ. ಹಣಕಾಸಿನ ವಿಚಾರದಲ್ಲಿ ಹೊಸ ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ.
ಮಕರ ರಾಶಿ (Capricorn)
ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿ ಆಗಿ ಪೂರೈಸುತ್ತೀರಿ. ದೂರ ಪ್ರಯಾಣ ನಿಮ್ಮ ಪಾಲಿಗೆ ಲಾಭವಾಗುವ ಸಾಧ್ಯತೆಯಿದೆ. ಧಾರ್ಮಿಕ ಕಾರ್ಯಗಳಲ್ಲಿ ಒಲವು ಹೆಚ್ಚಲಿದ್ದು, ಮನಸಿಗೆ ನೆಮ್ಮದಿ ಸಿಗಲಿದೆ.
ಕುಂಭ ರಾಶಿ (Aquarius)
ಶಾಂತಿ ಹಾಗೂ ಪ್ರತಿಫಲವು ಸಿಗುವ ದಿನವಾಗಿದೆ. ಸಂಗಾತಿಯೊಂದಿಗಿನ ಮನಸ್ತಾಪಗಳು ದೂರವಾಗಲಿದ್ದು, ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ವಿದ್ಯಾರ್ಥಿಗಳಿಗೆ ಏಕಾಗೃತೆ ಹೆಚ್ಚಲಿದೆ. ಇದರಿಂದ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವುದಕ್ಕೆ ಸಹಕಾರಿ ಆಗಲಿದೆ.
ಮೀನ ರಾಶಿ (Pisces)
ಮಹಾಲಯ ಅಮವಾಸ್ಯೆಯ ದಿನವಾದ ಇಂದು ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಗುತ್ತದೆ. ಸಾಮಾಜಿಕವಾಗಿ ಗೌವರ ಹೆಚ್ಚಲಿದ್ದು, ಕುಟುಂಬದಲ್ಲಿ ಮಂಗಳ ಕಾರ್ಯದ ಕುರಿತು ಚರ್ಚೆ ನಡೆಯಲಿದೆ. ಹೊಸ ಹೂಡಿಕೆಗಳಿಗೆ ಇಂದು ಸಕಾಲ.