ದಿನಭವಿಷ್ಯ ಅಕ್ಟೋಬರ್ 15, 2026 ಇಂದು ಗುರುವಾರ. ಶುಕ್ಲ ಪಕ್ಷದ ಪಂಚಮಿ, ದ್ವಾದಶ ರಾಶಿಗಳ ಮೇಲೆ ಜೇಷ್ಠ ನಕ್ಷತ್ರ ಹಾಗೂ ಸೌಭಾಗ್ಯ ಯೋಗದ ಲಾಭವಿದೆ. ಇಂದು ಯಾವ ರಾಶಿಗೆ ಗುರುರಾಯರ ಅನುಗ್ರಹ ಸಿಗಲಿದೆ. ಮೇಷ ರಾಶಿಯಿಂದ ಮೀನರಾಶಿಯವರೆಗೆ ಒಟ್ಟು 12 ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ.
ಮೇಷ ರಾಶಿ ದಿನಭವಿಷ್ಯ (Aries)
ಕಾರ್ಯ ಕ್ಷೇತ್ರದಲ್ಲಿ ಹೊಸ ಕೆಲಸಗಳು, ಜವಾಬ್ದಾರಿಗಳು ನಿಮ್ಮನ್ನು ಹುಡುಕೊಂಡು ಬರಲಿದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದಕ್ಕೆ ಅವಕಾಶ ಸಿಗಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಯೋಜನೆ ಆರಂಭಿಸಲು ಇದು ಸಕಾಲ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆಯಿದೆ. ತಾಳ್ಮೆಯಿಂದ ವರ್ತಿಸಿ, ಆರೋಗ್ಯದ ಕಡೆಗೆ ಗಮನ ಹರಿಸಿ.
ವೃಷಭ ರಾಶಿ ಭವಿಷ್ಯ (Taurus)
ಸತತ ಪ್ರಯತ್ನಗಳಿಂದ ಉತ್ತಮ ಫಲವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತದೆ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯ. ಹಣಕಾಸಿನ ಉಳಿತಾಯದ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಿ. ಕುಟುಂಬದವರ ಜೊತೆಗೆ ಸಂತೋಷದಿಂದ ಸಮಯ ಕಳೆಯಿರಿ. ಮನಸಿಗೆ ನೆಮ್ಮದಿಗೆ ವಿಶ್ರಾಂತಿಯನ್ನು ಪಡೆಯಿರಿ. ಆತುರದ ನಿರ್ಧಾರ ಬೇಡ.
ಮಿಥುನ ರಾಶಿ ಭವಿಷ್ಯ (Gemini)
ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ಇತರರ ಜೊತೆಗೆ ಹಂಚಿಕೊಳ್ಳುವುದಕ್ಕೆ ಇದು ಸಕಾಲ. ನಿಮ್ಮಲ್ಲಿರುವ ಸಂವಹನ ಕೌಶಲ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ಹೊಸ ಸಂಪರ್ಕಗಳು ಮುಂದೆ ಪ್ರಯೋಜನಕ್ಕೆ ಬರಲಿದೆ. ಕುಟುಂಬದವರ ಸಲಹೆಗೆ ಹೆಚ್ಚಿನ ಮನ್ನಣೆ ನೀಡಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವುದು ಮುಖ್ಯ.
ಕರ್ಕಾಟಕ ರಾಶಿ ಭವಿಷ್ಯ (Cancer)
ಕೌಟುಂಬಿಕ ವಿಚಾರಗಳಲ್ಲಿ ನೀವು ಗಮನ ಸೆಳೆಯುತ್ತೀರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳನ್ನು ನೀವು ಸಮರ್ಥವಾಗಿ ನಿಭಾಯಿಸುತ್ತೀರಿ. ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡುವ ಮುನ್ನ ಯೋಚಿಸಿ. ಹಣಕಾಸಿನ ವ್ಯವಹಾರಗಳಲ್ಲಿ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಿ. ಆತ್ಮೀಯರ ಜೊತೆಗೆ ಮನಬಿಚ್ಚಿ ಮಾತನಾಡಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವಹಿಸಬೇಡಿ.
ಸಿಂಹ ರಾಶಿ ಭವಿಷ್ಯ(Leo)
ಆತ್ಮವಿಶ್ವಾಸವನ್ನು ವೃದ್ದಿಸುವ ಕೆಲಸಗಳಿಗೆ ಪುಷ್ಠಿ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಉತ್ತಮ ಬೆಂಬಲ ಸಿಗಲಿದೆ. ವ್ಯವಹಾರ ಕ್ಷೇತ್ರದಲ್ಲಿ ಗ್ರಾಹಕರ ಬೇಡಿಗೆ ಅನುಗುಣವಾಗಿ ಯೋಜನೆ ರೂಪಿಸುತ್ತೀರಿ. ಆದಾಯ ಮತ್ತು ಖರ್ಚಿನ ಬಗ್ಗೆ ಸಮತೋಲನವನ್ನು ಕಾಪಾಡಿಕೊಳ್ಳಿ. ಕೌಟುಂಬಿಕವಾಗಿ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತದೆ. ಹೊಸ ವ್ಯವಹಾರಕ್ಕೆ ಹೂಡಿಕೆದಾರರ ಬೆಂಬಲ ಸಿಗಲಿದೆ.
ಕನ್ಯಾ ರಾಶಿ ಭವಿಷ್ಯ (Virgo)
ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವ್ಯಪಾರಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿ. ಕೌಟುಂಬಿಕ ಜವಾಬ್ದಾರಿಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿ. ಆರೋಗ್ಯಕ್ಕಾಗಿ ದೈಹಿಕ ಕಸರತ್ತು ನಡೆಸುವುದು ಅತೀ ಮುಖ್ಯ.
ತುಲಾ ರಾಶಿ ಭವಿಷ್ಯ (Libra)
ವ್ಯವಹಾರಿಕ ವಿಚಾರದಲ್ಲಿ ನೀವು ಇಂದು ಸಮತೋಲನದ ನಿರ್ಧಾರವನ್ನು ಕೈಗೊಳ್ಳುವುದು ಅತೀ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಪಾಲುದಾರರ ಜೊತೆಗೆ ಸ್ಪಷ್ಟವಾದ ಮಾತುಕತೆಯನ್ನು ನಡೆಸಿ, ಅನಗತ್ಯವಾಗಿರುವ ಖರೀದಿಗಳನ್ನು ಸಾಧ್ಯವಾದಷ್ಟು ಮುಂದೂಡಿಕೆ ಮಾಡುವುದು ಅತೀ ಅಗತ್ಯ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳುವುದು ಅತೀ ಮುಖ್ಯ.
ವೃಶ್ಚಿಕ ರಾಶಿ ಭವಿಷ್ಯ (Scorpio)
ಬಾಕಿ ಇರುವ ಕೆಲಸ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸಿ. ಉದ್ಯೋಗ ಕ್ಷೇತ್ರದಲ್ಲಿ ಏಕಾಗ್ರತೆಯಿಂದ ಕಾರ್ಯ ನಿರ್ವಹಿಸುವುದು ಅತೀ ಮುಖ್ಯ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವುದು ಒಳಿತು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಮೂಡಲಿದೆ. ಕುಟುಂಬಸ್ಥರ ಜೊತೆಗೆ ನಿಮಗೆ ನೆಮ್ಮದಿಯ ವಾತಾವರಣ ಸಿಗಲಿದೆ.
ಧನಸ್ಸುರಾಶಿ ಭವಿಷ್ಯ (Sagittarius)
ಉದ್ಯೋಗ ಕ್ಷೇತ್ರದಲ್ಲಿ ಗುರಿ ಸಾಧಿಸಲು ಶಿಸ್ತು, ಪರಿಶ್ರಮ ಅತೀ ಅಗತ್ಯ. ಹಣಕಾಸಿನ ವಿಚಾರದಲ್ಲಿ ಅಪರಿಚಿತರ ಮಾತನ್ನು ಎಂದಿಗೂ ನಂಬಲೇ ಬೇಡಿ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ. ಪ್ರಯಾಣ ಮಾಡುವ ಯೋಚನೆಗಳಿದ್ದರೆ, ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಿ. ಕುಟುಂಬದವರ ಜೊತೆಗೆ ಹೊಂದಾಣಿಕೆ ಅತೀ ಮುಖ್ಯ.
ಮಕರ ರಾಶಿ ಭವಿಷ್ಯ (Capricorn)
ವ್ಯವಹಾರ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆದರೆ ನೀವು ತಾಳ್ಮೆಯಿಂದ ಇನ್ನಷ್ಟು ಸಮಯ ಕಾಯಲೇ ಬೇಕು. ಹಿರಿಯ ಮಾರ್ಗದರ್ಶನವನ್ನು ಪಡೆದು ಉದ್ಯೋಗ ಕ್ಷೇತ್ರದಲ್ಲಿ ಮುಂದುವರಿಯಿರಿ, ವ್ಯಾಪಾರಸ್ಥರಿಗೆ ಹೊಸ ಗ್ರಾಹಕರನ್ನು ಸಂಪರ್ಕಿಸಲು ಅವಕಾಶ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕೆಲಸವೊಂದು ಪೂರ್ಣಗೊಳ್ಳಲಿದೆ. ಒತ್ತಡ ಹೆಚ್ಚಾಗದಂತೆ ಕೆಲಸ ಕಾರ್ಯಗಳನ್ನು ನಿಭಾಯಿಸಿರಿ.
ಕುಂಭ ರಾಶಿ ಭವಿಷ್ಯ (Aquarius)
ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದಕ್ಕೆ ಅವಕಾಶವಿದೆ. ವ್ಯವಹಾರದಲ್ಲಿ ಗ್ರಾಹಕರ ಅಭಿಪ್ರಾಯಗಳನ್ನು ಮುಖ್ಯವಾಗಿ ಆಲಿಸಿ. ಆದಾಯದ ಹೆಚ್ಚಿಸುವ ಮಾರ್ಗಗಳು ನಿಮಗೆ ಗೋಚರಕ್ಕೆ ಬರಲಿದೆ. ಸ್ನೇಹಿತರ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ. ಕುಟುಂಬದ ಹಿರಿಯರ ಅಗತ್ಯಗಳ ಬಗ್ಗೆ ಕಾಳಜಿ ವಹಿಸಿ. ಹೊಸ ಆಲೋಚನೆಗಳು ಕಾರ್ಯ ರೂಪಕ್ಕೆ ಬರಲಿದೆ.
ಮೀನ ರಾಶಿ ಭವಿಷ್ಯ (Pisces)
ನಿಮ್ಮ ಪ್ರತಿಭೆಗೆ ತಕ್ಕದಾದ ಅವಕಾಶಗಳು ಹುಡುಕಿಕೊಂಡು ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೆ ಕೆಲಸ ಕಾರ್ಯಗಳನ್ನು ನೀವು ಪೂರ್ಣಗೊಳಿಸಿ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳನ್ನು ಪರಿಶೀಲಿಸಿದ ನಂತರವೇ ಮುಂದುವರಿಯುವುದು ತೀರಾ ಅಗತ್ಯ. ಹಣಕಾಸಿನ ವಿಚಾರದಲ್ಲಿ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಿ. ಕುಟುಂಬಸ್ಥರ ಜೊತೆಗೆ ಬಾಂಧವ್ಯ ಇನ್ನಷ್ಟು ಬಲವಾಗಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಿ.