ಮನೆಯಲ್ಲಿ ಮೆಟ್ಟಿಲುಗಳ ಸಂಖ್ಯೆ ಎಷ್ಟಿರಬೇಕು? ವಾಸ್ತು ಶಾಸ್ತ್ರದಲ್ಲಿದೆ ಇದಕ್ಕೆ ಉತ್ತರ !

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೆಟ್ಟಿಲುಗಳ ಸಂಖ್ಯೆ ಎಷ್ಟಿರಬೇಕು? ಯಾವ ಸೂತ್ರದ ಆಧಾರದ ಮೇಲೆ ಅವುಗಳನ್ನು ನಿರ್ಮಿಸಲಾಗುತ್ತದೆ? ಇಲ್ಲಿದೆ ಓದಿ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
steps vastu tips
Photo: AI

ಜ್ಯೋತಿಷ್ಟ್ಯ ಶಾಸ್ತ್ರದಷ್ಟೇ ಬಲವಾದ ನಂಬಿಕೆಯಿರುವ ಮತ್ತೊಂದು ಶಾಸ್ತ್ರವೆಂದರೆ ಅದು ವಾಸ್ತ ಶಾಸ್ತ್ರ. ಇದು ಅತ್ಯಂತ ಆಳವಾಗಿ ವಿಷಯಗಳನ್ನು ಹೊಂದಿರುವ ಶಾಸ್ತ್ರ. ಇದರಲ್ಲಿ ಮನೆ ಕಟ್ಟುಲು ಇರಬೇಕಾದ ನಿಯಮಗಳಿಂದ ಹಿಡಿದು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಗಳವರೆಗೆ ಹೇಳಲಾಗಿದೆ. ಈ ಎಲ್ಲ ನಿಯಮಗಳು ಜನರಿಗೆ ನೆಮ್ಮದಿ, ಸಮೃದ್ಧಿಯನ್ನು ತರುವ ದಾರಿದೀಪಗಳಾಗಿವೆ. ಮನೆ ಕಟ್ಟುವಾಗ ಮುಖ್ಯ ದ್ವಾರ, ಅಡುಗೆ ಕೋಣೆ, ದೇವರ ಕೋಣೆ, ಹಾಲ್‌ ಹೀಗೆ ಪ್ರತಿಯೊಂದನ್ನು ವಾಸ್ತು ಪ್ರಕಾರ ನಿರ್ಮಿಸಲಾಗುತ್ತದೆ. ಮತ್ತು ಅವುಗಳ ವಿನ್ಯಾಸವನ್ನು ಸಹ ವಾಸ್ತು ಪ್ರಕಾರ ನಿರ್ಮಿಸಲಾಗುತ್ತದೆ. ಅದೇ ರೀತಿ ಮೆಟ್ಟಿಲುಗಳನ್ನು ಇಡುವಾಗಲೂ ಹೆಚ್ಚು ಗಮನಿಸಲಾಗುತ್ತದೆ. ಮೆಟ್ಟಿಲುಗಳ ಸಂಖ್ಯೆಯುನ್ನು ವಾಸ್ತು ಶಾಸ್ತ್ರದಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ.

ಮನೆಯಲ್ಲಿ ಮೆಟ್ಟಿಲನ್ನು ನಿರ್ಮಿಸುವ ಸೂತ್ರವೇನು?

ವಾಸ್ತು ಶಾಸ್ತ್ರದಲ್ಲಿ ಮೆಟ್ಟಿಲುಗಳ ಲೆಕ್ಕಾಚಾರವನ್ನು ಮೂರು ಹಂತಗಳಲ್ಲಿ ವಿವರಿಸಲಾಗಿದೆ. ಈ ಸೂತ್ರವನ್ನು ಇಂದ್ರ, ಯಮ ಮತ್ತು ರಾಜ ಎಂದು ಕರೆಯಲಾಗುತ್ತದೆ. ಮನೆಗಳಲ್ಲಿ ಮೆಟ್ಟಿಲುಗಳನ್ನು ಇದೇ ಕ್ರಮದಲ್ಲಿ ನಿರ್ಮಿಸಬೇಕು ಎಂಬುದು ವಾಸ್ತು ನಿಯಮವಾಗಿದೆ. ಇದರಲ್ಲಿ, ಒಟ್ಟು ಮೆಟ್ಟಿಲುಗಳ ಸಂಖ್ಯೆಯನ್ನು 3 ರಿಂದ ಭಾಗಿಸಿದಾಗ 2 ಉಳಿದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. 5, 8, 11 ಇತ್ಯಾದಿ, ಅಂತಹ ಕೆಲವು ಸಂಖ್ಯೆಗಳು. ಇವುಗಳನ್ನು 3 ರಿಂದ ಭಾಗಿಸಿದಾಗ 2 ಉಳಿಯುತ್ತದೆ. ಇದರ ಹೊರತಾಗಿ 4, 17, 20, 23, 26 ಮತ್ತು 29 ಸಂಖ್ಯೆಗಳನ್ನು ವಾಸ್ತು ಶಾಸ್ತ್ರದಲ್ಲಿ ಉತ್ತಮವೆಂದು ಪರಿಗಣಿಸಲಾಗಿದೆ.

ಇಂದ್ರ, ಯಮ ಮತ್ತು ರಾಜ ಎಂದರೆ ಏನು?

ವಾಸ್ತು ಶಾಸ್ತ್ರದಲ್ಲಿ, ಇಂದ್ರನು ಸಮೃದ್ಧಿ ಮತ್ತು ಸಂಪತ್ತಿನ ಸಂಕೇತ. ಯಮನು ಅವನತಿ ಅಥವಾ ಅಡಚಣೆಗೆ ಹಾಗೂ ರಾಜನು ಸ್ಥಿರತೆ ಮತ್ತು ಯಶಸ್ಸಿನ ಸಂಕೇತವಾಗಿದ್ದಾನೆ. ಮೆಟ್ಟಿಲುಗಳ ಸಂಖ್ಯೆಗೆ ಇದೇ ಮೂರು-ಹಂತದ ಕ್ರಮವನ್ನು ಅನುಸರಿಸುವುದರಿಂದ ಶುಭವಾಗಲಿದೆ ಎಂದು ಹೇಳಲಾಗಿದೆ.

ಶೂನ್ಯದಿಂದ ಕೊನೆಗೊಳ್ಳುವ ಸಂಖ್ಯೆ ಬೇಡ

10, 20 ರಂತಹ ಶೂನ್ಯದಿಂದ ಕೊನೆಗೊಳ್ಳುವ ಯಾವುದೇ ಸಂಖ್ಯೆಯ ಮೆಟ್ಟಿಲುಗಳು ಇರಬಾರದು ಎಂದು ವಾಸ್ತು ಹೇಳುತ್ತದೆ. ವಾಸ್ತುವಿನಲ್ಲಿ ಶೂನ್ಯದಿಂದ ಕೊನೆಗೊಳ್ಳುವ ಸಂಖ್ಯೆಯು ಧನಾತ್ಮಕ ಶಕ್ತಿಯ ಹರಿವನ್ನು ನಿರ್ಬಂಧಿಸುತ್ತದೆ ಹಾಗೂ ಇದು ಮನೆಯ ಸದಸ್ಯರ ಪ್ರಗತಿ ಮತ್ತು ಅದೃಷ್ಟವನ್ನ ತಡೆಹಿಡಿಯುತ್ತದೆ.

Topics

ಸಂಬಂಧಿತ ಸುದ್ದಿಗಳು