tata aeris car : ಕೇವಲ 5.90 ಲಕ್ಷಕ್ಕೆ ಟಾಟಾ ಏರಿಸ್ , ಫೀಚರ್ಸ್‌ ಕೇಳಿದ್ರೆ ಫಿದಾ ಆಗೋದು ಪಕ್ಕಾ

ಟಾಟಾ ಏರಿಸ' (Aeris) ಎಂಬುದು ಸಬ್-4 ಮೀಟರ್ ಸೆಡಾನ್ ವಿಭಾಗದ ಅತ್ಯಂತ ಆಕರ್ಷಕ ಹಾಗೂ ವಿಶಿಷ್ಟ ತಂತ್ರಜ್ಞಾನವನ್ನು ಒಳಗೊಂಡಿರುವ ಕಾರು.

By Arun Gundmi | ಅರುಣ್‌ ಗುಂಡ್ಮಿ · Editor-in-Chief

3 min read

WhatsAppPost
tata aeris car
tata aeris car

tata aeris car : ಬಡ ಹಾಗೂ ಮಧ್ಯಮ ವರ್ಗದವರಿಗಾಗಿ ಟಾಟಾ ಕಂಪೆನಿ ಹೊಸ ಲಕ್ಷುರಿ ಕಾರನ್ನು ಬಿಡುಗಡೆ ಮಾಡಿದೆ. ಟಾಟಾ ಕಂಪೆನಿಯ ಏರಿಸ್‌ ಕಾರು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೃಷ್ಟಿಸಿದೆ. ಹಾಗಾದ್ರೆ ಅತ್ಯಂತ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆ ಏನು ಅನ್ನೋದನ್ನು ನೋಡೋಣಾ ಬನ್ನಿ.

ಟಾಟಾ ಏರಿಸ' (Aeris) ಎಂಬುದು ಸಬ್-4 ಮೀಟರ್ ಸೆಡಾನ್ ವಿಭಾಗದ ಅತ್ಯಂತ ಆಕರ್ಷಕ ಹಾಗೂ ವಿಶಿಷ್ಟ ತಂತ್ರಜ್ಞಾನವನ್ನು ಒಳಗೊಂಡಿರುವ ಕಾರು. ಸೆಪ್ಟೆಂಬರ್‌ ತಿಂಗಳಿನಲ್ಲಿ ಟಾಟಾ ಮಾರುಕಟ್ಟೆಗೆ ಪರಿಚಯಿಸಿರುವ ಏರಿಸ್‌ ಸೇಡಾ ಆರಂಭಿಕ ಬೆಲೆ ರೂ. 5.29 ಲಕ್ಷ (ಎಕ್ಸ್-ಶೋರೂಮ್) ಆಗಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಟಿಗೋರ್' (Tigor) ಕಾರು ಅತ್ಯಂತ ಕಡಿಮೆ ಲಭ್ಯವಾಗ್ತಿದ್ದ ಸೆಡಾನ್‌ ಕಾರಾಗಿತ್ತು. ಆದರೆ ಇದೀಗ ಟಿಗೋರ್‌ ಸ್ಥಾನಕ್ಕೆ ಏರಿಸ್‌ ಪ್ರಬಲ ಪೈಪೋಟಿ ನೀಡಲಿದೆ. ಹೊಸ ಸೆಡಾನ್, ಆಕರ್ಷಕ ಮತ್ತು ಆಧುನಿಕ ವಿನ್ಯಾಸ, ಸಂಪೂರ್ಣ ಇಂಟೀರಿಯರ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಮತ್ತು ವೈವಿಧ್ಯಮಯ ಎಂಜಿನ್ ಆಯ್ಕೆಗಳೊಂದಿಗೆ ಬಂದಿದೆ.

tata aeris car
tata aeris car

ಏರಿಸ್‌ ಕಾರಿನ (tata aeris car)ಬೆಲೆ ಎಷ್ಟು ಮತ್ತು ರೂಪಾಂತರಗಳು (Variants)

ಪೆಟ್ರೋಲ್

  • ಸ್ಮಾರ್ಟ್ (Smart) ರೂ. 5.29 ಲಕ್ಷ ( MTಮ್ಯಾನುವಲ್) . ರೂ. 6.29 ಲಕ್ಷ ( AMTಆಟೋಮ್ಯಾಟಿಕ್)

  • ಪ್ಯೂರ್‌ ( Pure ) ರೂ. 6.14 ಲಕ್ಷ( MTಮ್ಯಾನುವಲ್). 6.69 ಲಕ್ಷ ( AMTಆಟೋಮ್ಯಾಟಿಕ್)

  • ಪ್ಯೂರ್‌ ಪ್ಲಸ್‌ ( Pure Plus) ರೂ. 6.74 ಲಕ್ಷ ( MTಮ್ಯಾನುವಲ್) ರೂ. 7.29 ಲಕ್ಷ ( AMTಆಟೋಮ್ಯಾಟಿಕ್)

  • ಕ್ರಿಯೇಟಿವ್ ( Creative) ರೂ. 7.49 ಲಕ್ಷ ( MTಮ್ಯಾನುವಲ್), ರೂ. 8.04 ಲಕ್ಷ ( AMTಆಟೋಮ್ಯಾಟಿಕ್)

  • ಅಕಾಂಪ್ಲಿಷ್ಡ್ (Accomplished) ರೂ. 8.19 ಲಕ್ಷ ( MTಮ್ಯಾನುವಲ್), ರೂ. 8.74 ಲಕ್ಷ ( AMTಆಟೋಮ್ಯಾಟಿಕ್)

  • tata aeris car
    tata aeris car

ಪೆಟ್ರೋಲ್+CNG

  • ಸ್ಮಾರ್ಟ್ (Smart) ರೂ. 6.29 ಲಕ್ಷ ( MTಮ್ಯಾನುವಲ್)

  • ಪ್ಯೂರ್‌ ( Pure ) ರೂ. 7.14 ಲಕ್ಷ( MTಮ್ಯಾನುವಲ್). 7.69 ಲಕ್ಷ ( AMTಆಟೋಮ್ಯಾಟಿಕ್)

  • ಪ್ಯೂರ್‌ ಪ್ಲಸ್‌ ( Pure Plus) ರೂ. 7.74 ಲಕ್ಷ ( MTಮ್ಯಾನುವಲ್) ರೂ. 8.29 ಲಕ್ಷ ( AMTಆಟೋಮ್ಯಾಟಿಕ್)

  • ಕ್ರಿಯೇಟಿವ್ ( Creative) ರೂ.8.49 ಲಕ್ಷ ( MTಮ್ಯಾನುವಲ್), ರೂ. 9.04 ಲಕ್ಷ ( AMTಆಟೋಮ್ಯಾಟಿಕ್)

  • ಅಕಾಂಪ್ಲಿಷ್ಡ್ (Accomplished) ರೂ. 9.19 ಲಕ್ಷ ( MTಮ್ಯಾನುವಲ್), ರೂ. 9.74 ಲಕ್ಷ ( AMTಆಟೋಮ್ಯಾಟಿಕ್) ( ಎಲ್ಲಾ ಬೆಲೆಗಳು ಪರಿಚಯಾತ್ಮಕವಾಗಿದ್ದು, ದೆಹಲಿ ಎಕ್ಸ್-ಶೋರೂಮ್ ದರಗಳಾಗಿವೆ.)

ಕೇವಲ 5.29 ಲಕ್ಷಕ್ಕೆ ಸಿಗುತ್ತೆ ಏರಿಸ್‌ ಕಾರು

ಟಾಟಾ ಬಿಡುಗಡೆ ಮಾಡಿರುವ ಅತ್ಯಂತ ಕಡಿಮೆ ಬೆಲೆಯ ಸೆಡಾನ್‌ ಕಾರು ಇದಾಗಿದ್ದು, ಟಿಗೋರ್‌ ಕಾರಿಗೆ ಹೋಲಿಕೆ ಮಾಡಿದ್ರೆ 40 ಸಾವಿರ ರೂಪಾಯಿ ಕಡಿಮೆಯಾಗಿದೆ. ಏರಿಸ್‌ ಕಾರು ಬುಕ್ಕಿಂಗ್‌ ಈಗಾಗಲೇ ಆರಂಭಗೊಂಡಿದ್ದು, ಟಾಟಾದ ಅಧಿಕೃತ ಡೀಲರ್‌ಶಿಪ್‌ ಮತ್ತು ಟಾಟಾದ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಬುಕ್ಕಿಂಗ್‌ ಮಾಡಬಹುದಾಗಿದೆ.

ಏರಿಸ್‌ ಕಾರು ಅಕ್ಟೋಬರ್‌ 11 ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಟಿಯಾಗೋ ಕಾರಿಗಿಂತಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಏರಿಸ್‌ ಕಾರಿನ ವಿನ್ಯಾಸ ಸಂಪೂರ್ಣವಾಗಿ ಬದಲಾಗಿದೆ. ಮುಂಭಾಗದಲ್ಲಿ ಆಯತಾಕಾರದಲ್ಲಿ ಎಲ್‌ಇಡಿ (LED) ಹೆಡ್‌ಲ್ಯಾಂಪ್‌ ನಡುವಲ್ಲಿ ತೆಳುವಾದ ಗ್ಲಾಸ್-ಬ್ಲ್ಯಾಕ್ (ಹೊಳಪಿನ ಕಪ್ಪು) ಗ್ರಿಲ್ ಡಿಸೈನ್‌ ಮಾಡಲಾಗಿದೆ. ಜೊತೆಗೆ ವಾಹನ ಸವಾರರ ಅನುಕೂಲಕ್ಕಾಗಿ ಎಲ್‌ಇಡಿ ಫಾಗ್‌ ಲ್ಯಾಂಪ್‌ಗಳನ್ನು ನೀಡಲಾಗಿದೆ.

tata aeris car
tata aeris car

ಟಾಟಾ ಏರಿಸ್‌ (Tata Aeris) ಕಾರು 'ನಾಚ್‌ಬ್ಯಾಕ್' (notchback) ರೂಫ್‌ಲೈನ್ ಹಾಗೆಯೇ ಉಳಿದಿದ್ದು, ವಾಹನಕ್ಕೆ ವಿಶಿಷ್ಟವಾದ ಆಕರ್ಷಣೆಯನ್ನು ನೀಡುತ್ತದೆ. ಇದರ ಜೊತೆಗೆ, 15-ಇಂಚಿನ ಅಲಾಯ್ ವೀಲ್‌ ಹೊಸ ವಿನ್ಯಾಸವನ್ನು ನೀಡಲಾಗಿದೆ.

ಅಲ್ಲದೇ ಶಾರ್ಕ್‌ಫಿನ್ ಆಂಟೆನಾ ಮತ್ತು ಮುಂಭಾಗದ ಬಾಗಿಲುಗಳ ಕೆಳಭಾಗದಲ್ಲಿ 'Aeris ಬ್ಯಾಡ್ಜಿಂಗ್ ಒಳಗೊಂಡಿದೆ. ಏರಿಸ್‌ ಕಾರಿನ ಹಿಂಭಾಗದಲ್ಲಿ ಎತ್ತರದ ಬೂಟ್‌ ಲಿಡ್‌, ರೂಫ್‌ ಸ್ಪಾಯ್ಲರ್‌ ಮತ್ತು ಟಾಟಾ ಕರ್ವ್‌ (Curvv) ಮಾದರಿಯನ್ನು ಹೋಲುವ ಹಾಗೆ ಕನೆಕ್ಟೆಡ್ ಎಲ್‌ಇಡಿ ಟೈಲ್‌ಲ್ಯಾಂಪ್ ಸೆಟಪ್ ನೀಡಲಾಗಿದೆ. ಇನ್ನು ಬಂಪರ್‌ ಕೆಳಗಿನ ಭಾಗದಲ್ಲಿ ನಂಬರ್‌ ಪ್ಲೇಟ್‌ ಮತ್ತು ರಿವರ್ಸ್‌ ಲ್ಯಾಂಪ್‌ ಅಳವಡಿಸಲಾಗಿದೆ.

ಟಾಟಾ ಏರಿಸ್‌ (tata aeris car) 6 ಬಣ್ಣಗಳಲ್ಲಿ ಲಭ್ಯ

ಮಾರುತಿ ಡಿಸೈರ್‌ ಸೇರಿದಂತೆ ಹಲವು ಕಾರುಗಳಿಗೆ ತೀವ್ರ ಪೈಪೋಟಿಯನ್ನು ಒಡ್ಡುತ್ತಿರುವ ಟಾಟಾ ಏರಿಸ್‌ ಕಾರು ಒಟ್ಟು 6 ಬಣ್ಣಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

  • ನೇರಳೆ (Dandeli Drizzle)

  • ಡೇಟೋನಾ ಗ್ರೇ (Daytona Grey)

  • ಡೇಟೋನಾ ಗ್ರೇ (Nitro Crimson)

  • ಚಿನ್ನದ ಬಣ್ಣ (Dune Glow)

  • ಪ್ಯೂರ್ ಗ್ರೇ (Pure Grey)

  • ಬಿಳಿ (Pristine White)

ಈ ಎಲ್ಲಾ ಬಣ್ಣಗಳು ಐಚ್ಛಿಕ ಡ್ಯುಯಲ್-ಟೋನ್ (ದ್ವಿ-ಬಣ್ಣದ) ಆಯ್ಕೆಯಲ್ಲೂ ಲಭ್ಯವಿವೆ, ಇದರಲ್ಲಿ ವಾಹನದ ಮೇಲ್ಭಾಗವು (ರೂಫ್) ಕಪ್ಪು ಬಣ್ಣದಲ್ಲಿರುತ್ತದೆ. ಏರಿಸ್‌ನಲ್ಲಿ Nitro Crimson' (ನೈಟ್ರೋ ಕ್ರಿಮ್ಸನ್) ಬಣ್ಣ ಗ್ರಾಹಕರನ್ನು ತನ್ನತ್ತ ಹೆಚ್ಚು ಸೆಳೆಯುತ್ತಿದೆ. ಸಹಜವಾಗಿ ಈ ಬಣ್ಣ ಕಾರಿಗೆ ಸ್ಪೋರ್ಟಿ ಲುಕ್‌ ನೀಡುತ್ತಿದೆ.

ಟಾಟಾ ಏರಿಸ್‌ ಕಾರು ಇಂಟಿರೀಯರ್‌ ಹೆಚ್ಚು ಖುಷಿ ಕೊಡುತ್ತದೆ. ಟಾಟಾ ಟಿಯಾಗೋ ಕಾರಿನ ಇಂಟಿರಿಯರ್‌ ರೀತಿಯಲ್ಲಿಯೇ ಏರಿಸ್‌ ಕಾರನ್ನು ಡಿಸೈನ್‌ ಮಾಡಲಾಗಿದೆ. ಒಳಭಾಗದಲ್ಲಿ ವಿಶಾಲವಾದ ಬೂಟ್‌ ಸ್ಪೇಸ್‌ ನೀಡಲಾಗಿದೆ. ಅಲ್ಲದೇ ಕ್ರೀಮ್‌ ಬಣ್ಣದ ಕ್ಯಾಬಿನ್‌ ಥೀಮ್‌ ಬಳಸಲಾಗಿದೆ. ಡ್ಯಾಶ್‌ಬೋರ್ಡ್‌, ಫ್ಯಾಬ್ರಿಕ್‌ ಇನ್ಸರ್ಟ್‌ ಮತ್ತು ಮ್ಯಾಟ್‌ ಬ್ಲ್ಯಾಕ್‌ ಫಿನಿಶ್‌ ಜೊತೆಗೆ ಎರಡು ಸ್ಪೋಕ್ ಸ್ಟೀರಿಂಗ್ ವೀಲ್‌ ನೀಡಲಾಗುತ್ತಿದೆ.

tata aeris car
tata aeris car

ಆಟೋಮೆಟಿಕ್‌ -AMT ಆವೃತ್ತಿಗಳಲ್ಲಿ, ಗೇರ್ ಶಿಫ್ಟಿಂಗ್ ನಲ್ಲಿ ಹೆಚ್ಚು ನಿಯಂತ್ರಣ ಸಾಧಿಸುವ ಸಲುವಾಗಿ ಪ್ಯಾಡಲ್‌ಶಿಫ್ಟರ್‌ಗಳನ್ನು ಸಹ ನೀಡಲಾಗುತ್ತದೆ. ಸೆಂಟರ್ ಕನ್ಸೋಲ್ ಟಿಯಾಗೊದಂತೆಯೇ ಇರುತ್ತದೆ, ಹವಾಮಾನ ನಿಯಂತ್ರಣಕ್ಕಾಗಿ ರೋಟರಿ ನಿಯಂತ್ರಣಗಳು, ವೈರ್‌ಲೆಸ್ ಚಾರ್ಜರ್ ಮತ್ತು ಫೋನ್ ಡಾಕ್, ರೋಟರಿ ಗೇರ್ ಶಿಫ್ಟ್ ಡಯಲ್ ಮತ್ತು ಸೆಂಟ್ರಲ್ ಆರ್ಮ್‌ರೆಸ್ಟ್ ಸೌಲಭ್ಯ ಒದಗಿಸಲಾಗಿದೆ.

ಹಿಂಭಾಗದ ಪ್ರಯಾಣಕರ ಅನುಕೂಲಕ್ಕೆ ಈ ಟಾಟಾ ಏರಿಸ್‌ ಕಾರಿನಲ್ಲಿ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಹಿಂಭಾಗದಲ್ಲಿ AC ವೆಂಟ್‌ಗಳು ಮತ್ತು ಕಪ್‌ಹೋಲ್ಡರ್‌ಗಳೊಂದಿಗೆ ಸೆಂಟರ್ ಆರ್ಮ್‌ರೆಸ್ಟ್‌ನೊಂದಿಗೆ ಸೌಕರ್ಯ ಹೊಂದಿದೆ. ಟಾಟಾ ಏರಿಸ್‌ ಬರೋಬ್ಬರಿ 419 ಲೀಟರ್‌ಗಳ ಬೂಟ್ ಸ್ಪೇಸ್ ಒಳಗೊಂಡಿದೆ. ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿರುವ ಈ ಕಾರು ಅತ್ಯಂತ ಸುಸಜ್ಜಿತ ಸೆಡಾನ್‌ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಡ್ತಿದೆ.

ಇನ್ನು ಡ್ರೈವಿಂಗ್‌ಗೆ ಹೆಚ್ಚು ಸಹಕಾರಿಯಾಗುವ ರೀತಿಯಲ್ಲಿ ಇನ್ಫೋಟೈನ್‌ಮೆಂಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನಿರ್ವಹಿಸುತ್ತದೆ. ಇದನ್ನು 6-ಸ್ಪೀಕರ್ ಸೌಂಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ.

tata aeris car5
tata aeris car5

ಇಷ್ಟೇ ಅಲ್ಲದೇ ಆಟೋ ಮೆಟಿಕ್‌ ಏಸಿ ಕಂಟ್ರೋಲ್‌, ಕ್ರೂಸ್‌ ಕಂಟ್ರೋಲ್.‌ ವೈರ್‌ಲೆಸ್ ಫೋನ್ ಚಾರ್ಜರ್, ಮುಂಭಾಗದ ಸೀಟುಗಳ ಅಡ್ಜಸ್ಟ್‌ಮೆಂಟ್‌ ಸೌಲಭ್ಯ, ಸೀಟುಗಳನ್ನು ಸ್ವಯಂ-ಮಡಿಸುವ ORVM ಗಳು, ಚಾಲಕನ ಸೀಟುಗಳಿಗೆ ಎತ್ತರ ಹೊಂದಾಣಿಕೆ ಸೌಲಭ್ಯ, ಸ್ವಯಂ ಮಬ್ಬಾಗಿಸುವಿಕೆ IRVM, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಡ್ರೈವ್ ಮೋಡ್‌ಗಳೊಂದಿಗೆ ಕೀಲೆಸ್ ಎಂಟ್ರಿಯನ್ನು ಸಹ ಹೊಂದಿದೆ.

ಅತ್ಯಂತ ಸುರಕ್ಷಿತ ಟಾಟಾ ಏರಿಸ್‌ ಕಾರು

ಟಾಟಾ ಕಾರುಗಳು ಸುರಕ್ಷತೆಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿವೆ. ಅದ್ರಲ್ಲೂ ಸೆಡಾನ್‌ ಮಾದರಿಯ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಟಾಟಾ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಟಾಟಾ ಏರಿಸ್‌ ಕಾರಿನಲ್ಲಿ ಒಟ್ಟು 6 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಎಲ್ಲಾ ಪ್ರಯಾಣಿಕರು ಸೀಟ್‌ ಬೆಲ್ಟ್‌ ಧರಿಸುವಂತೆ ವಾರ್ನಿಂಗ್‌ ಕೂಡ ನೀಡುತ್ತಿದೆ.

ಇಷ್ಟೇ ಅಲ್ಲದೇ ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ESC), ಮಳೆ-ಸಂವೇದನಾ ವೈಪರ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ (HHA), ಟೈರ್ ಒತ್ತಡ ಮೇಲ್ವಿಚಾರಣಾ ವ್ಯವಸ್ಥೆ (TPMS), ಡ್ಯಾಶ್‌ಕ್ಯಾಮ್, ರೋಲ್‌ಓವರ್ ತಗ್ಗಿಸುವಿಕೆ ಮತ್ತು ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಸೌಲಭ್ಯವನ್ನೂ ಪಡೆಯಲಿದ್ದೀರಿ.

Topics

ಸಂಬಂಧಿತ ಸುದ್ದಿಗಳು