ಭಾರತದಲ್ಲಿ ಯಶಸ್ವಿ ಮತ್ತು ವಿಶ್ವಾಸಾರ್ಹ ವಾಹನಗಳ ವಿಷಯ ಬಂದಾಗ ಮೊದಲಿಗೆ ನೆನಪಿಗೆ ಬರುವ ವಾಹನವೆಂದರೆ ಮಹೀಂದ್ರಾ ಸ್ಕಾರ್ಪಿಯೋ. ಬಿಡುಗಡೆಯಾದ ದಿನದಿಂದಿಲೇ ಮಹೀಂದ್ರಾ ಸ್ಕಾರ್ಪಿಯೋ ಜನಪ್ರಿಯ ವಾಹನಗಳ ಸಾಲಿಗೆ ಸೇರಿಕೊಂಡಿದೆ. ಮಹೀಂದ್ರಾ ಶೀಘ್ರದಲ್ಲೇ ಸ್ಕಾರ್ಪಿಯೋ ಎನ್‌ನ ಪಿಕಪ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿರುವ ಟೀಸರ್ ಇದನ್ನು ಬಹಿರಂಗ ಪಡಿಸಿದೆ. ದೇಸಿ ಕಂಪನಿಯಾದ ಮಹೀಂದ್ರಾ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಸ್ಕಾರ್ಪಿಯೋ ಎನ್ ನ ಪಿಕಪ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.
ಟೀಸರ್‌ನಲ್ಲಿ ಕಂಡಿದ್ದೇನು?
ಮಹೀಂದ್ರ ಸ್ಕಾರ್ಪಿಯೋ ಎನ್ ಪಿಕ್‌ಪ್ ಟ್ರಕ್‌ನ ಟೀಸರ್ ಅನ್ನು ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. ಇದರ ಮೂಲಕ ಹಲವಾರು ವಿವರಗಳನ್ನು ಅದು ಬಹಿರಂಗಪಡಿಸಿದೆ. ಟೀಸರ್‌ನಲ್ಲಿ ತೋರಿಸಿದಂತೆ ಇದರ ಮುಂಭಾಗವು ಮಹೀಂದ್ರಾ ಸ್ಕಾರ್ಪಿಯೊ N ಫೇಸ್‌ಲಿಫ್ಟ್ ಅನ್ನು ಹೋಲುತ್ತದೆ. ಮಹೀಂದ್ರಾ ದ ಹೊಸ ಲೋಗೋ, LED DRLಗಳು, ಡಬಲ್ ಕ್ಯಾಬ್ ಲೇಔಟ್, ರೂಫ್ ರೇಲ್‌ಗಳು, ಅಲಾಯ್ ಚಕ್ರ, ಹಿಂಭಾಗದಲ್ಲಿ C-ಆಕಾರದ ಟೈಲ್‌ಲೈಟ್‌ಗಳು, ಹೊಸ ಡ್ಯಾಶ್‌ಬೋರ್ಡ್, ಇನ್ಫೋಟೈನ್‌ಮೆಂಟ್ ಸಿಸ್ಟಮ್, ನವೀಕರಿಸಿದ ಒಳಾಂಗಣ ಮತ್ತು ಟೊಯೋಟಾ ಹಿಲಕ್ಸ್‌ನಂತೆಯೇ ಕಾರ್ಗೋ ಬೆಡ್ ಅನ್ನು ಒಳಗೊಂಡಿದೆ.
ವೈಶಿಷ್ಟ್ಯಗಳಲ್ಲಿ ನಿರೀಕ್ಷೆಯೇನು?
ಟೀಸರ್ ಅದರ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಸ್ವಲ್ಪ ಮಟ್ಟಿಗೆ ಬಹಿರಂಗ ಪಡಿಸಿದರೆ, ಇನ್ನೂ ಕೆಲವ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ. ಇದರ ಸಂಪೂರ್ಣ ಒಳಾಂಗಣ ವಿನ್ಯಾಸವು ಸ್ಕಾರ್ಪಿಯೋ N ಫೇಸ್‌ಲಿಫ್ಟ್‌ನಂತೆಯೇ ಇರಬಹುದೆಂದು ನಿರೀಕ್ಷಿಸಲಾಗಿದೆ. 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 540-ಡಿಗ್ರಿ ವ್ಯೂ ಕ್ಯಾಮೆರಾ, ಭೌತಿಕ AC ನಿಯಂತ್ರಣಗಳು ಮತ್ತು USB ಪೋರ್ಟ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಪಿಕಪ್ ಟ್ರಕ್‌ನಲ್ಲಿ ಮಹೀಂದ್ರಾ ಎಸ್‌ಯುವಿಗಳಂತೆಯೇ 2.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೋಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದನ್ನು ಆರು-ವೇಗದ ಮ್ಯಾನುವಲ್ ಮತ್ತು ಸ್ವಯಂಚಾಲಿತ ಪ್ರಸರಣಗಳ ಆಯ್ಕೆಯೊಂದಿಗೆ ಜೋಡಿಸಿರಬಹುದು ಎಂದು ಅಂದಾಜಿಸಲಾಗಿದೆ. ಮಹೀಂದ್ರಾ SUV ಯಂತೆ, ಪಿಕಪ್ ಟ್ರಕ್ ಅನ್ನು ಆಫ್-ರೋಡಿಂಗ್ ಸಾಮರ್ಥ್ಯಗಳೊಂದಿಗೆ ಸಹ ನೀಡಬಹುದು.
ಬಿಡುಗಡೆ ಯಾವಾಗ?
ಮಹೀಂದ್ರಾ ಅಧಿಕೃತವಾಗಿ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಇದು ಆಗಸ್ಟ್ 14 ರಂದು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಬೆಲೆ ಎಷ್ಟಿರಬಹುದು?
ಸೋರಿಕೆಯಾದ ಮಾಹಿತಿಯ ಪ್ರಕಾರ ಮಹೀಂದ್ರಾ ಸ್ಕಾರ್ಪಿಯೋ ಎನ್ ಪಿಕಪ್‌ನ ಬೆಲೆ 18 ಲಕ್ಷದಿಂದ 23 ಲಕ್ಷ ರೂ. ಗಳು (ಎಕ್ಸ್ ಶೋ ರೂಂ)ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅದರ ನಿಖರ ಬೆಲೆ ಬಿಡುಗಡೆಯಾದ ನಂತರವೇ ತಿಳಿಯಬಹುದಾಗಿದೆ.