Kannada News Next

astrology

ಸೂರ್ಯನ ನಕ್ಷತ್ರ ಬದಲಾವಣೆ : ಈ ನಾಲ್ಕು ರಾಶಿಯವರ ಬಾಳಲ್ಲಿ ಹೊಸ ಬೆಳಕು !

ಸೂರ್ಯನು ಅಕ್ಟೋಬರ್‌ 24 ರಂದು ಈಗಿರುವ ಚಿತ್ರ ನಕ್ಷತ್ರಪುಂಜದಿಂದ ಸ್ವಾತಿ ನಕ್ಷತ್ರಪುಂಜಕ್ಕೆ ಪ್ರವೇಶಿಸುತ್ತಾನೆ. ಇದು ಯಾವ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇಲ್ಲಿದೆ ಓದಿ.

By Archana V Bhat | ಅರ್ಚನಾ ವಿ ಭಟ್‌
Surya Gochar

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನವಿದೆ. ಸೂರ್ಯನನ್ನು ಆತ್ಮವಿಶ್ವಾಸ. ಗೌರವ, ನಾಯಕತ್ವ ಗುಣ ಮುಂತಾದ ಅಂಶವೆಂದು ಪರಿಗಣಿಸಲಾಗಿದೆ. ಸೂರ್ಯನ ಚಲನೆ ಅಥವಾ ನಕ್ಷತ್ರಪುಂಜ ಬದಲಾದಾಗ ರಾಶಿಚಕ್ರದ ಎಲ್ಲ 12 ರಾಶಿಗಳ ಮೇಲೆ ವಿಭಿನ್ನವಾದ ಪರಿಣಾಮಗಳನ್ನು ಬೀರುತ್ತದೆ. ಇದು ಪ್ರತ್ಯೇಕ ವ್ಯಕ್ತಿಯ ಜೀವನದ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಫಲಗಳನ್ನು ನೀಡುತ್ತದೆ. ಇದೇ ಅಕ್ಟೋಬರ್‌ 24, 2026 ರಂದು ಸೂರ್ಯನು ಸ್ವಾತಿ ನಕ್ಷತ್ರಪುಂಜವನ್ನು ಪ್ರವೇಶಿಸುತ್ತಾನೆ. ಸೂರ್ಯನ ಈ ಬದಲಾವಣೆಯು ಮುಂದಿನ 15 ದಿನಗಳ ಕಾಲ ನಾಲ್ಕು ರಾಶಿಯವರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಆ ನಾಲ್ಕು ರಾಶಿಗಳು ಯಾವುವು ಎಂದು ನೋಡೋಣ.

ಸೂರ್ಯನ ನಕ್ಷತ್ರಪುಂಜ ಬದಲಾವಣೆ ಯಾವಾಗ?

ಜ್ಯೋತಿಷ್ಯ ಲೆಕ್ಕಚಾರದ ಪ್ರಕಾರ ಸೂರ್ಯನು ಅಕ್ಟೋಬರ್‌ 24 ರಂದು ಈಗಿರುವ ಚಿತ್ರ ನಕ್ಷತ್ರಪುಂಜದಿಂದ ಸ್ವಾತಿ ನಕ್ಷತ್ರಪುಂಜಕ್ಕೆ ಪ್ರವೇಶಿಸುತ್ತಾನೆ. ಸ್ವಾತಿ ನಕ್ಷತ್ರದ ಅಧಿಪತಿ ರಾಹು. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಆತ್ಮವಿಶ್ವಾಸ, ಪ್ರತಿಷ್ಠ ಮತ್ತು ಅಧಿಕಾರದ ಸಂಕೇತ. ಆದರೆ ರಾಹುವು ಹಠಾತ್‌ ಬದಲಾವಣೆ, ಮಹತ್ವಾಕಾಂಕ್ಷೆ, ಅನಿರೀಕ್ಷಿತ ಘಟನೆಗಳ ಸಂಕೇತವಾಗಿದೆ. ಈಗ ಸೂರ್ಯನು ರಾಹುವಿನ ನಕ್ಷತ್ರಪುಂಜಕ್ಕೆ ಸಾಗುವುದರಿಂದ ಕೆಲವು ರಾಶಿಯವರ ಜೀವನದಲ್ಲಿ ಹಠಾತ್‌ ಬದಲಾವಣೆಗಳು ಆಗುವ ಸಾಧ್ಯತೆಯಿದೆ. ಸೂರ್ಯನು ನವೆಂಬರ್‌ 8, 2026 ರವರೆಗೆ ಸ್ವಾತಿ ನಕ್ಷತ್ರದಲ್ಲಿ ನೆಲೆಸುತ್ತಾನೆ. ಈ ಅವಧಿಯಲ್ಲಿ ನಾಲ್ಕು ರಾಶಿಗೆ ಸೇರಿದ ಜನರ ಜೀವನದಲ್ಲಿ ಒಂದಿಷ್ಟು ಮಹತ್ವದ ಬದಲಾವಣೆಗಳು ಉಂಟಾಗಲಿದೆ.

ಮಿಥುನ ರಾಶಿ

ಈ ರಾಶಿಯವರು ಕೆಲಸಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ದೀರ್ಘಕಾಲದಿಂದ ಅಪೂರ್ಣವಾಗಿ ಉಳಿದುಕೊಂಡಿದ್ದ ಕೆಲಸಗಳು ಮುಂದುವರಿಯುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಗಮನ ಸೆಳೆಯುವ ಅವಕಾಶ ಒದಗಿಬರಲಿದೆ. ಹಣಕಾಸು ಮತ್ತು ವೈಯಕ್ತಿಕ ಜೀವನದಲ್ಲಿ ಪರಿಸ್ಥಿತಿಗಳು ಲಾಭದಾಯಕವಾಗಿರುತ್ತದೆ.

ತುಲಾ ರಾಶಿ

ನೀವು ಹೆಚ್ಚಿನ ಚಟುವಟಿಕೆಯಿಂದ ಕೂಡಿರುತ್ತೀರಿ. ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಪಡೆಯಬಹುದು. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಹೊಸ ಆದಯದ ಮೂಲಗಳು ಹುಡುಕಿಕೊಂಡು ಬರುತ್ತವೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ವೃಶ್ಚಿಕ ರಾಶಿ

ಸೂರ್ಯನು ಸ್ವಾತಿ ನಕ್ಷತ್ರಕ್ಕೆ ಸಾಗುವುದರಿಂದ ವೃತ್ತಿ ಸಂಬಂಧಿತ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರಬಹುದು. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳ ಬೆಂಬಲ ಸಿಗಬಹುದು. ಹೊಸ ಜವಾಬ್ದಾರಿ ನಿಮ್ಮನ್ನು ಹುಡುಕಿ ಬರಲಿದೆ. ನಿಮ್ಮ ನಿರೀಕ್ಷೆಯಂತೆ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯಾಗಲಿದೆ. ಮಾನಸಿಕ ಒತ್ತಡ ಕಡಿಮೆಯಾಗಿ ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಕುಂಭ ರಾಶಿ

ಸೂರ್ಯನ ಈ ಸಂಚಾರವು ನಿಮ್ಮ ಆರ್ಥಿಕ ಮತ್ತು ವೃತ್ತಿ ಜೀವನದ ಮೇಲೆ ಹೊಸ ದಾರಿಗಳನ್ನು ಸೃಷ್ಟಿಸುತ್ತದೆ. ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಹೊಸ ಜವಾಬ್ದಾರಿ ನಿಮ್ಮ ಪ್ರತಿಭೆ ಪ್ರದರ್ಶಿಸಲು ಪ್ರಯೋಜನಕಾರಿಯಾಗಬಹುದು. ಆದಾಯ ಮತ್ತು ವೆಚ್ಚಗಳಲ್ಲಿ ಸಮತೋಲನ ಕಾಯ್ದುಕೊಳ್ಳಿ. ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.