Mahindra XUV 3XO CNG : ಮಹೀಂದ್ರಾ ಎಕ್ಸ್ಯುವಿ 3XO ಸಿಎನ್ಜಿ ಕೇವಲ 9.99 ಲಕ್ಷಕ್ಕೆ ಭಾರತದಲ್ಲಿ ಬಿಡುಗಡೆ
ಮಹೀಂದ್ರಾ XUV 3XO ZNG ಮಾದರಿಯ ಕಾರು ಟಾಟಾ ನೆಕ್ಸಾನ್ CNG ಮತ್ತು ಮಾರುತಿ ಸುಜುಕಿ ಬ್ರೆಝಾ CNG ವಾಹನಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಮಹೀಂದ್ರಾ ಕಂಪೆನಿ ಈಗಾಗಲೇ ದುಬಾರಿ ಹಾಗೂ ಎಸ್ಯುವಿ ಕಾರುಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಮಹೀಂದ್ರಾ ಕಂಪನೆಇ ತನ್ನ ಎಕ್ಸ್ಯುವಿ 3ಎಕ್ಸ್0 ಶ್ರೇಣಿಯಲ್ಲಿ ಸಿಎನ್ಜಿ ಆವೃತ್ತಿಯನ್ನು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಅತ್ಯಂತ ಕಡಿಮೆ ಅಂದ್ರೆ ರೂ. 9.99 ಲಕ್ಷದಿಂದ (ಎಕ್ಸ್-ಶೋರೂಮ್) ಆರಂಭವಾಗುತ್ತಿದೆ.
ಮಹೀಂದ್ರಾ XUV 3XO ZNG ಮಾದರಿಯ ಕಾರು ಟಾಟಾ ನೆಕ್ಸಾನ್ CNG ಮತ್ತು ಮಾರುತಿ ಸುಜುಕಿ ಬ್ರೆಝಾ CNG ವಾಹನಗಳಿಗೆ ಪ್ರಬಲ ಪೈಪೋಟಿ ನೀಡಲಿದೆ. ಮಹೀಂದ್ರಾ ಬಿಡುಗಡೆ ಮಾಡಿರುವ ಕಾರಿನಲ್ಲಿ 2 ಸಿಎನ್ಜಿ ಟ್ಯಾಂಕ್ ಅಳವಡಿಸಲಾಗಿದ್ದು, ವಾಃನದ ಢಿಕ್ಕಿ ಯಲ್ಲಿ ಅಳವಡಿಸಲಾಗಿದೆ.
ಮಹೀಂದ್ರಾ XUV 3XO CNG ವಿಶೇಷತೆ ಏನು ?
ಮಹೀಂದ್ರಾ ಬಿಡುಗಡೆ ಮಾಡಿರುವ ಎಕ್ಸ್ಯುವಿ 3ಎಕ್ಸ್0 ಮಾದರಿಯ ಕಾರಿನಲ್ಲಿ 3 ಸ್ಟೀರಿಂಗ್ ಮೋಡ್ (ನಾರ್ಮಲ್, ಕಂಫರ್ಟ್ ಮತ್ತು ಸ್ಪೋರ್ಟ್ಸ್)ಗಳನ್ನು ನೀಡಲಾಗಿದೆ. ಕಾರಿನ ಎಂಜಿನ್ನಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಎಂಜಿನ್ ಸ್ಟಾರ್ಟ್-ಸ್ಟಾಪ್ ಬಟನ್, 10.25-ಇಂಚಿನ ಟಚ್ಸ್ಕ್ರೀನ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅಳವಡಿಸಲಾಗಿದೆ.
ಇನ್ನು ಕಾರಿನಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಎಲ್ಇಡಿ, 360-ಡಿಗ್ರಿ ಕ್ಯಾಮೆರಾ, ಹಿಂಭಾಗದ ವೈಪರ್, ಎಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟ್ ಬೆಲ್ಟ್, ಪನೋರಮಿಕ್ ಸನ್ರೂಫ್, ಲೆಥರೆಟ್ ಸೀಟುಗಳು, ಎಕ್ಸ್ ಡಾಲ್ಬಿ ಅಟ್ಮಾಸ್ (Dolby Atmos)ಗಳನ್ನು ಒಳಗೊಂಡಿದೆ.
ಇಷ್ಟೇ ಅಲ್ಲದೇ ಕನೆಕ್ಟೆಡ್ ಎಲ್ಇಡಿ ಟೈಲ್ಲೈಟ್ಗಳು ಹಾಗೂ ಮುಂಭಾಗ ಮತ್ತು ಹಿಂಭಾಗದ ಆರ್ಮ್ರೆಸ್ಟ್ಗಳು. ಟೈಲ್ಗೇಟ್ನಲ್ಲಿರುವ 'ZNG' ಬ್ಯಾಡ್ಜಿಂಗ್ ಸೌಲಭ್ಯ ಹೊರತು ಪಡಿಸಿದ್ರೆ, ಕಾರಿನ ವಿನ್ಯಾಸವು ಸಂಪೂರ್ಣವಾಗಿ ಪೆಟ್ರೋಲ್ ಆವೃತ್ತಿಯಂತೆಯೇ ಕಾಣಿಸುತ್ತಿದೆ.
ಮಹೀಂದ್ರಾ ಹೊಸ XUV 3XO CNG ಸುರಕ್ಷತೆಗಾಗಿ ಆರು ಏರ್ಬ್ಯಾಗ್ಗಳು, ನಾಲ್ಕು ಡಿಸ್ಕ್ ಬ್ರೇಕ್ಗಳು, ವಾಹನದಲ್ಲಿರುವ ಎಲ್ಲರಿಗೂ ತ್ರೀ-ಪಾಯಿಂಟ್ ಸೀಟ್ ಬೆಲ್ಟ್ಗಳು, EBD ಸಹಿತ ABS, ರಿವರ್ಸ್ ಪಾರ್ಕಿಂಗ್ ಸೆನ್ಸರ್ಗಳು, ಸೀಟ್-ಬೆಲ್ಟ್ ರಿಮೈಂಡರ್ ಸಿಸ್ಟಮ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಮ್ ಅಳವಡಿಸಲಾಗಿದೆ.
2026 ಮಹೀಂದ್ರಾ XUV 3XO CNG ವಾಹನ 1.2-ಲೀಟರ್ ಇಂಜಿನ್ ಹೊಂದಿದ್ದು, TCMPFi ಟರ್ಬೊ-ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಅಲ್ಲದೇ 110bhp ಶಕ್ತಿ ಮತ್ತು 200Nm ಟಾರ್ಕ್ ಉತ್ಪಾದಿಸುತ್ತದೆ. ಸದ್ಯ ಈ ಮಾದರಿಯ ಕಾರು ಪ್ರತೀ ಲೀಟರ್ ಸಿಎನ್ಜಿಗೆ 24.70 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಕಾರಿನಲ್ಲಿರುವ ಮತ್ತೊಂದು ವಿಶೇಷತೆಯೇ ಕಾರಿನ ವೇಗ. ಈ ಕಾರು ಕೇವಲ 0 ರಿಂದ 100 ಕಿ.ಮೀ/ಗಂಟೆ ವೇಗವನ್ನು ಕೇವಲ 11.8 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಒಟ್ಟು ನಾಲ್ಕು ಮಾಡೆಲ್ಗಳಲ್ಲಿ ಕಂಪೆನಿ ಕಾರನ್ನು ಬಿಡುಗಡೆ ಮಾಡಿದೆ. ಹೀಗಾಗಿ MX Edge, RevX Edge (O), AX5 ಮತ್ತು RevX A ಮಾದರಿಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ.
ಮಹೀಂದ್ರಾ XUV 3XO CNG ಕಾರಿನ ಬೆಲೆ ಎಷ್ಟು ?
ಮಹೀಂದ್ರಾ ಎಕ್ಸ್ಯುವಿ 3XO CNG ಮ್ಯಾಕ್ಸ್ ಎಡ್ಜ್ : ರೂ. 9.99 ಲಕ್ಷ
ಮಹೀಂದ್ರಾ ಎಕ್ಸ್ಯುವಿ 3XO CNG ರೇವಾಕ್ಸ್ ಎಡ್ಜ್ (O): ರೂ. 10.79 ಲಕ್ಷ
ಮಹೀಂದ್ರಾ ಎಕ್ಸ್ಯುವಿ 3XO CNG ಎಕ್ಸ್ 5 : ರೂ. 11.19 ಲಕ್ಷ
ಮಹೀಂದ್ರಾ ಎಕ್ಸ್ಯುವಿ 3XO CNG ರೇವಾಕ್ಸ್X A: ರೂ. 12.27 ಲಕ್ಷ
Topics
ಸಂಬಂಧಿತ ಸುದ್ದಿಗಳು
automobile
165 ಕಿಮೀ ರೇಂಜ್, 1 ಲಕ್ಷಕ್ಕೂ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪ್ರಾರಂಭ ! 6 ಬಣ್ಣಗಳ ಆಯ್ಕೆ, ದೊಡ್ಡದಾದ ಡಿಕ್ಕಿ ಇದರ ವೈಶಿಷ್ಟ್ಯ!
automobile
tata aeris car : ಕೇವಲ 5.90 ಲಕ್ಷಕ್ಕೆ ಟಾಟಾ ಏರಿಸ್ , ಫೀಚರ್ಸ್ ಕೇಳಿದ್ರೆ ಫಿದಾ ಆಗೋದು ಪಕ್ಕಾ
automobile
3 ಕಾರುಗಳನ್ನು ಆಟೋಮೆಟಿಕ್ ಸಿಎನ್ಜಿ ಯಲ್ಲಿ ಲಾಂಚ್ ಮಾಡಿದ ಮಾರುತಿ ! ಬೆಲೆ, ಮೈಲೇಜ್ಗೆ ಫಿದಾ ಆದ ಗ್ರಾಹಕರು!
automobile

