ದಿನಭವಿಷ್ಯ : ಅಕ್ಟೋಬರ್ 02, 2026 ಶುಕ್ರವಾರದಂದು ಸಿದ್ಧಾರ್ಥಿ ನಾಮ ಸಂವತ್ಸರದ ಭಾದ್ರಪದ ಕೃಷ್ಣ ಪಕ್ಷದ ಷಷ್ಠಿ ತಿಥಿ ಜೊತೆಗೆ ಮೃಗಶಿರಾ ನಕ್ಷತ್ರದ ಶುಭಯೋಗವಿದೆ. ಸೂರ್ಯನು ಸದ್ಯ ಕನ್ಯಾರಾಶಿಯಲ್ಲಿ ಇದ್ದರೆ, ಚಂದ್ರನು ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಮಹಾಲಕ್ಷ್ಮೀಯ ಕೃಪೆಯಿಂದ ಕೆಲವು ರಾಶಿಗಳು ಇಂದು ಆಕಸ್ಮಿಕ ಧನಲಾಭವನ್ನು ಪಡೆಯಲಿದ್ದಾರೆ. ಇಂದಿನ ಗೃಹಗತಿಗಳ ಆಧಾರದ ಮೇಲೆ ನಿಮ್ಮ ರಾಶಿಯ ಶುಭ - ಅಶುಭ ಫಲಗಳು ಹೇಗಿವೆ ತಿಳಿಯೋಣಾ.
ಮೇಷರಾಶಿ (Aries)
ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ. ಬಾಕಿ ಉಳಿದ ಕೆಲಸಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಕಾನೂನು ವ್ಯಾಜ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಪ್ರಯಾಣದ ವೇಳೆಯಲ್ಲಿ ವಾಹನಗಳ ವೆಚ್ಚ ಹೆಚ್ಚಳವಾಗುವ ಸಾಧ್ಯತೆಯಿದೆ. ಸಾಧ್ಯವಾದಷ್ಟು ಎಚ್ಚರವಾಗಿ ಇರುವುದು ಒಳಿತು.
ವೃಷಭ ರಾಶಿ(Taurus)
ಆರ್ಥಿಕವಾಗಿ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯ. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಫಲಗಳು ದೊರೆಯಲಿದೆ. ನಿಮ್ಮೊಳಗಿನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಸಾಲದ ಸುಳಿಯಿಂದ ಹೊರಬರೋದಕ್ಕೆ ನಿಮಗೆ ಸುಲಭ ದಾರಿಗಳು ಸಿಗಲಿದೆ. ಜವಾಬ್ದಾರಿ ಹೆಚ್ಚಳವಾಗುವುದರಿಂದ ಆತಂಕವೂ ಇರಲಿದೆ.
ಮಿಥುನ ರಾಶಿ (Gemini)
ಮಹಾಲಕ್ಷ್ಮೀಯ ಕೃಪೆಯಿಂದ ಹೆಚ್ಚಿನ ಧನಲಾಭವಿದೆ. ಮನೆಯಲ್ಲಿ ಸಂತಸ ವಾತಾವರಣ ಇರಲಿದೆ. ಆರೋಗ್ಯವೂ ಉತ್ತಮವಾಗಿ ಇರಲಿದ್ದು, ದಿನವಿಡಿ ಉತ್ಸಾಹದಿಂದ ಇರುವಿರಿ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳು ದೊರೆಯಲಿದೆ. ವಿಮಾನ ಪ್ರಯಾಣದ ಯೋಗವೂ ಇದೆ.
ಕರ್ಕಾಟಕ ರಾಶಿ (Cancer)
ಕೆಲಸ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡುವುದು ಮುಖ್ಯ. ಯಾವುದೇ ಕೆಲಸ ಮಾಡುವ ಮೊದಲು ಎಚ್ಚರವಾಗಿ ಇರಿ. ಕೌಟುಂಬಿಕ ಸಮಸ್ಯೆಗಳನ್ನು ಕುಟುಂಬಸ್ಥರ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ. ಅನಗತ್ಯ ಖರ್ಚುಗಳನ್ನು ನಿಯಂತ್ರಣಲ್ಲಿ ಇಡದಿದ್ದರೆ ಆರ್ಥಿಕ ಒತ್ತಡ ಹೆಚ್ಚಳವಾಗುವ ಸಾಧ್ಯತೆಯಿದೆ. ನಿತ್ಯದ ದಿನಚರಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.
ಸಿಂಹ ರಾಶಿ (Leo)
ಅಂದುಕೊಂಡ ಕೆಲಸ ಕಾರ್ಯಗಳು ಅತ್ಯಂತ ಸುಲಭವಾಗಿ ಮುಕ್ತಾಯವಾಗಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ, ಹೊಸ ಲಾಭದಾಯಕ ವ್ಯವಹಾರಗಳು ನಿಮ್ಮನ್ನು ಹುಡುಕಿ ಬರಲಿದೆ. ಸಂಗಾತಿಯ ಜೊತೆಗೆ ಉತ್ತಮ ಸಮಯ ಕಳೆಯುವಿರಿ. ಪ್ರಭಾವಿ ವ್ಯಕ್ತಿಯ ಭೇಟಿಯಿಂದ ಈ ದಿನವು ಸ್ಮರಣೀಯವಾಗಿ ಇರಲಿದೆ.
ಕನ್ಯಾ ರಾಶಿ (Virgo)
ಖರ್ಚು ವೆಚ್ಚಗಳಲ್ಲಿ ಬಾರೀ ಹೆಚ್ಚಳವಾಗುವ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರದ ಮೇಲೆ ನಿಗಾ ಇರಲಿ. ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆಯಿದೆ. ಸ್ನೇಹಿತರಿಗೆ ಯಾವುದೇ ಕಾರಣಕ್ಕೂ ಸುಳ್ಳು ಭರವಸೆ ನೀಡಲೇ ಬೇಡಿ. ಕೌಟುಂಬಿಕವಾಗಿ ಇರುವ ಹಳೆಯ ಸಮಸ್ಯೆಗೆ ಕೊನೆಗೂ ಪರಿಹಾರ ಸಿಗಲಿದೆ.
ತುಲಾ ರಾಶಿ (Libra)
ನಿಮ್ಮ ಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಗಲಿದೆ. ಕೆಲವೊಂದು ವಿಚಾರಗಳಲ್ಲಿ ನಿಮಗೆ ಮಿಶ್ರಫಲವಿದೆ. ಯಾವುದೇ ಕಾರಣಕ್ಕೂ ಒಂದೇ ಬಾರಿಗೆ ಹಲವು ಕೆಲಸಗಳನ್ನು ಒಟ್ಟಿಗೆ ಕೈಗೆತ್ತಿಕೊಳ್ಳಬೇಡಿ. ಮಾನಸಿಕ ಒತ್ತಡವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಿ. ಕುಟುಂಬ ಸದಸ್ಯರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ.
ವೃಶ್ಚಿಕ ರಾಶಿ(Scorpio)
ನಿಮಗೆ ಅದೃಷ್ಟದ ಬೆಂಬಲ ಸಿಗುವ ದಿನ. ಕೆಲಸದ ಒತ್ತಡ ಹೆಚ್ಚಿದ್ದರೂ ಕೂಡ ದಕ್ಷತೆಯಿಂದ ನಿಭಾಯಿಸುತ್ತೀರಿ. ಆಡಳಿತ, ಕಚೇರಿ ಕ್ಷೇತ್ರದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಕಾನೂನಿನ ವಿಚಾರದಲ್ಲಿ ನೀವು ಅನುಭವಿಗಳ ಸಲಹೆಯನ್ನು ಪಡೆಯುವುದು ಬಹಳ ಮುಖ್ಯ.
ಧನುಸ್ಸು ರಾಶಿ (Sagittarius)
ನೀವು ಶಾಂತಿ ಹಾಗೂ ಸಂತೋಷದಿಂದ ದಿನವನ್ನು ಕಳೆಯುತ್ತೀರಿ. ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯ ತಿಳಿಯಾಗಲಿದೆ. ಆಕಸ್ಮಿಕ ಧನಲಾಭವಿದೆ. ಹೊಸ ವಸ್ತು, ಆಭರಣ ಖರೀದಿಯ ಯೋಗವಿದೆ. ಕೆಲಸದ ಸ್ಥಳದಲ್ಲಿ ಇಲ್ಲ ಸಲ್ಲದ ಆರೋಪ ಮಾಡುವ ಸಾಧ್ಯತೆಯಿದೆ.
ಮಕರ ರಾಶಿ (Capricorn)
ಸವಾಲುಗಳನ್ನು ಧೈರ್ಯವಾಗಿ ಎದುರಿಸುತ್ತೀರಿ. ಹೊಸ ವ್ಯಾಪಾರದಿಂದ ಆದಾಯದಲ್ಲಿ ಏರಿಕೆ ಕಂಡು ಬರಲಿದೆ. ದೈಹಿಕವಾಗಿ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಹೀಗಾಗಿ ವಿಶ್ರಾಂತಿ ಅಗತ್ಯವಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ.
ಕುಂಭ ರಾಶಿ(Aquarius)
ಅನಿರೀಕ್ಷಿತವಾಗಿ ಧನಲಾಭವಾಗುವ ಸಾಧ್ಯತೆಯಿದೆ. ಯಾವುದೇ ವಿಚಾರಗಳಲ್ಲಿಯೂ ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ಬಾರದಂತೆ ಎಚ್ಚರಿಕೆಯನ್ನು ವಹಿಸಿ. ಸಹೋದರರ ಜೊತೆಗೆ ಮಾತನಾಡುವಾ ಸಂಯಮವನ್ನು ಕಾಯ್ದುಕೊಳ್ಳಿ. ಹೊಸ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ.
ಮೀನ ರಾಶಿ (Pisces)
ಕೃಷಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭವನ್ನು ಕಾಣುತ್ತೀರಿ. ತಪ್ಪಿಯೂ ಕೂಡ ಯಾವುದೇ ಕೆಲಸವನ್ನು ಆತುರದಿಂದ ಮಾಡಬೇಡಿ. ನಿಮ್ಮ ಬಗ್ಗೆ ಕೆಟ್ಟದಾಗಿ ಯೋಚಿಸುವವರ ಬಗ್ಗೆ ಚಿಂತೆ ಬೇಡ. ಅನಗತ್ಯ ಚರ್ಚೆ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಅತೀ ಅಗತ್ಯ.