Kannada News Next

automobile

165 ಕಿಮೀ ರೇಂಜ್‌, 1 ಲಕ್ಷಕ್ಕೂ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಸ್ಕೂಟರ್‌ ವಿತರಣೆ ಪ್ರಾರಂಭ ! 6 ಬಣ್ಣಗಳ ಆಯ್ಕೆ, ದೊಡ್ಡದಾದ ಡಿಕ್ಕಿ ಇದರ ವೈಶಿಷ್ಟ್ಯ!

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್‌ಅಪ್‌ ಕಂಪನಿ E3 Electric.Ai ತನ್ನ ಮೊದಲ E3 Trion ಸ್ಕೂಟರ್‌ ವಿತರಣೆಯನ್ನು ಪ್ರಾರಂಭಿಸಿದೆ. ಈ ಸ್ಕೂಟರ್‌ನ ಬೆಲೆ, ವೈಶಿಷ್ಟ್ಯ ಏನು?

By Archana V Bhat | ಅರ್ಚನಾ ವಿ ಭಟ್‌
e3 Trion electric scooter

ಇಂದಿನ ವಾಹನ ಮಾರಕಟ್ಟೆಗೆ ಹೊಸ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಸೇರ್ಪಡೆಯಾಗುತ್ತಿವೆ. ನಮ್ಮ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್‌ಅಪ್‌ ಕಂಪನಿ E3 Electric.Ai ಅಗಸ್ಟ್‌ 2026 ನಲ್ಲಿ ತನ್ನ ಮೊಟ್ಟಮೊದಲ ಎಲೆಕ್ಟ್ರಿಕ್‌ ಸ್ಕೂಟರ್‌ E3 Trion ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಕಂಪನಿ E3 Trion ಎಲೆಕ್ಟ್ರಿಕ್‌ ಸ್ಕೂಟರ್‌ನ ವಿತರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿಕೊಂಡಿದೆ. Trion ಎಲೆಕ್ಟ್ರಿಕ್‌ ಸ್ಕೂಟರ್ ಅನ್ನು ಹೈದರಾಬಾದ್‌ನಲ್ಲಿರುವ ತನ್ನ ಪ್ಲಾಂಟ್‌ನಲ್ಲಿ ಅದು ತಯಾರಿಸುತ್ತಿದೆ. ಈ ಸ್ಕೂಟರ್‌ನ ವೈಶಿಷ್ಟ್ಯ ಮತ್ತು ಬೆಲೆ ತಿಳಿಯೋಣ.

E3 Trion ಎಲೆಕ್ಟ್ರಿಕ್‌ ಸ್ಕೂಟರ್‌ ಹೇಗಿದೆ?

ಬೆಂಗಳೂರು ಮೂಲಕ E3 Trion ಎಲೆಕ್ಟ್ರಿಕ್‌ ಸ್ಕೂಟರ್‌ ಯಲ್-ಪ್ರೊಜೆಕ್ಟರ್ LED ಹೆಡ್‌ಲೈಟ್‌ಗಳು ಮತ್ತು LED ಟೈಲ್‌ಲೈಟ್‌ಗಳನ್ನು ಹೊಂದಿದೆ. 5-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಕೂಟರ್‌ ಟ್ರಿಪ್‌ಸೆನ್ಸ್ ಸಿಸ್ಟಮ್ ಮೂಲಕ ಸಂಪರ್ಕ ವೈಶಿಷ್ಟ್ಯಗಳನ್ನು ಸವಾರರಿಗೆ ನೀಡುತ್ತದೆ. ಇದರಲ್ಲಿ ಸವಾರರು ತಮ್ಮ ಸ್ಮಾರ್ಟ್‌ಫೋನ್‌ ಮೂಲಕ ನ್ಯಾವಿಗೇಷನ್, ಚಾರ್ಜಿಂಗ್ ಸ್ಥಳಗಳೊಂದಿಗೆ ಟ್ರಿಪ್ ಪ್ಲಾನರ್, ರಿಮೋಟ್ ಬ್ಯಾಟರಿ ಮಾನಿಟರಿಂಗ್, ವಾಹನ ನಿಯಂತ್ರಣ, ಡ್ಯಾಶ್‌ಕ್ಯಾಮ್, SOS ಮತ್ತು ಜಿಯೋಫೆನ್ಸಿಂಗ್ ಕನೆಕ್ಟ್‌ ಮಾಡಿಕೊಳ್ಳಬಹುದಾಗಿದೆ.

E3 Trion ಸ್ಕೂಟರ್‌ 3 ರೂಪಾಂತರಗಳಲ್ಲಿ ಲಭ್ಯವಿದೆ. C1, C1X, ಮತ್ತು C2. C1 ರೂಪಾಂತರವು 2.3kWh ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು 108 ಕಿಮೀ ನೀಡುತ್ತದೆ. C1X ಮತ್ತು C2 ಸ್ಕೂಟರ್‌ 3kWh ಸ್ಥಿರ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಕ್ರಮವಾಗಿ 165 ಕಿಮೀ ಮತ್ತು 128 ಕಿಮೀ ರೇಂಜ್‌ ನೀಡುತ್ತದೆ.

ಬಣ್ಣಗಳ ಆಯ್ಕೆ

ಕಂಪನಿಯು ಈ ಎಲೆಕ್ಟ್ರಿಕ್‌ ಸ್ಕೂಟರ್ ಅನ್ನು ಸೋಲಾರ್ ರೆಡ್, ಮಿಸ್ಟಿ ಗ್ರೀನ್, ನೋವಾ ಬ್ಲೂ, ಟೀಲ್ ಬ್ಲೂ, ಗ್ರ್ಯಾಫೈಟ್ ಗ್ರೇ, ಲೂನಾ ವೈಟ್ ಎಂಬ 6 ಬಣ್ಣಗಳ ವೈಶಿಷ್ಟ್ಯದಲ್ಲಿ ತನ್ನ ಗ್ರಾಹಕರಿಗೆ ನೀಡಲಿದೆ.

ಬೆಲೆ

ಮೂರು ರೂಪಾಂತರಗಳಲ್ಲಿ ಬಿಡುಗಡೆಯಾದ E3 Trion ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆ ಹೀಗಿದೆ:

  • E3 Trion C1 ನ ಬೆಲೆ ₹99,999 (ಎಕ್ಸ್‌ ಶೋ ರೂಂ ಬೆಲೆ)

  • E3 Trion C1x ನ ಬೆಲೆ ₹1,09,999 (ಎಕ್ಸ್‌ ಶೋ ರೂಂ ಬೆಲೆ)

  • E3 Trion C2 ನ ಬೆಲೆ ₹1,19,999 (ಎಕ್ಸ್‌ ಶೋ ರೂಂ ಬೆಲೆ)