businessಪ್ರಮುಖ ಸುದ್ದಿಗಳು

New BPL Card : ಹೊಸ ಬಿಪಿಎಲ್ ಕಾರ್ಡ್‌ಗೆ ಕಾಯುತ್ತಿರುವವರಿಗೆ ಗುಡ್‌ನ್ಯೂಸ್‌ : ಅರ್ಜಿ ಸಲ್ಲಿಕೆ ಯಾವಾಗ ? ಇಲ್ಲಿದೆ ಮಾಹಿತಿ

By Arun Gundmi | ಅರುಣ್‌ ಗುಂಡ್ಮಿ · Editor-in-Chief

2 min read

WhatsAppPost
new bpl card application karnataka updates
new bpl card application karnataka updates

ಕರ್ನಾಟಕದಲ್ಲಿ ಹೊಸ ಬಿಪಿಎಲ್ (BPL - Below Poverty Line) ಕಾರ್ಡ್‌ಗಳಿಗಾಗಿ ಕಾದು ಕುಳಿತಿರುವ ಕುಟುಂಬಗಳಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಪಂಚ ಗ್ಯಾರಂಟಿ ಯೋಜನೆ ಘೋಷಣೆಯ ಬೆನ್ನಲ್ಲೇ ಬಿಪಿಎಲ್‌ ಕಾರ್ಡುಗಳಿಗೆ ಭರ್ಜರಿ ಡಿಮ್ಯಾಂಡ್‌ ಬಂದಿತ್ತು. ಆದ್ರೆ ಅನರ್ಹತೆಯ ಕಾರಣ ನೀಡಿ ಲಕ್ಷಾಂತರ ಬಿಪಿಎಲ್‌ ಕಾರ್ಡುಗಳನ್ನು ಸರಕಾರ ರದ್ದುಗೊಳಿಸಿದೆ. ಆದ್ರೀಗ ಮತ್ತೆ ಹೊಸದಾಗಿ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸೋದಕ್ಕೆ ಸರಕಾರ ಅವಕಾಶ ಕಲ್ಪಿಸಿದೆ.

ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಗೆ ಸರಕಾರದಿಂದ ಸಿಗುವ ಉಚಿತ ಆರೋಗ್ಯ ಸೇವೆ, ಪಡಿತರ ಸೌಲಭ್ಯ ಪಡೆಯೋದಕ್ಕೆ ಬಿಪಿಎಲ್‌ ಕಾರ್ಡ್‌ ಅತ್ಯಗತ್ಯ. ಆದರೆ ಬಿಪಿಎಲ್‌ ಕಾರ್ಡ್‌ ಪಡೆಯೋದಕ್ಕೆ ನಿರ್ದಿಷ್ಠವಾಗಿರುವ ಮಾನದಂಡವಿದೆ.

ಹೊಸ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆಯೇ ?

ಕರ್ನಾಟಕ ಸರಕಾರ ಬಿಪಿಎಲ್‌ ಕಾರ್ಡ್‌ಗಳನ್ನು ನೀಡೋದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸೋದಕ್ಕೆ ಇದುವರೆಗೂ ಅವಕಾಶ ನೀಡಿಲ್ಲ. ಹಳೆಯ ಕಾರ್ಡುಗಳ ಪರಿಶೀಲನೆ ಜೊತೆಗೆ ಈಗಾಗಲೇ ಸಲ್ಲಿಕೆ ಆಗಿರುವ ಹೊಸ ಅರ್ಜಿಗಳ ವಿಲೇವಾರಿ ಆದ ನಂತರದಲ್ಲಿ ಹೊಸ ಬಿಪಿಎಲ್‌ ಕಾರ್ಡ್‌ಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಬಿಪಿಎಲ್‌ ಕಾರ್ಡ್‌ ವಿತರಣೆಯನ್ನು ಸರಕಾರ ಆರಂಭಿಸಲು ಮುಂದಾದ್ರೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಲಿದ್ದು, ಸರಕಾರ ಈ ಕುರಿತು ಶೀಘ್ರದಲ್ಲಿಯೇ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ.

ಹೊಸ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು ?

ರಾಜ್ಯ ಸರಕಾರ ಹೊಸ ಬಿಪಿಎಲ್‌ ಕಾರ್ಡ್‌ಗಳಿಗೆ ಹೊಸದಾಗಿ ಅರ್ಜಿಯನ್ನು ಆಹ್ವಾನಿಸಿದಾಗ ಸಾರ್ವಜನಿಕರು ಈ ಕೆಳಗಿನ ದಾಖಲೆಗಳನ್ನು ಸಿದ್ದವಾಗಿ ಇಟ್ಟುಕೊಳ್ಳುವುದು ತೀರಾ ಅತ್ಯಗತ್ಯ.

  • ಆಧಾರ್ ಕಾರ್ಡ್: ಬಿಪಿಎಲ್‌ ಕಾರ್ಡ್‌ ಪಡೆಯೋದಕ್ಕೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ಗಳು ಕಡ್ಡಾಯ. ಅಲ್ಲದೇ ಎಲ್ಲರ ಮೊಬೈಲ್‌ ನಂಬರ್‌ ಆದಾರ್‌ ಕಾರ್ಡ್‌ ಜೊತೆಗೆ ಜೋಡಣೆ ಆಗಿರಬೇಕು.

  • ವಿಳಾಸದ ದೃಢೀಕರಣ: ಒಂದೊಮ್ಮೆ ನೀವು ಬಾಡಿಗೆ ಮನೆಯಲ್ಲಿ ಇದ್ದರೆ, ಬಾಡಿಗೆ ಮನೆಯ ಕರಾರು ಪತ್ರ. ವೋಟರ್‌ ಐಡಿ, ಸ್ವತಃ ಮನೆಯಾಗಿದ್ದ ಅಧಿಕೃತ ವಿಳಾಸದ ದಾಖಲೆ ಅತ್ಯಗತ್ಯ.

  • ಆದಾಯ ಪ್ರಮಾಣ ಪತ್ರ (Income Certificate): ಕುಟುಂಬದ ವಾರ್ಷಿಕ ಆದಾಯವನ್ನು ತೋರಿಸಲು ತಹಶೀಲ್ದಾರ್‌ ಕಚೇರಿಯಿಂದ ಪಡೆದಿರುವ ಅಧಿಕೃತ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.

  • ಪಾಸ್‌ಪೋರ್ಟ್ ಅಳತೆಯ ಫೋಟೋಗಳು : ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸೋದಕ್ಕೆ ಕುಟುಂಬದ ಮುಖ್ಯಸ್ಥರ ಜೊತೆಗೆ ಇತರ ಸದಸ್ಯರ ಪೋಟೋ ಕಡ್ಡಾಯ.

  • ಮೊಬೈಲ್ ಸಂಖ್ಯೆ: ಹೊಸದಾಗಿ ಕಾರ್ಡ್‌ಗೆ ಅರ್ಜಿ ಸಲ್ಲಿಸಿದಾಗ ಮೊಬೈಲ್‌ ಸಂಖ್ಯೆಗೆ ಒಟಿಪಿ (OTP) ಬರುತ್ತದೆ. ಹೀಗಾಗಿ ಆಧಾರ್‌ ಜೊತೆಗೆ ಜೋಡಣೆ ಆಗಿರುವ ಮೊಬೈಲ್‌ ಅನ್ನು ಸಿದ್ದವಾಗಿಟ್ಟುಕೊಳ್ಳಿ.

ಬಿಪಿಎಲ್‌ ಕಾರ್ಡ್‌ ಪಡೆಯೋದಕ್ಕೆ ಯಾರು ಅರ್ಹರು ?

ಕರ್ನಾಟಕ ಸರಕಾರ ಬಿಪಿಎಲ್‌ ಕಾರ್ಡುಗಳನ್ನು ಪಡೆಯೋದಕ್ಕೆ ಕೆಲವೊಂದು ಮಾನದಂಡಗಳನ್ನು ಪ್ರಕಟಿಸಿದೆ. ಬಡತನ ರೇಖೆಗಿಂತ ಕೆಳಗೆ ಇರುವವರು. ಆರ್ಥಿಕವಾಗಿ ತೀರಾ ಹಿಂದುಳಿದವರು, ಸರಕಾರದ ಮಾನದಂಡದ ಅಡಿಯಲ್ಲಿ ಬರುವ ಕುಟುಂಬಗಳು ಮಾತ್ರವೇ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸೋದಕ್ಕೆ ಅರ್ಹರು.

ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು. ದೊಡ್ಡ ಪ್ರಮಾಣದಲ್ಲಿ ಆಸ್ತಿ ಹೊಂದಿರುವವರು ಬಿಪಿಎಲ್‌ ಕಾರ್ಡ್‌ ಪಡೆಯೋದಕ್ಕೆ ಅನರ್ಹರಾಗಿದ್ದಾರೆ. ಕರ್ನಾಟಕದಲ್ಲಿ ಸದ್ಯ ಅನರ್ಹ ಬಿಪಿಎಲ್‌ ಕಾರ್ಡ್‌ಗಳ ವಿರುದ್ದ ಈಗಾಗಲೇ ಸರಕಾರ ಸಮರ ಸಾರಿದ್ದು, ಅನರ್ಹರು ಕಾರ್ಡುಗಳನ್ನು ಪಡೆದರೆ ಅದು ರದ್ದಾಗಲಿದೆ.

ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

ಕರ್ನಾಟಕ ಸರಕಾರ ಅಧಿಕೃತವಾಗಿ ಬಿಪಿಎಲ್‌ ಕಾರ್ಡ್‌ ಹಂಚಿಕೆಯ ಕುರಿತು ಅಧಿಸೂಚನೆ ಹೊರಡಿಸಿದ ನಂತರದಲ್ಲಿ ಅಧಿಕೃತವಾಗಿ ವೆಬ್‌ಸೈಟ್‌ ಮೂಲಕ, ಹೊಸ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸೋದಕ್ಕೆ ಅವಕಾಶವಿದೆ. ಕರ್ನಾಟಕದ ನಿವಾಸಿಗಳು ಆಹಾರ ಮತ್ತು ನಾಗರಾಜ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (Aahaara Portal) ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

ನಿ್ಮ್ಮ ಹತ್ತಿರದ ಗ್ರಾಮ ಒನ್‌, ಬೆಂಗಳೂರು ಒನ್‌ ಅಥವಾ ಕರ್ನಾಟಕ ಒನ್‌ ಕೇಂದ್ರಗಳ ಮೂಲಕವೂ ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬಿಪಿಎಲ್‌ ಕಾರ್ಡ್‌ ವಿಚಾರದಲ್ಲಿ ಇವುಗಳನ್ನು ನೆನಪಿಡಿ

ಬಿಪಿಎಲ್‌ ಕಾರ್ಡ್‌ಗೆ ಹೊಸದಾಗಿ ರಾಜ್ಯ ಸರಕಾರ ಅರ್ಜಿಯನ್ನು ಆಹ್ವಾನಿಸಿಲ್ಲ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮಾತುಗಳಿಗೆ ಕಿವಿಗೊಡದೆ, ನಕಲಿ ವೆಬ್‌ಸೈಟ್‌ ಗಳನ್ನು ನಂಬದೆ, ಕೇವಲ ಸರಕಾರದ ಅಧಿಕೃತ ಪ್ರಕಟಣೆ, ಅಧಿಕೃತ ಜಾಲತಾಣಗಳ ಮೂಲಕ ಪ್ರಕಟವಾಗುವ ಮಾಹಿತಿಗಳನ್ನು ಪಡೆದುಕೊಳ್ಳಿ.

ಕರ್ನಾಟಕ ಸರಕಾರ ಅತೀ ಶೀ್ಘ್ರದಲ್ಲಿಯೇ ಹೊಸ ಬಿಪಿಎಲ್‌ ಕಾರ್ಡುಗಳ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅರ್ಹರು ಇದಕ್ಕಾಗಿ ತಮ್ಮ ದಾಖಲೆಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

Topics

ಸಂಬಂಧಿತ ಸುದ್ದಿಗಳು