Horscope Today in Kannada : ದಿನಭವಿಷ್ಯ ಅಕ್ಟೋಬರ್ 07, 2026, ಚಂದ್ರನ ಪ್ರಭಾವ ಯಾವರಾಶಿಗೆ ಲಾಭ
ದಿನಭವಿಷ್ಯ ಅಕ್ಟೋಬರ್ 07, 2026 ಬುಧವಾರ. ಇಂದು ಆಯುಷ್ಮಾನ್ ಶುಭ ಯೋಗ ಹಾಗೂ ಕೃಷ್ಣ ಪಕ್ಷದ ದ್ವಾದಶಿಯ ತಿಥಿ.
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
ದಿನಭವಿಷ್ಯ ಅಕ್ಟೋಬರ್ 07, 2026 ಬುಧವಾರ. ಇಂದು ಆಯುಷ್ಮಾನ್ ಶುಭ ಯೋಗ ಹಾಗೂ ಕೃಷ್ಣ ಪಕ್ಷದ ದ್ವಾದಶಿಯ ತಿಥಿ. ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುತ್ತಿದ್ದು, ಕೇತು, ಮಘಾ ನಕ್ಷತ್ರ ದ್ವಾದಶ ರಾಶಿಗಳ ಮೇಲೆ ವಿಶೇಷವಾದ ಪ್ರಭಾವ ಬೀರಲಿದೆ. ಹಾಗಾದ್ರೆ ಯಾವ ರಾಶಿಗೆ ಇಂದು ಯಾವ ರೀತಿಯ ಫಲಗಳಿವೆ ಅನ್ನೋದನ್ನು ತಿಳಿಯೋಣಾ ಬನ್ನಿ.
ಮೇಷ ರಾಶಿ (Aries)
ವೃತ್ತಿ ಜೀವನದಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿದೆ. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳ ಬೆಂಬಲ ಸಿಗಲಿದ್ದು, ದೊಡ್ಡ ಜವಾಬ್ದಾರಿ ಹೆಗಲೇರಲಿದೆ. ಹಣಕಾಸಿನ ಪರಿಸ್ಥಿತಿಯೂ ಉತ್ತಮವಾಗಿ ಇರಲಿದ್ದು, ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಮಾರ್ಗಗಳು ಗೋಚರಕ್ಕೆ ಬರಲಿದೆ. ಆದರೆ ನಿಮ್ಮ ಕುಟುಂಬದ ಹಿರಿಯರ ಆರೋಗ್ಯದ ಕಡೆಗೆ ಗಮನ ಹರಿಸಿ.
ವೃಷಭ ರಾಶಿ (Taurus)
ಉದ್ಯೋಗ ಸ್ಥಳ ಮತ್ತು ಮನೆಯಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಾಹನ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ನಿಮ್ಮಲ್ಲಿರುವ ಕಲೆ, ಬರವಣಿಗೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಪ್ರೀತಿ-ವಿಶ್ವಾಸದಿಂದ ಕುಟುಂಬದಲ್ಲಿ ಸಾಮರಸ್ಯ ಇರಲಿ.
ಮಿಥುನ ರಾಶಿ (Gemini)
ವ್ಯವಹಾರ ಕ್ಷೇತ್ರದಲ್ಲಿ ಅತ್ಯಂತ ಯಶಸ್ಸು ನಿಮ್ಮದಾಗಲಿದೆ. ಮಾತಿನ ಚಾಣಾಕ್ಷತೆಯಿಂದ ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಬಾಕಿ ಉಳಿದ ಕೆಲಸಗಳನ್ನು ಸುಲಭವಾಗಿ ಮುಗಿಸುತ್ತೀರಿ. ವ್ಯಾಪಾರಿಗಳ ಪಾಲಿಗೆ ಆರ್ಥಿಕವಾಗಿ ಲಾಭದಾಯಕವಾದ ದಿನ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಮನ್ನಣೆ ಸಿಗಲಿದೆ.
ಕರ್ಕಾಟಕ ರಾಶಿ (Cancer)
ಕೌಟುಂಬಿಕವಾಗಿ ಮನೆಯ ಸದಸ್ಯರ ಜೊತೆಗೆ ಮನಸ್ತಾಪಗಳು ದೂರವಾಗಲಿದೆ. ಇದರಿಂದಾಗಿ ಮನೆಯಲ್ಲಿ ಸೌಹಾರ್ದದ ವಾತಾವರಣ ನೆಲೆಸಲಿದೆ. ಆರ್ಥಿಕವಾಗಿ ನಿಮ್ಮ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಅನಗತ್ಯ ಖರ್ಚುಗಳನ್ನು ಮಾಡಬೇಡಿ. ದೂರ ಪ್ರಯಾಣದ ವೇಳೆಯಲ್ಲಿ ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.
ಸಿಂಹ ರಾಶಿ (Leo)
ಚಂದ್ರನು ನಿಮ್ಮದೇ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ, ನಾಯಕತ್ವ ಗುಣಗಳು ಉತ್ತುಂಗಕ್ಕೆ ಏರಿಲಿವೆ. ಸಾಮಾಜಿಕವಾಗಿ ನಿಮ್ಮ ಗೌರವ, ಪ್ರತಿಷ್ಠಗಳು ಹೆಚ್ಚಲಿದೆ. ಉದ್ಯೋಗದಲ್ಲಿ ಭಡ್ತಿ, ವ್ಯವಹಾರಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಾಣಲಿದೆ. ಹೊಸ ಜವಾಬ್ದಾರಿಗಳು ಒಲಿದು ಬರಲಿದೆ. ಹೂಡಿಕೆಗಳಿಂದಲೂ ಅಧಿಕ ಲಾಭ ಸಿಗಲಿದೆ.
ಕನ್ಯಾ ರಾಶಿ (Virgo)
ವಿದೇಶಿ ಮೂಲಗಳಿಂದ ನಿಮಗೆ ಅಧಿಕ ಲಾಭ ಸಿಗಲಿದೆ. ದೂರ ಪ್ರಯಾಣವೂ ಲಾಭದಾಯಕ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡು ಬಂದರೂ ಕೂಡ ದೊಡ್ಡ ತೊಂದರೆ ಇರುವುದಿಲ್ಲ. ಖರ್ಚು ವೆಚ್ಚಗಳು ಅಧಿಕವಾಗುವ ಸಾಧ್ಯತೆ ಇರುತ್ತದೆ. ಆರ್ಥಿಕವಾಗಿ ಕೈಗೊಳ್ಳುವ ಯೋಜನೆಯಲ್ಲಿ ಎಚ್ಚರಿಕೆ ಇರಲಿ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ತುಲಾ ರಾಶಿ (Libra)
ಸಾಮಾಜಿಕ ವಲಯದಲ್ಲಿ ನಿಮ್ಮ ಜನಪ್ರಿಯತೆ ದುಪ್ಪಟಾಗಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಆರ್ಥಿಕ ಮುಗ್ಗಟ್ಟು ನಿವಾರಣೆ ಆಗಲಿದೆ. ವ್ಯವಹಾರಿಕವಾಗಿ ನಿಮ್ಮ ಪಾಲುದಾರರ ಜೊತೆಗೆ ಉತ್ತಮ ಬಾಂಧವ್ಯ ಹೊಂದುವುದರಿಂದ ಲಾಭವನ್ನು ತಂದುಕೊಡಲಿದೆ. ಸ್ನೇಹಿತರ ನೆರವಿನಿಂದ ದೀರ್ಘಕಾಲದ ಆಸೆಗಳು ಈಡೇರಲಿದೆ.
ವೃಶ್ಚಿಕ ರಾಶಿ (Scorpio)
ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರಶಂಸೆ ಸಿಗಲಿದೆ. ಉದ್ಯೋಗ ಕ್ಷೇತ್ರವೂ ಲಾಭದಾಯಕವಾಗಿ ಇರಲಿದೆ. ಮೇಲಾಧಿಕಾರಿಗಳ ವಿಶ್ವಾಸವನ್ನು ಗಳಿಸುವಲ್ಲಿ ನೀವು ಯಶಸ್ವಿ ಆಗುತ್ತೀರಿ. ಹೊಸ ಉದ್ಯಮ ಆರಂಭ, ಉದ್ಯೋಗ ಬದಲಾವಣೆಯ ಆಲೋಚನೆ ಇದ್ದರೆ ಸಕಾರಾತ್ಮಕ ಸುಳಿವು ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಸಂಭ್ರಮ ನೆಲೆಸಲಿದೆ.
ಧನಸ್ಸು ರಾಶಿ (Sagittarius)
ನಿಮ್ಮ ಪಾಲಿಗೆ ಇಂದು ಸಂಪೂರ್ಣ ಅದೃಷ್ಟದ ದಿನ. ಧಾರ್ಮಿಕ ಕಾರ್ಯ, ಧಾರ್ಮಿಕ ಕ್ಷೇತ್ರಗಳ ಬೇಟಿಯಲ್ಲಿ ಕುಟುಂಬಸ್ಥರು ಪಾಲ್ಗೊಳ್ಳುತ್ತಾರೆ. ವ್ಯಾಪಾರ ಕ್ಷೇತ್ರದ ವಿಸ್ತರಣೆ, ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಹೊಸ ಯೋಜನೆಯನ್ನು ರೂಪಿಸುವುದಕ್ಕೆ ಇದು ಅತ್ಯಂತ ಅನುಕೂಲಕರವಾದ ದಿನ.
ಮಕರ ರಾಶಿ (Capricorn)
ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯನ್ನು ವಹಿಸುವುದು ಅತೀ ಮುಖ್ಯ. ಅನಗತ್ಯ ಆತಂಕಗಳನ್ನು ಮನಸ್ಸಿಗೆ ಹಾಕಿಕೊಳ್ಳಬೇಡಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಹಣಕಾಸಿನ ವ್ಯವಹಾರಗಳಲ್ಲಿ ಯಾರನ್ನೂ ಸಂಪೂರ್ಣವಾಗಿ ನಂಬಿ ದೊಡ್ಡ ಮೊತ್ತವನ್ನು ತೊಡಗಿಸಬೇಡಿ. ತಾಳ್ಮೆಯಿಂದ ದಿನ ಕಳೆಯುವುದು ಉತ್ತಮ.
ಕುಂಭ ರಾಶಿ (Aquarius)
ದಾಂಪತ್ಯ ಜೀವನದಲ್ಲಿ ಹೆಚ್ಚು ಮಧುರತೆ ಇರಲಿ. ನಿಮ್ಮ ಜೊತೆಗಿನ ಅನ್ಯೋನ್ಯತೆ ಕೂಡ ಹೆಚ್ಚಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದ ಲಾಭಗಳಿಸುತ್ತೀರಿ. ಸಾಮಾಜಿಕವಾಗಿ ನಿಮ್ಮ ಪ್ರಭಾವ ಹೆಚ್ಚಲಿದ್ದು, ಹೊಸ ಒಡನಾಟಗಳು ಭವಿಷ್ಯಕ್ಕೆ ಸಹಕಾರಿ ಆಗಲಿದೆ. ಮನಸ್ಸಿನಲ್ಲಿದ್ದ ಎಲ್ಲಾ ಗೊಂದಲಗಳು ಪರಿಹಾರವಾಗಲಿದೆ.
ಮೀನ ರಾಶಿ (Pisces)
ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವ್ಯಾಜ್ಯಗಳು ಪರಿಹಾರ ಆಗಲಿದೆ. ಶತ್ತುಗಳ ಮೇಲೆ ನೀವು ಇಂದು ಜಯ ಸಾಧಿಸುತ್ತೀರಿ. ದೈಹಿಕವಾಗಿ ಆಯಾಸ ಇದ್ದರೂ ಕೂಡ ಕಠಿಣ ಪರಿಶ್ರಮದಿಂದ ಅಂದುಕೊಂಡಿರುವ ಕೆಲಸ ಕಾರ್ಯಗಳನ್ನು ನೀವು ಪೂರ್ಣಗೊಳಿಸುತ್ತೀರಿ. ಆರೋಗ್ಯದಲ್ಲಿಯೂ ಸುಧಾರಣೆಯನ್ನು ಕಾಣಲಿದೆ.
Topics
ಸಂಬಂಧಿತ ಸುದ್ದಿಗಳು
astrology
ಮನೆಯಲ್ಲಿ, ಮನಸ್ಸಿನಲ್ಲಿ ನೆಮ್ಮದಿ ತರಬೇಕಾ.. ಹಾಗಾದರೆ ಕರುಂಗಲಿ ಮಾಲೆ ಧರಿಸುವ ಮುನ್ನ ಇದನ್ನು ತಿಳಿಯಿರಿ
astrology
Horoscope Today in Kannada : ದಿನಭವಿಷ್ಯ ಅಕ್ಟೋಬರ್ 06 2026 : 12 ರಾಶಿಗಳ ಸಂಪೂರ್ಣ ರಾಶಿ ಭವಿಷ್ಯ
astrology
Horoscope Today in Kannada : ದಿನಭವಿಷ್ಯ ೦5 ಅಕ್ಟೋಬರ್ 2026 : ಪುನರ್ವಸು ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಅದೃಷ್ಟ
astrology

