ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ರೆನಾಲ್ಟ್ ಕಂಪೆನಿಯ ಹೊಸ ಕಾರು ಸಂಚಲನವನ್ನೇ ಸೃಷ್ಟಿಸಿದೆ. ನವರಾತ್ರಿಯ ಹೊತ್ತಲ್ಲೇ ರೆನಾಲ್ಟ್ ಡಸ್ಟರ್ ಹೈಬ್ರಿಡ್ (Renault Duster Hybrid) ಎಸ್ಯುವಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಈ ಕಾರಿನ ಮೈಲೇಜ್ ಕೇಳಿದ ಗ್ರಾಹಕರು ಸುಸ್ತಾಗಿದ್ದಾರೆ.
ರೆನಾಲ್ಟ್ ಡಸ್ಟರ್ ಹೈಬ್ರಿಡ್ ಕಾರು ಒಟ್ಟು ಮೂರು ಆಕರ್ಷಕ ವೇರಿಯಂಟ್ಗಳಲ್ಲಿ ಲಭ್ಯವಿದೆ. 17 ಲಕ್ಷ ರೂಪಾಯಿ ಎಕ್ಸ್ ಶೋರೂಂ ಬೆಲೆಯಿಂದ ಈ ಕಾರು ಆರಂಭಗೊಳ್ಳುತ್ತಿದೆ. ಮೈಲೇಜ್ ಇಷ್ಟ ಪಡುವವರಿಗೆ ಈ ಕಾರು ಹೆಚ್ಚು ಬೆಸ್ಟ್ ಅನಿಸುತ್ತಿದೆ. ಹಾಗಾದ್ರೆ ಈ ಕಾರಿನಲ್ಲಿ ಏನೆಲ್ಲಾ ಫಿಚರ್ಸ್ ಇದೆ ಅನ್ನೋದನ್ನು ನೋಡೋಣಾ ಬನ್ನಿ.
ಪವರ್ಫುಲ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ವಿಶೇಷತೆ :(Strong Hybrid Specs)
ಎಂಜಿನ್ ಸಾಮರ್ಥ್ಯ: 1.8-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್.
158 bhp (160PS) ಪವರ್ ಮತ್ತು 208Nm ಟಾರ್ಕ್ ಉತ್ಪಾದನಾ ಸಾಮರ್ಥ್ಯ ಇದೆ.
ಬ್ಯಾಟರಿ ಪ್ಯಾಕ್: 1.4kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
ಮೈಲೇಜ್ & ಡ್ರೈವಿಂಗ್: ಈ ಕಾರಿನಲ್ಲಿ ಮಲ್ಟಿ ಮೋಡ್ ಅಟೋಮ್ಯಾಟಿಕ್ ಟ್ರಾನ್ಸ್ಮಿಷನ್ (Multi-mode Automatic Transmission) ಮೋಡ್ ಒಳಗೊಂಡಿದ್ದು, ಬರೋಬ್ಬರಿ 29kmpl ಮೈಲೇಜ್ ನೀಡುವುದಾಗಿ ಕಂಪೆನಿ ಹೇಳಿದೆ. ಇಷ್ಟೇ ಅಲ್ಲದೇ ನಗರ ಪ್ರದೇಶಗಳಲ್ಲಿ ಈ ಕಾರು ಶೇಕಡಾ 80 ರಷ್ಟು ಸಮಯ ಎಲೆಕ್ಟ್ರಿಕ್ ಮೋಡ್ (EV Mode)ನಲ್ಲಿಯೇ ಚಲಾಯಿಸಬಹುದಾಗಿದೆ.
ರೆನಾಲ್ಟ್ ಡಸ್ಟರ್ ಹೈಬ್ರಿಡ್ ವೇರಿಯಂಟ್ ಹಾಗೂ ಫೀಚರ್ಸ್
ರೆನಾಲ್ಟ್ ಡಸ್ಟರ್ ಹೈಬ್ರಿಡ್ ಎವಲ್ಯೂಷನ್ (Renault Duster Hybrid Evolution)
ಇದು ರೆನಾಲ್ಟ್ ಡಸ್ಟರ್ ಹೈಬ್ರಿಡ್ ಕಾರಿನ ಮೊದಲ ಹೈಬ್ರಿಡ್ ಆವೃತ್ತಿ. ಹೈಬ್ರಿಡ್ ಅಲ್ಲದ ಮಾಡೆಲ್ಗಳಿಗೆ ಹೋಲಿಕೆ ಮಾಡಿದ್ರೆ 1.5 ಲಕ್ಷಕ್ಕಿಂತಲೂ ಹೆಚ್ಚಿನ ಬೆಲೆಯನ್ನು ಹೊಂದಿದೆ.
ಫೀಚರ್ಸ್ಗಳೇನು ? ಈ ಕಾರು 10.1-ಇಂಚಿನ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಒಳಗೊಂಡಿದೆ. ಲೈಟ್ ಬಾರ್ ಜೊತೆಗೆ ಎಲ್ಇಡಿ (LED) ಟೈಲ್ ಲ್ಯಾಂಪ್, ನಾಲ್ಕು ಪವರ್ ವಿಂಡೋ ಆಟೋ ಕಂಟ್ರೋಲ್ ಜೊತೆಗೆ ಕ್ರೂಸ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ. ಈ ಕಾರಿನ ಕ್ಯಾಬಿನ್ ಕಪ್ಪು ಬಣ್ಣದ್ದಾಗಿದ್ದು, 18-ಇಂಚಿನ ಫ್ಲೆಕ್ಸ್ ವ್ಹೀಲ್ (Flex Wheels) ಕಾರಿನ ಸಖತ್ ಲುಕ್ ಕೊಟ್ಟಿದೆ.
ರೆನಾಲ್ಟ್ ಡಸ್ಟರ್ ಹೈಬ್ರಿಡ್ ಟೆಕ್ನೋ (Renault Duster Hybrid Techno) -
ಮಧ್ಯಮ ಆವೃತ್ತಿಯ ಈ ಕಾರುಗಳಿಗೆ ಹೋಲಿಸಿದ್ರೆ, ಈ ಕಾರು ಖರೀದಿ ಮಾಡುವುದಕ್ಕೆ 2 ಲಕ್ಷ ರೂಪಾಯಿ ಹೆಚ್ಚಿನ ಬೆಲೆಯನ್ನು ನೀಡಬೇಕಾಗಿದೆ. ಈ ಮಾಡೆಲ್ಕಾರು ಹೈಬ್ರಿಡ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದಪಡಿಸಲಾಗಿದೆ.
ಏನಿದರ ಫೀಚರ್ಸ್ ? ಈ ಆವೃತ್ತಿಯ ಕಾರಿನಲ್ಲಿ ಪನೋರಮಿಕ್ ಸನ್ರೂಫ್ (Panoramic Sunroof) ಒಳಗೊಂಡಿದ್ದು, ಪ್ರೀಮಿಯಂ ಎಲ್ಇಡಿ (LED) ಹೆಡ್ಲ್ಯಾಂಪ್ ಜೊತೆಗೆ ಪುಶ್-ಬಟನ್ ಸ್ಟಾರ್ಟ್ ಬಟನ್ ಮಾತ್ರವಲ್ಲದೇ ಕಾರ್ಡ್ ಲಾಕ್/ಅನ್ಲಾಕ್ ಫೀಚರ್ ಒಳಗೊಂಡಿದೆ. ಕಾರಿನ ಒಳಭಾಗದಲ್ಲಿ ಆಕರ್ಷಕ ಬೀಜ್ ಸೆಮಿ - ಲೆಥೆರೆಟ್ ಅಪ್ಹೋಲ್ಸ್ಟರಿ (Beige Semi-leatherette Upholstery) ನೀಡಲಾಗಿದೆ.
ರೆನಾಲ್ಟ್ ಡಸ್ಟರ್ ಹೈಬ್ರಿಡ್ ಎಮೋಷನ್ (Renault Duster Hybrid Emotion)
ರೆನಾಲ್ಟ್ ಡಸ್ಟರ್ ಹೈಬ್ರಿಡ್ ನಲ್ಲಿಯೇ ಇದು ಟಾಪ್ ಎಂಡ್ ಮಾದರಿಯ ಕಾರು. ಸಂಪೂರ್ಣವಾಗಿ ಹೈಬ್ರಿಡ್ ಕಾರು ಇದಾಗಿದ್ದು, ಅತ್ಯಂತ ಐಷಾರಾಮಿ ಸೌಲಭ್ಯವನ್ನು ನೀಡಲಾಗಿದೆ. ಅದ್ರಲ್ಲೂ ಟೆಕ್ನೋ' ವೇರಿಯಂಟ್ಗಿಂತ ಕೇವಲ ರೂ. 49,000 ಮಾತ್ರ ಹೆಚ್ಚುವರಿ ಬೆಲೆಯನ್ನು ಒಳಗೊಂಡಿದೆ.
ಪ್ರಮುಖ ಫೀಚರ್ : ಇತರ ಮಾಡೆಲ್ ಗಳಲ್ಲಿ ಇರುವ ಎಲ್ಲಾ ಸೌಲಭ್ಯದ ಜೊತೆಗೆ ಹೆಚ್ಚುವರಿಯಾಗಿ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದು, ಪವರ್ಡ್ ಟೈಲ್ಗೇಟ್ ಜೊತೆಗೆ 6-ವೇ ಹೊಂದಾಣಿಕೆಯೊಂದಿಗೆ ವೆಂಟಿಲೇಟೆಡ್ (Ventilated) ಮತ್ತು ಪವರ್ಡ್ ಮುಂಭಾಗದ ಸೀಟುಗಳನ್ನು ಮಾಡಲು ಸಹಕಾರಿಯಾಗಿದೆ. ಈ ಕಾರಿನ ಕ್ಯಾಬಿನ್ ಸಂಪೂರ್ಣವಾಗಿ ಕಂದು ಬಣ್ಣದಲ್ಲಿ ಇದ್ದು, ಸಂಪೂರ್ಣ ಲೆಥೆರೆಟ್ ಅಪ್ಹೋಲ್ಸ್ಟರಿ ಮತ್ತು ಸ್ಟೈಲಿಶ್ 18-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಒಳಗೊಂಡಿದೆ.
ನೀವೇನಾದ್ರೂ ಹೆಚ್ಚಿನ ಮೈಲೇಜ್ ಕಡೆಗೆ ಗಮನ ಹರಿಸುತ್ತಿದ್ರೆ, ನಿಮಗೆ ರೆನಾಲ್ಟ್ ಡಸ್ಟರ್ ಹೈಬ್ರಿಡ್ ಬೆಸ್ಟ್ ಚಾಯ್ಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ಕಾರು ನಿಮ್ಮ ಇಂಧನ ವೆಚ್ಚವನ್ನು ಸಂಪೂರ್ಣವಾಗಿ ಉಳಿಸಲಿದೆ. ಅಲ್ಲದೇ ಅತ್ಯಂತ ಕಡಿಮೆ ಬೆಲೆಗೆ ಐಷಾರಾಮಿ ಸೌಲಭ್ಯವನ್ನು ಒದಗಿಸಲಿದೆ.